ಅರ್ಜುನ್ ಸರ್ಜಾ ವಿರುದ್ಧದ ಮೀಟೂ ಕೇಸ್ ಗೆ ಮತ್ತೆ ಟ್ವಿಸ್ಟ್: ನಟಿ ಶೃತಿ ಹರಿಹರನ್ ಗೆ ನೊಟೀಸ್
ನಟಿ ಶ್ರುತಿ ಹರಿಹರನ್ ಮೀಟೂ ಕೇಸ್ ಗೆ ಮತ್ತೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ನಟ ಅರ್ಜುನ್ ಸರ್ಜಾ ಕೇಸ್ ಗೆ ಪೊಲೀಸರು ಸಲ್ಲಿಸಿದ್ದ ಬಿ ರಿಪೋರ್ಟ್ ಪ್ರಶ್ನಿಸಿದ್ದ ಶ್ರುತಿ ಹರಿಹರನ್ ಗೆ ಕೋರ್ಟ್ ನೋಟೀಸ್ ಜಾರಿ ಮಾಡಿದೆ.
Published: 09th June 2023 11:36 AM | Last Updated: 09th June 2023 06:49 PM | A+A A-

ಶೃತಿ ಹರಿಹರನ್
ಬೆಂಗಳೂರು: ನಟಿ ಶ್ರುತಿ ಹರಿಹರನ್ ಮೀಟೂ ಕೇಸ್ ಗೆ ಮತ್ತೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ನಟ ಅರ್ಜುನ್ ಸರ್ಜಾ ಕೇಸ್ ಗೆ ಪೊಲೀಸರು ಸಲ್ಲಿಸಿದ್ದ ಬಿ ರಿಪೋರ್ಟ್ ಪ್ರಶ್ನಿಸಿದ್ದ ಶ್ರುತಿ ಹರಿಹರನ್ ಗೆ ಕೋರ್ಟ್ ನೋಟೀಸ್ ಜಾರಿ ಮಾಡಿದೆ.
ಬೆಂಗಳೂರಿನ 8ನೇ ಎಸಿಎಂಎಂ ನ್ಯಾಯಾಲಯ ನಟಿ ಶ್ರುತಿ ಹರಿಹರನ್ ಗೆ ನೋಟೀಸ್ ಜಾರಿ ಮಾಡಿದೆ. ಅಲ್ಲದೇ ಪ್ರಕರಣ ಸಂಬಂಧ ಪೊಲೀಸರಿಗೂ ಸೂಕ್ತ ಸಾಕ್ಷ್ಯಾಧಾರ ನೀಡುವಂತೆ ಸೂಚಿಸಿದೆ.
2018ರಲ್ಲಿ ಬಹುಭಾಷಾ ನಟ ಅರ್ಜುನ್ ಸರ್ಜಾ ವಿರುದ್ಧ ನಟಿ ಶ್ರುತಿ ಹರಿಹರನ್ ಮೀಟೂ ಆರೋಪ ಮಾಡಿದ್ದರು. ಮೀಟೂ ಪ್ರಕರಣದಲ್ಲಿ ಪೊಲೀಸರು ಮೂರು ವರ್ಷ ತನಿಖೆ ನಡೆಸಿದರು. ಆದರೆ, ಸೂಕ್ತ ಸಾಕ್ಷಿಗಳು ಸಿಕ್ಕಿಲ್ಲ. ಹಾಗಾಗಿ ಪ್ರಕರಣದ ವಿಚಾರಣೆ ನಡೆಸಿದ ಪೊಲೀಸರು ಅರ್ಜುನ್ ಸರ್ಜಾ ವಿರುದ್ಧ ಸೂಕ್ತ ಸಾಕ್ಷಾಧಾರವಿಲ್ಲ ಎಂದು ಕೋರ್ಟ್ ಗೆ ಬಿ ರಿಪೋರ್ಟ್ ಸಲ್ಲಿಸಿದ್ದರು.
ಇದನ್ನೂ ಓದಿ: ಹೊಸಬರು ನಟಿಸಿರುವ 'ಧೀರ ಸಾಮ್ರಾಟ್'ಗೆ ನಟ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸಾಥ್
ಪೊಲೀಸರು ಸಲ್ಲಿಸಿದ್ದ ಬಿ ರಿಪೋರ್ಟ್ ಬಗ್ಗೆ ಶೃತಿ ಹರಿಹರನ್ ಪ್ರಶ್ನಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣ ಮತ್ತೆ ಸುದ್ದಿಯಲ್ಲಿದ್ದು, ಶ್ರುತಿ ಅವರ ಮೇಲ್ಮನವಿಯನ್ನು ಕೋರ್ಟ್ ಒಪ್ಪಿದೆ. ಪೊಲೀಸರಿಗೆ ಸಾಕ್ಷ್ಯಾಧಾರ ಒದಗಿಸುವಂತೆ ಶ್ರುತಿಗೆ ನೋಟಿಸ್ ನೀಡಿದೆ. ಒಂದೊಮ್ಮೆ ಶ್ರುತಿ ಹರಿಹರನ್ ಸಾಕ್ಷ್ಯ ನೀಡದಿದ್ದರೆ ಬಿ-ರಿಪೋರ್ಟ್ ಗೆ ಕೋರ್ಟ್ ಸಮ್ಮತಿ ಸೂಚಿಸಲಿದೆ.