ಭಗತ್ ಆಳ್ವ-ಲಿಯೋನಿಲ್ಲಾ ಶ್ವೇತಾ ಡಿಸೋಜಾ ನಟನೆಯ ಹೆಜ್ಜಾರು ಸಿನಿಮಾ ಚಿತ್ರೀಕರಣ ಪೂರ್ಣ
13 ಜನಪ್ರಿಯ ಧಾರಾವಾಹಿಗಳ ಮೂಲಕ ಕರ್ನಾಟಕ ಕಿರುತೆರೆ ಉದ್ಯಮದಲ್ಲಿ ಹೆಸರು ಮಾಡಿರುವ ರಾಮ್‌ಜಿಯವರ ಗಗನಾ ಎಂಟರ್‌ಪ್ರೈಸಸ್ ಈಗ 'ಹೆಜ್ಜಾರು' ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಡುತ್ತಿದ್ದು, ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ.
Published: 08th June 2023 10:55 AM | Last Updated: 08th June 2023 08:04 PM | A+A A-

ಹೆಜ್ಜಾರು ಸಿನಿಮಾ ತಂಡ
13 ಜನಪ್ರಿಯ ಧಾರಾವಾಹಿಗಳ ಮೂಲಕ ಕರ್ನಾಟಕ ಕಿರುತೆರೆ ಉದ್ಯಮದಲ್ಲಿ ಹೆಸರು ಮಾಡಿರುವ ರಾಮ್‌ಜಿಯವರ ಗಗನಾ ಎಂಟರ್‌ಪ್ರೈಸಸ್ ಈಗ 'ಹೆಜ್ಜಾರು' ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಡುತ್ತಿದ್ದು, ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ.
ಹೆಸರಾಂತ ಧಾರಾವಾಹಿ ಬರಹಗಾರ ಹಾಗೂ ಟಾಪ್ ಮನರಂಜನಾ ಚಾನೆಲ್ ಒಂದರ ಮಾಜಿ ಫಿಕ್ಷನ್ ಮುಖ್ಯಸ್ಥ ಹರ್ಷಪ್ರಿಯ ಅವರು 'ಹೆಜ್ಜಾರು' ಚಿತ್ರವನ್ನು ನಿರ್ದೇಶಿಸಿದ್ದಾರೆ. ಅಮರ್ ಎಲ್ ಮತ್ತು ಪೂರ್ಣಚಂದ್ರ ತೇಜಸ್ವಿ ಕ್ರಮವಾಗಿ ಛಾಯಾಗ್ರಹಣ ಮತ್ತು ಸಂಗೀತದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ನರಸಿಂಹ ಚಿತ್ರದ ಆಕ್ಷನ್ ಸೀಕ್ವೆನ್ಸ್‌ಗಳಿಗೆ ನಿರ್ದೇಶನ ಮಾಡಿದ್ದರೆ, ಮೋಹನ್ ನೃತ್ಯ ಸಂಯೋಜನೆ ಮಾಡಿದ್ದಾರೆ. ಕಾರ್ತಿಕ್ ಭಟ್ ಚಿತ್ರದ ಸಂಭಾಷಣೆ ಬರೆದಿದ್ದಾರೆ.

ಹೆಜ್ಜಾರು ಹೊಸಬರು ಮತ್ತು ಅನುಭವಿ ಕಲಾವಿದರ ಜೊತೆಗೆ ರಂಗಭೂಮಿ ಹಿನ್ನೆಲೆಯ ನಟರನ್ನು ಒಳಗೊಂಡಿದೆ. ಭಗತ್ ಆಳ್ವ ನಟನಾಗಿ ದೊಡ್ಡ ಪರದೆಗೆ ಪದಾರ್ಪಣೆ ಮಾಡುತ್ತಿದ್ದಾರೆ. ಹಿಂದಿ ಚಿತ್ರ ವೈ ಮತ್ತು ಕನ್ನಡ ಚಿತ್ರ ಖಾಸಗಿ ಪುಟಗಳು ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಲಿಯೋನಿಲ್ಲಾ ಶ್ವೇತಾ ಡಿಸೋಜಾ, ಖಾಸಗಿ ಪುಟಗಳಲ್ಲಿನ ಪಾತ್ರದ ಮೂಲಕ ಜನಮನ್ನಣೆ ಗಳಿಸಿದ್ದಾರೆ.
ತಾರಾಗಣದಲ್ಲಿ ಗೋಪಾಲ್ ದೇಶಪಾಂಡೆ, ನವೀನ್ ಕೃಷ್ಣ, ಮುನಿ ಮತ್ತು ಅರುಣ್ ಬಾಲರಾಜ್ ಅವರಂತಹ ಪ್ರಸಿದ್ಧ ನಟರೂ ಇದ್ದಾರೆ. ಚಿತ್ರ ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದ್ದು, ಶೀಘ್ರದಲ್ಲೇ ಚಿತ್ರತಂಡ ತಮ್ಮ ಪ್ರಚಾರ ಚಟುವಟಿಕೆಗಳನ್ನು ಪ್ರಾರಂಭಿಸಲಿದೆ.