'ಸೌತ್ ಇಂಡಿಯನ್ ಹೀರೋ' ಚಿತ್ರ ಸೂಪರ್‌ಸ್ಟಾರ್‌ನ ಜೀವನದೊಳಗೆ ನಿಮ್ಮನ್ನು ಕರೆದೊಯ್ಯುತ್ತದೆ: ನಿರ್ದೇಶಕ ನರೇಶ್ ಕುಮಾರ್

1st ರ್ಯಾಂಕ್ ರಾಜು ಚಿತ್ರದ ಮೂಲಕ ಮೊದಲ ಪ್ರಯತ್ನದಲ್ಲೇ ಪ್ರೇಕ್ಷಕರ ಮನ ಗೆದ್ದಿದ್ದ ನಿರ್ದೇಶಕ ನರೇಶ್ ಕುಮಾರ್ ಶಿಕ್ಷಣದ ಕುರಿತಾದ ಚಿತ್ರದ ಮೂಲಕ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಬಲವಾದ ಸಂದೇಶ ನೀಡಿದ್ದರು. 
ಸೌತ್ ಇಂಡಿಯನ್ ಹೀರೋ ಚಿತ್ರ
ಸೌತ್ ಇಂಡಿಯನ್ ಹೀರೋ ಚಿತ್ರ

ಬೆಂಗಳೂರು: 1st ರ್ಯಾಂಕ್ ರಾಜು ಚಿತ್ರದ ಮೂಲಕ ಮೊದಲ ಪ್ರಯತ್ನದಲ್ಲೇ ಪ್ರೇಕ್ಷಕರ ಮನ ಗೆದ್ದಿದ್ದ ನಿರ್ದೇಶಕ ನರೇಶ್ ಕುಮಾರ್ ಶಿಕ್ಷಣದ ಕುರಿತಾದ ಚಿತ್ರದ ಮೂಲಕ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಬಲವಾದ ಸಂದೇಶ ನೀಡಿದ್ದರು. ಬಳಿಕ ರಾಜು ಕನ್ನಡ ಮೀಡಿಯಂ, ಬಹುಮಟ್ಟಿಗೆ ಜೀವನದ ಪಾಠಗಳ ಸುತ್ತಲಿನ ನಿರೂಪಣೆಯಾಗಿತ್ತು. ಅವರ ಮೂರನೇ ಚಿತ್ರ ಸೌತ್ ಇಂಡಿಯನ್ ಹಿರೋ ಚಿತ್ರ ಸಿನಿಮಾ ಬಗ್ಗೆ ಮತ್ತು ನಿರ್ದಿಷ್ಟವಾಗಿ, ಸೂಪರ್‌ಸ್ಟಾರ್‌ನ ಜೀವನದ ಒಂದು ನೋಟವನ್ನು ನೀಡುತ್ತದೆ ಎನ್ನಲಾಗಿದೆ. 

ಈ ಬಗ್ಗೆ ಮಾತನಾಡಿರುವ ನಿರ್ದೇಶಕ ನರೇಶ್, “ನಿರ್ದೇಶಕನಾಗಿ, ನಾನು ಆಫ್-ಬೀಟ್ ವಿಷಯಗಳಿಗೆ ಆದ್ಯತೆ ನೀಡುತ್ತೇನೆ.. ಆದರೆ ಅದು ಮನರಂಜನೆಯಾಗಿರಬೇಕು. ನಾನು ಜನರನ್ನು ಸೂಕ್ಷ್ಮವಾಗಿ ಗಮನಿಸುತ್ತೇನೆ. ನಿಜ ಜೀವನದ ವಿಷಯಗಳನ್ನು ಆರಿಸಿಕೊಳ್ಳಲು ಮತ್ತು ಅವುಗಳನ್ನು ತೆರೆಯ ಮೇಲೆ ತರಲು ನಾನು ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ.

<strong>ನರೇಶ್ ಕುಮಾರ್</strong>
ನರೇಶ್ ಕುಮಾರ್

ಇನ್ನು ಚಿತ್ರದ ಕುರಿತು ಮಾತನಾಡಿದ ನರೇಶ್, ಸೌತ್ ಇಂಡಿಯನ್ ಹೀರೋ ಚಿತ್ರ ಯಾವುದೇ ನಿರ್ಧಿಷ್ಟ ವ್ಯಕ್ತಿ ಅಥವಾ ನಟರನ್ನು ಆಧರಿಸಿದ್ದಲ್ಲ..ಆದರೆ ಬಹು ಸಿನಿಮಾ ವ್ಯಕ್ತಿಗಳ ಬಗ್ಗೆ ವಿವಿಧ ನಿರೂಪಣೆಗಳ ಪರಾಕಾಷ್ಠೆಯಾಗಿದೆ. ನನ್ನ ಕಥೆಯಲ್ಲಿ ಹಳ್ಳಿಯೊಂದರ ಸಾಮಾನ್ಯ ಮನುಷ್ಯನು, ನಟನಾಗಲು ಹಂಬಲಿಸುತ್ತಾನೆ ಮತ್ತು ಅಂತಿಮವಾಗಿ ಹೇಗೆ ಸೂಪರ್‌ಸ್ಟಾರ್ ಆಗುತ್ತಾನೆ ಎಂಬುದನ್ನು ನನ್ನ ಗ್ರಹಿಕೆಯಲ್ಲಿ ಸೆರೆಹಿಡಿದಿದ್ದೇನೆ. ಅಂತೆಯೇ ಸೂಪರ್‌ಸ್ಟಾರ್ ಆದ ನಂತರ ಅವರ ಜೀವನದ ಬಗ್ಗೆಯೂ ಚಿತ್ರಣ ಇರಲಿದೆ ಎಂದು ಹೇಳಿದ್ದಾರೆ. 

