
ಸ್ಯಾಂಡಲ್‌ವುಡ್ ನಟ ಶ್ರೀನಗರ ಕಿಟ್ಟಿ ಹುಟ್ಟುಹಬ್ಬದ ನಿಮಿತ್ತ ಸಂಜು ವೆಡ್ಸ್ ಗೀತಾ ಸಿನಿಮಾದ ಪಾರ್ಟ್ 2 ಅಧಿಕೃತ ಘೋಷಣೆ ಮಾಡಿದೆ ಚಿತ್ರತಂಡ.
ಸಂಜು ವೆಡ್ಸ್ ಗೀತಾ ಸಿನಿಮಾದ ಪಾರ್ಟ್ 2 ಘೋಷಣೆಯಾಗುತ್ತಿದ್ದಂತೆ ಸಿನಿಮಾದಲ್ಲಿ ಮೋಹಕ ತಾರೆ ರಮ್ಯಾ ಇರಲಿದ್ದಾರಾ ಎಂಬ ಕುತೂಹಲ ಸಿನಿರಸಿಕರಲ್ಲಿ ಹೆಚ್ಚಾಗಿದೆ. ನವೆಂಬರ್‌ನಿಂದ ಸಂಜು ವೆಡ್ಸ್ ಗೀತಾ-2 ಶೂಟಿಂಗ್ ಶುರುವಾಗಲಿದೆ ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. 2024ರ ದಸರಾ ವೇಳೆಗೆ ರಿಲೀಸ್ ಮಾಡುವ ಗುರಿ ಹೊಂದಿದ್ದಾರೆ.
ಇದನ್ನೂ ಓದಿ: ಗೌಡರ ಹುಡುಗನ್ನ ಹುಡುಕಿ; ಮದ್ವೆ ಆಗ್ತೀನಿ: ನಟಿ ರಮ್ಯಾ
ಈ ಸಿನಿಮಾ ಮಾಡುವ ಆರಂಭದಲ್ಲಿ ಹಣದ ಅಭಾವವೂ ಇತ್ತು. ನಿರ್ಮಾಣದ ಹಿಂದೆ ಒಂದಲ್ಲ ಎರಡಲ್ಲ, ಹಲವು ರೋಚಕ ಕಥೆಗಳಿವೆ ಎಂದು ವೀಕೆಂಡ್ ವಿತ್ ರಮೇಶ್ ಶೋದಲ್ಲಿ ರಮ್ಯಾ ಹೇಳಿಕೊಂಡಿದ್ದರು. ಸಂಜು ವೆಡ್ಸ್ ಗೀತಾ ಚಿತ್ರ ಮತ್ತೆ ಆರಂಭ ಆಗಲು ರಮ್ಯಾ ಹಣ ಕೊಟ್ಟಿದ್ದರಂತೆ. ಬಳಿಕ ಈ ಸಿನಿಮಾ ಸೂಪರ್ ಡೂಪರ್ ಹಿಟ್ ಕೂಡ ಆಯಿತು.
ಸಂಜು ವೆಡ್ಸ್ ಗೀತ ಸಿನಿಮಾ ನಿರ್ದೇಶಿಸಿದ್ದ ನಾಗಶೇಖರ್ ಅವರೇ ಸಂಜು ವೆಡ್ಸ್ ಗೀತಾ 2 ಸಿನಿಮಾವನ್ನು ನಿರ್ದೇಶನ ಮಾಡುವ ಜೊತೆಗೆ ನಿರ್ಮಾಣವನ್ನೂ ಮಾಡುತ್ತಿದ್ದಾರೆ. ಸಂಜು ವೆಡ್ಸ್ ಗೀತಾ ಸಿನಿಮಾ 2011 ರಲ್ಲಿ ಬಿಡುಗಡೆ ಆಗಿತ್ತು. ಅದಾದ 12 ವರ್ಷಗಳ ಬಳಿಕ ಎರಡನೇ ಭಾಗ ಘೋಷಣೆ ಆಗಿದೆ. ರಮ್ಯಾ ಪ್ರೆಸೆಂಟ್ ಎಂದು ಬರೆಯಲಾಗಿದೆ, ಅದರ ಜೊತೆಗೆ 'Lifeee is Beaautiiifullll' ಎಂಬ ಅಡಿಬರಹವಿದೆ.
ಶ್ರೀನಗರ ಕಿಟ್ಟಿ ಅಂತೂ ಸಿನಿಮಾದಲ್ಲಿ ಇರಲಿದ್ದಾರೆ ಅದು ಖಾತ್ರಿ. ಆದರೆ ಈ ಸಿನಿಮಾದಲ್ಲಿ ನಾಯಕಿಯಾಗಿ ರಮ್ಯಾ ಇರಲಿದ್ದಾರಾ ಎಂಬ ಪ್ರಶ್ನೆಗೆ ನಾಗಶೇಖರ್ ಉತ್ತರ ನೀಡಿದ್ದಾರೆ, ರಮ್ಯಾ ಅವರ ಜೊತೆ ಈ ಸಂಬಂಧ ಮಾತನಾಡಲಾಗಿದೆ, ಆದರೆ ಇನ್ನೂ ಅಂತಿಮವಾಗಿಲ್ಲ, ಚರ್ಚೆಯ ಹಂತದಲ್ಲಿದೆ ಎಂದು ತಿಳಿಸಿದ್ದಾರೆ. ರಮ್ಯಾ ಅವರು ಕತೆಯನ್ನು ಒಪ್ಪಿಕೊಳ್ಳುವ ನಿರೀಕ್ಷೆ ಇದೆ. ಒಂದೊಮ್ಮೆ ಅವರು ಒಪ್ಪಿಕೊಳ್ಳದಿದ್ದರೆ ಅವರ ಶುಭಹಾರೈಕೆಯೊಂದಿಗೆ ನಾವು ಸಿನಿಮಾ ಪ್ರಾರಂಭಿಸುತ್ತೇವೆ. ರಮ್ಯಾ ಸದಾ ನಮಗೆ ಒಳ್ಳೆಯದನ್ನೇ ಬಯಸುತ್ತಾರೆ ಎಂದಿದ್ದಾರೆ ನಾಗಶೇಖರ್.
Advertisement