'ಪ್ರೇಮಿಗಳ ಗಮನಕ್ಕೆ' ಸಿನಿಮಾದಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 6 ವಿಜೇತ ಶಶಿ ಕುಮಾರ್
ಬಿಗ್ ಬಾಸ್ ಕನ್ನಡ ಸೀಸನ್ 6 ವಿಜೇತ, ಕೃಷಿಕ ಮತ್ತು ನಟ ಶಶಿಕುಮಾರ್ ಅವರು ಕೊನೆಯದಾಗಿ ಮೆಹಬೂಬಾ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಕನ್ನಡ-ತಮಿಳು ದ್ವಿಭಾಷಾ ಚಿತ್ರಕ್ಕೆ ಸಹಿ ಹಾಕಿದ್ದಾರೆ.
Published: 07th January 2023 01:24 PM | Last Updated: 07th January 2023 02:05 PM | A+A A-

ಬಿಗ್ ಬಾಸ್ ಕನ್ನಡ ಸೀಸನ್ 6 ವಿಜೇತ ಮತ್ತು ನಟ ಶಶಿಕುಮಾರ್
ಬಿಗ್ ಬಾಸ್ ಕನ್ನಡ ಸೀಸನ್ 6 ವಿಜೇತ, ಕೃಷಿಕ ಮತ್ತು ನಟ ಶಶಿಕುಮಾರ್ ಅವರು ಕೊನೆಯದಾಗಿ ಮೆಹಬೂಬಾ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಕನ್ನಡ-ತಮಿಳು ದ್ವಿಭಾಷಾ ಚಿತ್ರಕ್ಕೆ ಸಹಿ ಹಾಕಿದ್ದಾರೆ.
ಕನ್ನಡದಲ್ಲಿ 'ಪ್ರೇಮಿಗಳ ಗಮನಕ್ಕೆ' ಎಂಬ ಶೀರ್ಷಿಕೆಯನ್ನು ಒಳಗೊಂಡಿರುವ ಈ ಚಿತ್ರವು ಹೆಚ್ಚಾಗಿ ಚೆನ್ನೈನ ತಂತ್ರಜ್ಞರನ್ನು ಒಳಗೊಂಡಿದೆ ಮತ್ತು ವಿನ್ಸೆಂಟ್ ಇನ್ಬರಾಜ್ ಅವರು ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ.
ಆಧುನಿಕ ಕಾಲಘಟ್ಟದಲ್ಲಿನ ಯುವಕರು ಮತ್ತು ಅವರ ಸಂಬಂಧಗಳ ಸುತ್ತ ಸುತ್ತುವ ಕಥೆಯನ್ನು ಸಿನಿಮಾ ಒಳಗೊಂಡಿದ್ದು, ಇದು ಕಥೆಯ ಮೇಲೆ ಕೇಂದ್ರೀಕೃತವಾಗಿರುತ್ತದೆ ಎನ್ನುತ್ತಾರೆ ನಟ ಶಶಿ ಕುಮಾರ್
ಸುಬು ಬೆಂಬಲದೊಂದಿಗೆ ಚಿತ್ರದ ಒಂದು ಹಂತದ ಚಿತ್ರೀಕರಣ ಪೂರ್ಣಗೊಂಡಿದೆ. ಅರುಣ್ ಸೆಲ್ವನ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಈ ಸಿನಿಮಾದ ಹೊರತಾಗಿ ಶಶಿಕುಮಾರ್ ಮುಂಬರುವ ಚಿತ್ರ 'ಶುಗರ್ ಫ್ಯಾಕ್ಟರಿ'ಯಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.