ವಿಕಲಚೇತನ ಬಾಲಕಿ-ಶ್ವಾನದ ನಡುವಿನ ಹೃದಯಸ್ಪರ್ಶಿ ಕಥೆ ಹೇಳಲಿದೆ 'ಯಾವ ಮೋಹನ ಮುರಳಿ ಕರೆಯಿತು'
ಕವಿ ಗೋಪಾಲಕೃಷ್ಣ ಅಡಿಗ ಅವರು ಬರೆದ 'ಯಾವ ಮೋಹನ ಮುರಳಿ ಕರೆಯಿತು' ಹಾಡು ಅಪಾರ ಜನಪ್ರಿಯತೆ ಗಳಿಸಿದೆ. ಈಗ ಈ ಹಾಡಿನಿಂದಲೇ ಚಿತ್ರವೊಂದಕ್ಕೆ ಹೆಸರಿಡಲಾಗಿದೆ. ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಇತ್ತೀಚೆಗಷ್ಟೇ ಚಿತ್ರದ ಟೀಸರ್ ಅನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಗಣ್ಯರ ಸಮ್ಮುಖದಲ್ಲಿ ಬಿಡುಗಡೆ ಮಾಡಿತು.
Published: 06th June 2023 11:01 AM | Last Updated: 06th June 2023 07:37 PM | A+A A-

ಯಾವ ಮೋಹನ ಮುರಳಿ ಕರೆಯಿತು ಸಿನಿಮಾದ ದೃಶ್ಯ
ಕವಿ ಗೋಪಾಲಕೃಷ್ಣ ಅಡಿಗ ಅವರು ಬರೆದ 'ಯಾವ ಮೋಹನ ಮುರಳಿ ಕರೆಯಿತು' ಹಾಡು ಅಪಾರ ಜನಪ್ರಿಯತೆ ಗಳಿಸಿದೆ. ಈಗ ಈ ಹಾಡಿನಿಂದಲೇ ಚಿತ್ರವೊಂದಕ್ಕೆ ಹೆಸರಿಡಲಾಗಿದೆ. ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಇತ್ತೀಚೆಗಷ್ಟೇ ಚಿತ್ರದ ಟೀಸರ್ ಅನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಗಣ್ಯರ ಸಮ್ಮುಖದಲ್ಲಿ ಬಿಡುಗಡೆ ಮಾಡಿತು.
'ಯಾವ ಮೋಹನ ಮುರಳಿ ಕರೆಯಿತು' ಮಾನವ-ಪ್ರಾಣಿಗಳ ಬಾಂಧವ್ಯದ ಹೃದಯಸ್ಪರ್ಶಿ ಕಥೆಯನ್ನು ಹೇಳುತ್ತದೆ. ಕನ್ನಡ ಚಿತ್ರರಂಗವು ಈಗಾಗಲೇ ಶ್ವಾನಗಳ ಸುತ್ತ ಕೇಂದ್ರೀಕೃತವಾಗಿರುವ ಹಲವಾರು ಸಿನಿಮಾಗಳನ್ನು ನೋಡಿದೆ. ಹೀಗಿದ್ದರೂ, ಇದು ತನ್ನ ವಿಶಿಷ್ಟ ನಿರೂಪಣೆಯಿಂದ ಎದ್ದು ಕಾಣುತ್ತದೆ.
ಈ ಚಿತ್ರವು ಭರವಸೆಯ ಹುಡುಕಾಟದಲ್ಲಿರುವ ವಿಕಲಚೇತನ ಬಾಲಕಿಯ ಕಥೆಯನ್ನು ಹೇಳುತ್ತದೆ. ಆಕೆ ತನ್ನ ಪ್ರೀತಿಯ ಶ್ವಾನದೊಂದಿಗೆ ಆ ಹಾದಿಯನ್ನು ದಾಟುತ್ತಾಳೆ. 'ಅವರ ಬಂಧವು ಬಲಗೊಳ್ಳುತ್ತದೆ. ಆದರೆ, ಇನ್ನೊಬ್ಬ ವ್ಯಕ್ತಿ ಅವರ ಜೀವನದಲ್ಲಿ ಪ್ರವೇಶಿಸುತ್ತಾನೆ. ಇದು ಒಂದು ಪ್ರಮುಖ ತಿರುವಿಗೆ ಕಾರಣವಾಗುತ್ತದೆ' ಎಂದು ನಿರ್ದೇಶಕ ವಿಶ್ವಾಸ್ ಕೃಷ್ಣ ವಿವರಿಸುತ್ತಾರೆ.
ಇದೀಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಚಿತ್ರವು ಬಿಡುಗಡೆಗೆ ಸಿದ್ಧವಾಗುತ್ತಿದೆ. 'ಪ್ರೇಕ್ಷಕರು ಮೂರು ಆಕರ್ಷಕ ಹಾಡುಗಳನ್ನು ನಿರೀಕ್ಷಿಸಬಹುದು ಮತ್ತು ಟ್ರೇಲರ್ ಶೀಘ್ರದಲ್ಲೇ ಬರಲಿದೆ' ಎಂದು ನಿರ್ದೇಶಕ ವಿಶ್ವಾಸ್ ಕೃಷ್ಣ ಹೇಳುತ್ತಾರೆ.
ಶರಣಪ್ಪ ಗೌರಮ್ಮ ನಿರ್ಮಿಸಿರುವ ಈ ಚಿತ್ರದಲ್ಲಿ ರಾಕಿ ಎಂಬ ಶ್ವಾನವು ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಜೊತೆಗೆ ಬೇಬಿ ಪ್ರಕೃತಿ, ಮಾಧವ್ ಮತ್ತು ಸ್ವಪ್ನಾ ಶೆಟ್ಟಿಗಾರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಪಟೇಲ್ ವರುಣ್ ರಾಜ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಅನಿಲ್ ಸಿಜೆ ಸಂಗೀತ ಸಂಯೋಜಿಸಿದ್ದಾರೆ.