ಈ ಚಿತ್ರದಲ್ಲಿ ಫ್ಯಾನ್ಸ್ ವಾರ್, ನಟನ ಆಫ್‌ಸ್ಕ್ರೀನ್ ವ್ಯಕ್ತಿತ್ವ, ಅವರ ಮಾನಸಿಕ ಆರೋಗ್ಯ, ಅವರ ತಾತ್ವಿಕ ಭಾಗ ಮತ್ತು ಜೀವನಶೈಲಿಯನ್ನು ಎತ್ತಿ ತೋರಿಸಲಾಗಿದೆ. ಕುತೂಹಲಕಾರಿಯಾಗಿ, ನರೇಶ್ ಈ ಚಿತ್ರದಲ್ಲಿ ಹೊಸಬರನ್ನು ಆಯ್ಕೆ ಮಾಡಿದ್ದಾರೆ. ಈ ಬಗ್ಗೆ ಸಮರ್ಥನೆ ಕೂಡ ನೀಡಿರುವ ನಿರ್ದೇಶಕ ನರೇಶ್ “ಈಗಾಗಲೇ ಪರಿಚಿತ ನಟರನ್ನು ಕರೆತರುವುದು ನನ್ನ ಸ್ಕ್ರಿಪ್ಟ್ ಗೆ ಸಮಂಜಸವಾಗಿಲ್ಲ ಎನಿಸಿತು. ಅದಕ್ಕಾಗಿಯೇ ನಾನು ಸಾರ್ಥಕ್ ಅವರನ್ನು ಆಯ್ಕೆ ಮಾಡಿದೆ. ಅವರು ಟೆಲಿ ಧಾರಾವಾಹಿಗಳಲ್ಲಿ ಕೆಲಸ ಮಾಡಿದ್ದಾರೆ.. ಈ ಚಿತ್ರವು ಅವರ ದೊಡ್ಡ ಪರದೆಯ ಚೊಚ್ಚಲತೆಯನ್ನು ಸೂಚಿಸುತ್ತದೆ.. ಈ ಪಾತ್ರ ನಿಭಾಯಿಸುವ ಸಾಮರ್ಥ್ಯ ಸಾರ್ಥಕ್ ಅವರಲ್ಲಿದೆ. ಸಾರ್ಥಕ್ ಅವರ ಲಾಜಿಕ್ ಲಕ್ಷ್ಮಣ್ ರಾವ್ ಪಾತ್ರವು ಸುಮಾರು 20 ವಿಭಿನ್ನ ಛಾಯೆಗಳನ್ನು ಹೊಂದಿದೆ ಎಂದು ಹೇಳಿದ್ದಾರೆ.

ಚಿತ್ರದಲ್ಲಿ ಕಾಶಿಮಾ ರಫಿ ಮತ್ತು ಊರ್ವಶಿ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಸೌತ್ ಇಂಡಿಯನ್ ಹೀರೋನಲ್ಲಿ ಯೋಗರಾಜ್ ಭಟ್ ಅವರು ವಿಜಯ್ ಚೆಂಡೂರ್, ಅಶ್ವಿನ್ ಪಾಲಕ್ಕಿ, ಅಮಿತ್, ಅಶ್ವಿನ್ ಕೊಡಂಗೆ ಮತ್ತು ಚಿತ್ಕಲಾ ಬಿರಾದಾರ್ ಅವರೊಂದಿಗೆ ನಿರ್ದೇಶಕರ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ರಿಯಾಂಶಿ ಫಿಲ್ಮ್ಸ್ ಅಡಿಯಲ್ಲಿ ಶಿಲ್ಪಾ ಎಲ್ಎಸ್ ಅವರ ಬೆಂಬಲದೊಂದಿಗೆ, ಸೌತ್ ಇಂಡಿಯನ್ ಹೀರೋಗೆ ಪ್ರವೀಣ್ ಮತ್ತು ರಾಜಶೇಖರ್ ಅವರ ಛಾಯಾಗ್ರಹಣವಿದೆ ಮತ್ತು ಹರ್ಷ ವರ್ಧನ್ ರಾಜ್ ಮತ್ತು ಅನಿಲ್ ಸಿಜೆ ಅವರ ಸಂಗೀತವಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com