ಕಿಶೋರ್
ಕಿಶೋರ್

'ಮತಾಂಧ ಗೂಂಡಾಗಿರಿ, ದ್ವೇಷದ ಬೆಂಕಿ ಸ್ಥಳೀಯ ಚಿತ್ರೋದ್ಯಮಗಳಿಗೂ ಹರಡುವ ಮುನ್ನ...ಬಾಲಿವುಡ್ ಪರ ನಿಲ್ಲುವ ಕಾಲ ಬಂದಿದೆ- ನಟ ಕಿಶೋರ್'

ತೆರೆಗೆ ಬರಲು ಸಜ್ಜಾಗಿರುವ ಶಾರುಖ್ ಖಾನ್‌ ಅವರ 'ಪಠಾಣ್‌' ಸಿನಿಮಾದ ವಿರುದ್ಧವು ಬಾಯ್ಕಾಟ್‌ ಅಭಿಯಾನ ಜೋರಾಗಿದೆ. ಈ ಮಧ್ಯೆ ಬಹುಭಾಷಾ ನಟ ಕಿಶೋರ್‌ ಅವರು ಬಾಲಿವುಡ್‌ಗೆ ಸಪೋರ್ಟ್ ಮಾಡಿ ಒಂದು ಪೋಸ್ಟ್ ಹಾಕಿದ್ದಾರೆ.

ಬೆಂಗಳೂರು: ತೆರೆಗೆ ಬರಲು ಸಜ್ಜಾಗಿರುವ ಶಾರುಖ್ ಖಾನ್‌ ಅವರ 'ಪಠಾಣ್‌' ಸಿನಿಮಾದ ವಿರುದ್ಧವು ಬಾಯ್ಕಾಟ್‌ ಅಭಿಯಾನ ಜೋರಾಗಿದೆ. ಈ ಮಧ್ಯೆ ಬಹುಭಾಷಾ ನಟ ಕಿಶೋರ್‌ ಅವರು ಬಾಲಿವುಡ್‌ಗೆ ಸಪೋರ್ಟ್ ಮಾಡಿ ಒಂದು ಪೋಸ್ಟ್ ಹಾಕಿದ್ದಾರೆ.

ನಟ ಸುನಿಲ್ ಶೆಟ್ಟಿ ಹೇಳಿಕೆಯನ್ನು ಶೇರ್ ಮಾಡಿರುವ  ಕಿಶೋರ್ ಬಾಲಿವುಡ್ ಪರ ನಿಲ್ಲುವ ಸಮಯ ಬಂದಿದೆ ಎಂದು ಹೇಳಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ದೀರ್ಘವಾದ ಪೋಸ್ಟ್ ಮಾಡಿದ್ದಾರೆ. 'ಇಡೀ ದೇಶದ ಚಿತ್ರರಂಗ ಒಕ್ಕೊರಲಿನಿಂದ ಬಾಲಿವುಡ್ ನ ವಿರುದ್ಧ ನಡೆಯುತ್ತಿರುವ ಬಾಯ್ಕಾಟ್ ಟ್ರೆಂಡನ್ನು, ಮತಾಂಧ ಗೂಂಡಾಗಿರಿಯನ್ನು, ದ್ವೇಷದ ರಾಜಕೀಯವನ್ನು ಖಂಡಿಸಿ ಬಾಲಿವುಡ್ ನ ಪರವಾಗಿ ನಿಲ್ಲುವ ಕಾಲ ಬಂದಿದೆ' ಎಂದು ಹೇಳಿದ್ದಾರೆ.

ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದಲ್ಲಿ ಒಂದು ವ್ಯಾಪಾರ ಅಥವಾ ಉದ್ಯಮದ ಸುರಕ್ಷತೆಯನ್ನು ಖಚಿತಪಡಿಸಲು ಸಾಧ್ಯವಾಗದಿರುವುದು ಸರ್ಕಾರಗಳ ವೈಫಲ್ಯಕ್ಕೆ ಸಾಕ್ಷಿ. ಇಷ್ಟಾದರೂ ಚಿತ್ರರಂಗದವರು ಮಾತನಾಡದೇ ಕೂತಿರುವ ಹೆದರಿಕೆಯ ವಾತಾವರಣ ಸೃಷ್ಟಿಯಾಗಿರುವುದು, ಕಾನೂನು ಸುವ್ಯವಸ್ಥೆಯ ಜವಾಬ್ದಾರಿ ಹೊತ್ತ ಸರ್ಕಾರಿ ಅಧಿಕಾರಿಗಳಿಗೆ ನಾಚಿಕೆಗೇಡಿನ ಸಂಗತಿ. ಇದು ಸಮಾಜವನ್ನು ವಿಷಪೂರಿತಗೊಳಿಸುವ ಸ್ಪಷ್ಟ ಕಾನೂನು ಉಲ್ಲಂಘನೆಯಾಗಿದ್ದು, ಇದನ್ನು ತಡೆಯಬೇಕಿದೆ, ಶಿಕ್ಷಿಸಬೇಕಾಗಿದೆ. ದ್ವೇಷದ ಈ ಬೆಂಕಿ ಸ್ಥಳೀಯ ಚಿತ್ರೋದ್ಯಮಗಳಿಗೂ ವ್ಯಾಪಿಸುವ ಮುನ್ನ' ಎಂದು ಹೇಳಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com