ಹತ್ತಕ್ಕೂ ಹೆಚ್ಚು ಸೆಲೆಬ್ರಿಟಿಗಳಿಂದ ಪ್ರಜ್ವಲ್ ದೇವರಾಜ್ ನಟನೆಯ ‘ಗಣ’ ಚಿತ್ರದ ಫಸ್ಟ್‌ಲುಕ್ ಪೋಸ್ಟರ್ ಬಿಡುಗಡೆ
ವಿಜಯ್ ರಾಘವೇಂದ್ರ, ಶ್ರುತಿ ಹರಿಹರನ್, ಪನ್ನಗಾ ಭರಣ, ವಾಸುಕಿ ವೈಭವ್, ಮೇಘನಾ ರಾಜ್ ಸೇರಿದಂತೆ ಹತ್ತಾರು ಗಣ್ಯರು ಪ್ರಜ್ವಲ್ ದೇವರಾಜ್ ಅವರ ಮುಂಬರುವ 'ಗಣ' ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಅನ್ನು ಅನಾವರಣಗೊಳಿಸಿದರು.
Published: 12th June 2023 01:07 PM | Last Updated: 12th June 2023 01:07 PM | A+A A-

ಗಣ ಚಿತ್ರದ ಪ್ರಜ್ವಲ್ ದೇವರಾಜ್ ಫಸ್ಟ್ ಲುಕ್ ಪೋಸ್ಟರ್
ವಿಜಯ್ ರಾಘವೇಂದ್ರ, ಶ್ರುತಿ ಹರಿಹರನ್, ಪನ್ನಗಾ ಭರಣ, ವಾಸುಕಿ ವೈಭವ್, ಮೇಘನಾ ರಾಜ್ ಸೇರಿದಂತೆ ಹತ್ತಾರು ಗಣ್ಯರು ಪ್ರಜ್ವಲ್ ದೇವರಾಜ್ ಅವರ ಮುಂಬರುವ 'ಗಣ' ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಅನ್ನು ಅನಾವರಣಗೊಳಿಸಿದರು.
ಚೆರ್ರಿ ಕ್ರಿಯೇಷನ್ಸ್ ಬ್ಯಾನರ್‌ನಡಿಯಲ್ಲಿ ಪಾರ್ಥು ನಿರ್ಮಿಸಿದ ಗಣ ಸಿನಿಮಾವನ್ನು ಭೌತಶಾಸ್ತ್ರ ಶಿಕ್ಷಕರಾಗಿದ್ದ ಹರಿಪ್ರಸಾದ್ ಜಕ್ಕಾ ಅವರು ನಿರ್ದೇಶಿಸಿದ್ದಾರೆ. ಅವರು ಈ ಹಿಂದೆ ಮಹೇಶ್ ಬಾಬು ನಟನೆಯ 1: ನೇನೊಕ್ಕಡೇನೆ ಮತ್ತು 100 % ಲವ್‌ನಂತಹ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.
ಹರಿಪ್ರಸಾದ್ ಕನ್ನಡಕ್ಕೆ ಪದಾರ್ಪಣೆ ಮಾಡುತ್ತಿರುವ ಈ ಚಿತ್ರಕ್ಕೆ ಜೈ ಆನಂದ್ ಅವರ ಛಾಯಾಗ್ರಹಣವಿದೆ, ಅನೂಪ್ ಸೀಳಿನ್ ಮತ್ತು ಹರೀಶ್ ಕೋಮ್ ಅವರ ಸಂಗೀತ ಸಂಯೋಜನೆಯಿದೆ. ಸದ್ಯ ಚಿತ್ರ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.
ಇದನ್ನೂ ಓದಿ; ಸಾಲು ಸಾಲು ಕನ್ನಡ ಚಿತ್ರಗಳಲ್ಲಿ ಬ್ಯುಸಿಯಾಗಿರುವ ಪ್ರಜ್ವಲ್ ದೇವರಾಜ್ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ
ಗಣ ಚಿತ್ರದಲ್ಲಿ ಪ್ರಜ್ವಲ್ ಅಲ್ಲದೆ ವೇದಿಕಾ, ಯಶ ಶಿವಕುಮಾರ್, ಕೃಷಿ ತಾಪಂಡ, ವಿಶಾಲ್ ಹೆಗಡೆ, ರವಿ ಕಾಳೆ, ಸಂಪತ್ ರಾಜ್, ಶಿವರಾಜ್ ಕೆ.ಆರ್. ಪೇಟೆ, ಮತ್ತು ರಮೇಶ್ ಭಟ್ ನಟಿಸಿದ್ದಾರೆ.