ಗಣೇಶ್-ಶ್ರೀನಿವಾಸ್ ರಾಜು ಮುಂಬರುವ ಚಿತ್ರದ ಮೂಲಕ ಮಾಳವಿಕಾ ನಾಯರ್ ಕನ್ನಡಕ್ಕೆ ಪದಾರ್ಪಣೆ!
ಈಗಾಗಲೇ ತೆಲುಗು, ಮಲಯಾಳಂ, ತಮಿಳಿನಲ್ಲಿ ಛಾಪು ಮೂಡಿಸಿರುವ ನಟಿ ಮಾಳವಿಕಾ ನಾಯರ್ ಕನ್ನಡಕ್ಕೆ ಪದಾರ್ಪಣೆ ಮಾಡಲಿದ್ದಾರೆ. ಬಹುಭಾಷಾ ನಟಿ, ಉಸ್ತಾದ್ ಹೋಟೆಲ್‌ನಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡರು.
Published: 28th June 2023 11:18 AM | Last Updated: 28th June 2023 11:19 AM | A+A A-

ಗಣೇಶ್ - ಮಾಳವಿಕಾ ನಾಯರ್
ಈಗಾಗಲೇ ತೆಲುಗು, ಮಲಯಾಳಂ, ತಮಿಳಿನಲ್ಲಿ ಛಾಪು ಮೂಡಿಸಿರುವ ನಟಿ ಮಾಳವಿಕಾ ನಾಯರ್ ಕನ್ನಡಕ್ಕೆ ಪದಾರ್ಪಣೆ ಮಾಡಲಿದ್ದಾರೆ. ಬಹುಭಾಷಾ ನಟಿ, ಉಸ್ತಾದ್ ಹೋಟೆಲ್‌ನಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡರು. ಬಳಿಕ ಕುಕ್ಕೂ, ಯೆವಡೇ ಸುಬ್ರಹ್ಮಣ್ಯಂ ಮತ್ತು ಟ್ಯಾಕ್ಸಿವಾಲಾ ಮುಂತಾದ ಗಮನಾರ್ಹ ಚಿತ್ರಗಳಲ್ಲಿ ನಟಿಸಿದ್ದಾರೆ. ಇದೀಗ ಶ್ರೀನಿವಾಸ್ ರಾಜು ಅವರ ನಿರ್ದೇಶನದ ಮುಂಬರುವ ಚಿತ್ರದಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ ಮತ್ತು ಗೋಲ್ಡನ್ ಸ್ಟಾರ್ ಗಣೇಶ್‌ಗೆ ಜೋಡಿಯಾಗಿದ್ದಾರೆ.
ಯೋಜನೆಯ ಹೆಚ್ಚಿನ ವಿವರಗಳನ್ನು ನಿರ್ಮಾಪಕರು ಮುಚ್ಚಿಟ್ಟಿದ್ದರೂ, ಹಲವು ವಿಚಾರಗಳು ಸದ್ಯ ಊಹೆಯಲ್ಲಿವೆ. ಸದ್ಯ ಚಿತ್ರೀಕರಣ ನಡೆಯುತ್ತಿದ್ದು, ಸಾಧು ಕೋಕಿಲ ಮತ್ತು ಗಿರಿ ಶಿವಣ್ಣ ಅವರೊಂದಿಗೆ ಗಣೇಶ್ ಸೆಟ್‌ನಲ್ಲಿ ಇದ್ದಾರೆ. ಈ ಚಿತ್ರದಲ್ಲಿ ಇಬ್ಬರು ನಾಯಕಿಯರು ಇರಲಿದ್ದು, ಮಾಳವಿಕಾ ನಾಯರ್ ಮೊದಲನೇ ನಾಯಕಿಯಾಗಿದ್ದಾರೆ ಮತ್ತು ಅವರು ಶೀಘ್ರದಲ್ಲೇ ಸೆಟ್‌ಗೆ ಸೇರುವ ನಿರೀಕ್ಷೆಯಿದೆ. ಈಮಧ್ಯೆ, ಚಿತ್ರತಂಡ ಇನ್ನೊಬ್ಬ ನಾಯಕಿಯ ಹುಡುಕಾಟದಲ್ಲಿದೆ.
ಕಾಮಿಡಿ ಫ್ಯಾಮಿಲಿ ಎಂಟರ್‌ಟೈನರ್‌ಗಳು ಮತ್ತು ರೋಮ್ಯಾಂಟಿಕ್ ಚಿತ್ರಗಳಿಗೆ ಹೆಸರುವಾಸಿಯಾದ ಗಣೇಶ್, ದಂಡುಪಾಳ್ಯ ನಿರ್ದೇಶಕ ಶ್ರೀನಿವಾಸ್ ರಾಜು ಅವರೊಂದಿಗೆ ಮೊದಲ ಬಾರಿಗೆ ಕೆಲಸ ಮಾಡುತ್ತಿದ್ದಾರೆ. ಇದು ಈ ಯೋಜನೆಯ ಸುತ್ತ ಹಲವು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಪ್ರಾಜೆಕ್ಟ್‌ನ ಅಧಿಕೃತ ಘೋಷಣೆ ಮತ್ತು ತಾರಾಗಣ ಮತ್ತು ಸಿಬ್ಬಂದಿಯ ವಿವರಗಳು ಶೀಘ್ರದಲ್ಲೇ ಹೊರಬರುವ ನಿರೀಕ್ಷೆಯಿದೆ.
ಇದನ್ನೂ ಓದಿ: ನಟ ಗಣೇಶ್ ಮುಂದಿನ ಸಿನಿಮಾಗೆ ದಂಡುಪಾಳ್ಯ ಖ್ಯಾತಿಯ ನಿರ್ದೇಶಕ ಶ್ರೀನಿವಾಸ ರಾಜು ಆ್ಯಕ್ಷನ್ ಕಟ್?
ಈಮಧ್ಯೆ ಗಣೇಶ್ ಅವರ ಮುಂದಿನ, 'ಬಾನದಾರಿಯಲ್ಲಿ' ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ ಮತ್ತು ಬಿಡುಗಡೆಯ ದಿನಾಂಕವನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ.