ಜಯತೀರ್ಥ ಜಯಣ್ಣ- ಧನ್ವೀರ್ ಜೋಡಿಯ 'ಕೈವ' ಚಿತ್ರೀಕರಣ ಪೂರ್ಣ

ಬನಾರಸ್ ನಿರ್ದೇಶಕ ಜಯತೀರ್ಥ ಜಯಣ್ಣ-ನಟ ಧನ್ವೀರ್ ಜೋಡಿಯ ಕೈವ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ.
ಕೈವ ಚಿತ್ರ ತಂಡ
ಕೈವ ಚಿತ್ರ ತಂಡ

ಬನಾರಸ್ ನಿರ್ದೇಶಕ ಜಯತೀರ್ಥ ಜಯಣ್ಣ-ನಟ ಧನ್ವೀರ್ ಜೋಡಿಯ ಕೈವ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ.

ಕೈವ ಚಿತ್ರದ ಚಿತ್ರೀಕರಣವನ್ನು ಬೆಂಗಳೂರಿನ ತಿಗಳರಪೇಟೆಯಲ್ಲಿ ಪೂರ್ಣಗೊಳಿಸಲಾಗಿದೆ. ಕೈವ ಕರಗ ಉತ್ಸವದ ಕುರಿತಾಗಿದ್ದು, ಜಯತೀರ್ಥ ಅವರು ಚಿತ್ರದಲ್ಲಿ ಅಪರಾಧ ಮತ್ತು ಪ್ರೀತಿಯ ಅಂಶಗಳನ್ನು ಹೆಣೆದಿದ್ದಾರೆ.

ಈ ಚಿತ್ರದಲ್ಲಿ ಧನ್ವೀರ್ ನಾಯಕನಾಗಿ ನಟಿಸಿದ್ದಾರೆ, ಚಿತ್ರಕ್ಕೆ 80 ರ ದಶಕದ ಸೆಟ್'ನ್ನು ಹಾಕಲಾಗಿತ್ತು. ಚಿತ್ರದಲ್ಲಿ ಮೇಘಾ ನಾಯಕ ನಟಿಯಾಗಿ ಕಾಣಿಸಿಕೊಡಿದ್ದಾರೆ.

ಧಾರಾವಾಹಿಯಿಂದ ಸ್ಯಾಂಡಲ್ವುಡ್'ಗೆ ಎಂಟ್ರಿಕೊಟ್ಟಿದ್ದ ಮೇಘಾ ಅವರು, ಈಗಾಗಲೇ ಟ್ರಿಬಲ್ ರೈಡಿಂಗ್ ಮತ್ತು ದಿಲ್ ಪಸಂದ್ ಚಿತ್ರಗಳಲ್ಲಿ ನಟಿಸಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ಕೈವಾ ಅವರ ಮೂರನೇ ಚಿತ್ರವಾಗಿದೆ.

ಕೈವಾ ಚಿತ್ರ ಇದೀಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ಬಿಡುಗಡೆ ದಿನಾಂಕ ಶೀಘ್ರದಲ್ಲೇ ಹೊರಬೀಳುವ ನಿರೀಕ್ಷೆಯಿದೆ. ಕಾಂತಾರ ಸಂಗೀತ ಸಂಯೋಜಕ ಅಜನೇಶ್ ಲೋಕನಾಥ್ ಇವರು ಈ ಚಿತ್ರಕ್ಕೆ ಸಂಗೀತ ನೀಡಿದ್ದು, ಚಿತ್ರದ ಛಾಯಾಗ್ರಹಣವನ್ನು ಶ್ವೇತ್ ಪ್ರಿಯಾ ನಾಯಕ್ ನಿರ್ವಹಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com