ಹಿರಿಯ ಕಲಾವಿದರನ್ನು ದರ್ಶನ್ ಗೌರವಯುತವಾಗಿ ನಡೆಸಿಕೊಳ್ಳುತ್ತಾರೆ: ಬಿರಾದಾರ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕಾಟೇರ ಸಿನಿಮಾದಲ್ಲಿ ಬಿರಾದಾರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ, ನಿರ್ಮಾಪಕರು ಹಿರಿಯ ನಟರನ್ನು ಒಳಗೊಂಡಿರುವ ಕ್ಯಾರೆಕ್ಟರ್ ಪೋಸ್ಟರ್ ಅನಾವರಣಗೊಳಿಸಿದರು.
Published: 29th June 2023 02:13 PM | Last Updated: 29th June 2023 02:13 PM | A+A A-

ದರ್ಶನ್ ಮತ್ತು ಬಿರಾದಾರ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕಾಟೇರ ಸಿನಿಮಾದಲ್ಲಿ ಬಿರಾದಾರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ, ನಿರ್ಮಾಪಕರು ಹಿರಿಯ ನಟರನ್ನು ಒಳಗೊಂಡಿರುವ ಕ್ಯಾರೆಕ್ಟರ್ ಪೋಸ್ಟರ್ ಅನಾವರಣಗೊಳಿಸಿದರು.
ಕಾಟೇರಾ ಸಿನಿಮಾದಲ್ಲಿ ಬಿರಾದಾರ್ ಅವರು ತಮ್ಮ ಪಾತ್ರದ ಬಗ್ಗೆ ತುಟಿ ಬಿಚ್ಚಿಲ್ಲ, ತರುಣ್ ಸುಧೀರ್ ನಿರ್ದೇಶನದಲ್ಲಿ ದರ್ಶನ್ ಅವರೊಂದಿಗೆ ತೆರೆ ಹಂಚಿಕೊಳ್ಳಲು ತಾವು ಉತ್ಸುಕರಾಗಿರುವುದಾಗಿ ಬಿರಾದಾರ್ ಹೇಳಿದ್ದಾರೆ.
ಇದನ್ನೂ ಓದಿ: 70ನೇ ವಯಸ್ಸಿನಲ್ಲಿ ಹೀರೋ ಆದ ವೈಜನಾಥ್ ಬಿರಾದಾರ್ ನಟನೆಯ '90 ಬಿಡಿ ಮನೀಗ್ ನಡಿ' ಶೀಘ್ರದಲ್ಲೇ ಬಿಡುಗಡೆ
ಈ ಹಿಂದೆ ದರ್ಶನ್ ಅವರ ತಂದೆ ತೂಗುದೀಪ ಶ್ರೀನಿವಾಸ್ ಅವರೊಂದಿಗೆ ಕೆಲಸ ಮಾಡುವ ಅವಕಾಶ ನನಗೆ ಸಿಕ್ಕಿತು, ಈಗ ಅವರ ಮಗನೊಂದಿಗೆ ಕೆಲಸ ಮಾಡುವುದು ನನಗೆ ಅಪಾರ ಸಂತೋಷವನ್ನು ನೀಡಿದೆ ಎಂದಿದ್ದಾರೆ.
ಹಿರಿಯ ನಟರನ್ನು ನೋಡಿಕೊಳ್ಳುವ ವಿಷಯದಲ್ಲಿ ದರ್ಶನ್ ಗೌರವಾನ್ವಿತ ವ್ಯಕ್ತಿ ಎಂದು ನಾನು ಹೇಳಲೇಬೇಕು. ಸೆಟ್‌ನಲ್ಲಿ, ಅವರು ನನ್ನ ಯೋಗಕ್ಷೇಮ ವಿಚಾರಿಸಿಕೊಳ್ಳುತ್ತಿದ್ದರು. ನನಗೆ ಸಂಕೋಚವಾಗದಂತೆ ಆರಾಮದಾಯಕವಾಗಿ ನನ್ನೊಂದಿಗೆ ನಡೆದುಕೊಳ್ಳುತ್ತಿದ್ದರು. ನನ್ನೊಂದಿಗೆ ಒಂದು ಕಪ್ ಚಹಾ ಕುಡಿದು ಆನಂದಿಸುತ್ತಿದ್ದರು ಎಂದು ಬಿರಾದಾರ್ ಹೇಳಿದ್ದಾರೆ.
ಇದನ್ನೂ ಓದಿ: ವಯಸ್ಸು ಕೇವಲ ಸಂಖ್ಯೆ ಎಂದು ಸಾಬೀತುಪಡಿಸಿದ ನಟ ವೈಜನಾಥ್ ಬಿರಾದಾರ್, ಸಿನಿಮಾ ಬಿಡುಗಡೆಗೆ ದಿನಾಂಕ ನಿಗದಿ
ತನ್ನ ಪಾತ್ರದ ಕೆಲವು ಭಾಗಗಳನ್ನು ಚಿತ್ರೀಕರಿಸುವುದು ಬಾಕಿ ಉಳಿದಿವೆ ಮತ್ತು ಬಿಡುಗಡೆಯ ದಿನಾಂಕವು ಹತ್ತಿರವಾಗುತ್ತಿದ್ದಂತೆ ಹೆಚ್ಚಿನ ವಿವರಗಳನ್ನು ಹಂಚಿಕೊಳ್ಳುವುದಾಗಿ ಬಿರಾದಾರ್ ಭರವಸೆ ನೀಡಿದ್ದಾರೆ.