ಬಿಡುಗಡೆಗೂ ಮುನ್ನವೇ ದಾಖಲೆ ಬರೆದ ನಟ ಧನಂಜಯ್ ಅವರ 'ಹೊಯ್ಸಳ' ಚಿತ್ರ
ಧನಂಜಯ್ ಅವರ 25ನೇ ಚಿತ್ರ ಹೊಯ್ಸಳ ಸಿನಿಮಾಗೆ ವಿಶೇಷ ಎನ್ನುವಂತದ್ದೇ ನಡೆಯುತ್ತಿದೆ. ಮಾರ್ಚ್ 30 ರಂದು ಬಿಡುಗಡೆಯಾಗಲಿರುವ ಈ ಚಿತ್ರವು ತನ್ನ ಆಡಿಯೋ ಆಲ್ಬಂನೊಂದಿಗೆ ಸ್ವಲ್ಪ ಸದ್ದು ಮಾಡುತ್ತಿದೆ.
Published: 30th January 2023 01:17 PM | Last Updated: 30th January 2023 05:38 PM | A+A A-

ಹೊಯ್ಸಳ ಸಿನಿಮಾದ ಪೋಸ್ಟರ್ಸ್
ಧನಂಜಯ್ ಅವರ 25ನೇ ಚಿತ್ರ ಹೊಯ್ಸಳ ಸಿನಿಮಾಗೆ ವಿಶೇಷ ಎನ್ನುವಂತದ್ದೇ ನಡೆಯುತ್ತಿದೆ. ಮಾರ್ಚ್ 30 ರಂದು ಬಿಡುಗಡೆಯಾಗಲಿರುವ ಈ ಚಿತ್ರವು ತನ್ನ ಆಡಿಯೋ ಆಲ್ಬಂನೊಂದಿಗೆ ಸ್ವಲ್ಪ ಸದ್ದು ಮಾಡುತ್ತಿದೆ.
ಆನಂದ್ ಆಡಿಯೋ ದಾಖಲೆ ಬೆಲೆಗೆ ಚಿತ್ರದ ಆಡಿಯೋ ರೈಟ್ಸ್ ಅನ್ನು ಪಡೆದುಕೊಂಡಿದೆ. ಇದು ಧನಂಜಯ್ ಅವರ ವೃತ್ತಿಜೀವನದ ಸಿನಿಮಾಗಳ ಪೈಕಿಯೇ ಅಧಿಕ ಬೆಲೆಗೆ ಮಾರಾಟವಾಗಿದೆ ಎಂದು ಹೇಳಲಾಗುತ್ತಿದೆ.
ಬರಹಗಾರ-ನಿರ್ದೇಶಕ ವಿನಯ್ ಎನ್ ಅವರ ಚೊಚ್ಚಲ ಚಿತ್ರವಾಗಿರುವ ಹೊಯ್ಸಳ ಚಿತ್ರಕ್ಕೆ ಅಜನೀಶ್ ಲೋಕನಾಥ್ ಅವರ ಸಂಗೀತವಿದೆ. ರತ್ನನ್ ಪ್ರಪಂಚ ನಂತರ ಕೆಆರ್‌ಜಿ ಸ್ಟುಡಿಯೋಸ್‌ನೊಂದಿಗೆ ನಟ ಧನಂಜಯ ಅವರ ಎರಡನೇ ಚಿತ್ರ ಇದಾಗಿದೆ.
ಇದನ್ನೂ ಓದಿ: 'ಹಿಂದೆ ನನ್ನ ಬೈದವರೆಲ್ಲ ಚೆಂದಾಗಿರಲಿ, ಮುಂದೆ ನನ್ನ ಬಯ್ಯುವರೆಲ್ಲ ಅಂದಣವೇರಲಿ, ಕುಂದು ಇಟ್ಟವರೆಲ್ಲ ಕುದುರೆಯ ಕಟ್ಟಿ ಬಾಳಲಿ'
ನಟ ಮತ್ತು ಪ್ರೊಡಕ್ಷನ್ ಹೌಸ್ ಉತ್ತರಾಖಂಡ ಚಿತ್ರಕ್ಕಾಗಿ ನಿರ್ದೇಶಕ ರೋಹಿತ್ ಪದಕಿಯೊಂದಿಗೆ ಕೈಜೋಡಿಸುತ್ತಿದೆ. ಧನಂಜಯ್ ಅವರ ಕನ್ನಡ-ತೆಲುಗು ದ್ವಿಭಾಷಾ ಚಿತ್ರವಾದ ಜೀಬ್ರಾವನ್ನು ಪೂರ್ಣಗೊಳಿಸಿದ ನಂತರ ಉತ್ತರಕಾಂಡ ಸಿನಿಮಾದ ಚಿತ್ರೀಕರಣ ಆರಂಭವಾಗಲಿದೆ. ಚಿತ್ರದಲ್ಲಿ ಸತ್ಯದೇವ್ ಕೂಡ ನಟಿಸಿದ್ದಾರೆ.
ಈ ಮಧ್ಯೆ ಉತ್ತರ ಕರ್ನಾಟಕದಲ್ಲಿ ಸೆಟ್ಟೇರಿರುವ ಹೊಯ್ಸಳ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿವೆ.
ಇದನ್ನೂ ಓದಿ: ಡಾಲಿ ಧನಂಜಯ ನಟನೆಯ 25 ನೇ ಸಿನಿಮಾ 'ಹೊಯ್ಸಳ' ರಿಲೀಸ್ ಡೇಟ್ ಫಿಕ್ಸ್!
ವಿಜಯ್ ಕಿರಗಂದೂರು ಅವರ ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್ ಜಂಟಿಯಾಗಿ ನಿರ್ಮಿಸಿದ್ದಾರೆ. ಹೊಯ್ಸಳ ಸಿನಿಮಾದಲ್ಲಿ ಧನಂಜಯ್ ಅವರೊಂದಿಗೆ ಅಮೃತಾ ಅಯ್ಯಂಗಾರ್ ನಟಿಸಿದ್ದಾರೆ. ಇವರಿಬ್ಬರು ಈ ಹಿಂದೆ ಸೂರಿ ಅವರ ಪಾಪ್‌ಕಾರ್ನ್ ಮಂಕಿ ಟೈಗರ್ ಮತ್ತು ಶಂಕರ್ ಗುರು ಅವರ ಬಡವ ರಾಸ್ಕಲ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.
ಹೊಯ್ಸಳ ಸಿನಿಮಾದ ಪ್ರಮುಖ ತಾರಾಗಣದಲ್ಲಿ ನವೀನ್ ಶಂಕರ್, ಅವಿನಾಶ್ ಬಿಎಸ್, ಮಯೂರಿ ನಟರಾಜ್ ಮತ್ತು ಪ್ರತಾಪ್ ನಾರಾಯಣ್ ಕೂಡ ನಟಿಸಿದ್ದಾರೆ.