ಜಮೀನು ವಿವಾದ: ಸ್ಯಾಂಡಲ್‌ವುಡ್ ನಟಿ ಅನುಗೌಡ ಮೇಲೆ ಹಲ್ಲೆ; ಆಸ್ಪತ್ರೆಗೆ ದಾಖಲು

ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ನಟಿ ಅನುಗೌಡ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆದ ಘಟನೆ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಕಾಸ್ಪಾಡಿ ಗ್ರಾಮದಲ್ಲಿ ನಡೆದಿದೆ.
ಹಲ್ಲೆಗೊಳಗಾದ ಅನು ಗೌಡ
ಹಲ್ಲೆಗೊಳಗಾದ ಅನು ಗೌಡ

ಶಿವಮೊಗ್ಗ: ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ನಟಿ ಅನುಗೌಡ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆದ ಘಟನೆ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಕಾಸ್ಪಾಡಿ ಗ್ರಾಮದಲ್ಲಿ ನಡೆದಿದೆ.

ಅನುಗೌಡ ತಮ್ಮ ತಂದೆ-ತಾಯಿ ಜೊತೆ ಕಾಸ್ಪಾಡಿಯಲ್ಲಿ ಜಮೀನು ನೋಡಲು ಬೆಂಗಳೂರಿನಿಂದ ಆಗಮಿಸಿದ್ದರು. ಜಮೀನು ವಿಚಾರವಾಗಿ ನೀಲಮ್ಮ ಹಾಗೂ ಮೋಹನ್ ಎಂಬುವವರಿಂದ ಗಲಾಟೆ ನಡೆದಿದ್ದು, ನಟಿ ಅನುಗೌಡ ಮೇಲೆ ಇಬ್ಬರೂ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಗಂಭೀರವಾಗಿ ಗಾಯಗೊಂಡಿರುವ ಅನುಗೌಡ ಸಾಗರ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಮೋಹನ್ ಹಾಗೂ ಆತನ ತಾಯಿ ನೀಲಮ್ಮ ವಿರುದ್ಧ ಸಾಗರ ಠಾಣೆ ಪೊಲೀಸರು ಎಫ್ ಐ ಆರ್ ದಾಖಲಿಸಿದ್ದಾರೆ.

ಅನೇಕ ಚಲನಚಿತ್ರ ಮತ್ತು ಕಿರುತೆರೆಯಲ್ಲಿ ನಟಿ ಅನುಗೌಡ ನಟಿಸಿದ್ದಾರೆ. ಅನುಗೌಡ ಕನ್ನಡ ಚಲನಚಿತ್ರ ರಂಗದಲ್ಲಿ ತಮ್ಮದೇ ಹೆಸರು ಗಳಿಸಿದ್ದಾರೆ. ಮೂಲತಃ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನವರು ಅನು ಗೌಡ. ಆದರೆ ಸಾಗರ ತಾಲೂಕಿನ ಕಾಸ್ಪಾಡಿಯಲ್ಲಿ ಜಮೀನು ಮಾಡಿಕೊಂಡಿದ್ದರು. ಆದರೀಗ ವಿವಾದಲ್ಲಿ ಸಿಲುಕಿದೆ.

ಅನು ಗೌಡ ತಮಿಳಿನಲ್ಲಿ ‘ಮೌನಮಾನ ನೇರಂ’, 'ಕಲಕಲ್, ‘ಶಂಕರ’, ‘ಆಡಾದ ಆಟಮೆಲ್ಲ…’ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇನ್ನೂ ಕನ್ನಡದಲ್ಲಿ 'ಸವಿಸವಿ ನೆನಪು, ಭೂಗತ, ವಿಷ್ಣುವರ್ಧನ್ ಜೊತೆಗೆ ಸ್ಕೂಲ್ ಮಾಸ್ಟರ್, ಸುದೀಪ್‌ ರವರೊಂದಿಗೆ ಕೆಂಪೇಗೌಡ, ರಮ್ಯಾಗೆ ಅಕ್ಕನಾಗಿ ದಂಡಂ ದಶಗುಣಂ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com