ಗ್ಯಾಂಗ್‌ಸ್ಟರ್ ಆಗಿ ಕಾಣಿಸಿಕೊಳ್ಳಲಿರುವ ವಿಕ್ರಮ್ ರವಿಚಂದ್ರನ್ ಸಿನಿಮಾದಲ್ಲಿ ನಟಿ ಸಂಜನಾ ಆನಂದ್ ನಾಯಕಿ?
ವಿಕ್ರಮ್ ರವಿಚಂದ್ರನ್ ಅವರು ಕಾರ್ತಿಕ್ ರಾಜನ್ ನಿರ್ದೇಶನದ ಎರಡನೇ ಚಿತ್ರದಲ್ಲಿ ಗ್ಯಾಂಗ್‌ಸ್ಟರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಈಗಾಗಲೇ ಚಿತ್ರದ ಚಿತ್ರೀಕರಣವನ್ನು ಪ್ರಾರಂಭಿಸಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ಶೂಟಿಂಗ್ ನಡೆಯುತ್ತಿದ್ದು, ಚಿತ್ರದ ನಾಯಕಿ ಯಾರೆಂಬ ಸುತ್ತ ಸಾಕಷ್ಟು ಸುದ್ದಿಯಾಗಿದೆ.
Published: 01st March 2023 11:20 AM | Last Updated: 01st March 2023 03:26 PM | A+A A-

ಸಂಜನಾ ಆನಂದ್
ವಿಕ್ರಮ್ ರವಿಚಂದ್ರನ್ ಅವರು ಕಾರ್ತಿಕ್ ರಾಜನ್ ನಿರ್ದೇಶನದ ಎರಡನೇ ಚಿತ್ರದಲ್ಲಿ ಗ್ಯಾಂಗ್‌ಸ್ಟರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಈಗಾಗಲೇ ಚಿತ್ರದ ಚಿತ್ರೀಕರಣವನ್ನು ಪ್ರಾರಂಭಿಸಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ಶೂಟಿಂಗ್ ನಡೆಯುತ್ತಿದ್ದು, ಚಿತ್ರದ ನಾಯಕಿ ಯಾರೆಂಬ ಸುತ್ತ ಸಾಕಷ್ಟು ಸುದ್ದಿಯಾಗಿದೆ. ಸಂಜನಾ ಆನಂದ್ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಲಾಗಿದೆ ಎಂಬ ಊಹಾಪೋಹಗಳು ಹರಡಿವೆ.
ದುನಿಯಾ ವಿಜಯ್ ನಿರ್ದೇಶಿಸಿ ನಟಿಸಿದ್ದ ಸಲಗ ಸಿನಿಮಾ ಖ್ಯಾತಿಯ ಸಂಜನಾ, ವಿರಾಟ್ ಅಭಿನಯದ ದಿನಕರ್ ತೂಗುದೀಪ ಅವರ 'ರಾಯಲ್' ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಕ್ರಮ್ ಅವರ ಮುಂದಿನ ಸಿನಿಮಾದ ಭಾಗವಾಗಿ ಸಂಜನಾ ಆಯ್ಕೆಯಾಗಿರುವ ಬಗ್ಗೆ ಅಧಿಕೃತ ಪ್ರಕಟಣೆ ಶೀಘ್ರದಲ್ಲೇ ಹೊರಬೀಳುವ ನಿರೀಕ್ಷೆಯಿದೆ.
ರಕ್ಷಾ ಮತ್ತು ವಿಜಯ್ ಕುಮಾರ್ ನಿರ್ಮಿಸಿದ ಈ ಚಿತ್ರವು ವಿಕ್ರಮ್ ರವಿಚಂದ್ರನ್ ಅವರು ಹೊಸದಾಗಿ ಮರುಪ್ರಾರಂಭಿಸಿದ ಈಶ್ವರಿ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣವಾಗಲಿದೆ. ಸಿನಿಮಾ ಎಕ್ಸ್‌ಪ್ರೆಸ್ ಜೊತೆಗಿನ ಹಿಂದಿನ ಮಾತುಕತೆಯಲ್ಲಿ, ಸ್ಕ್ರಿಪ್ಟ್ ಕಚ್ಚಾ ಕಥೆಯನ್ನು ಹೊಂದಿರುತ್ತದೆ ಎಂದು ವಿಕ್ರಮ್ ಉಲ್ಲೇಖಿಸಿದ್ದಾರೆ.

ಈ ಹಿಂದೆ ತಮಿಳಿನ ನಿರ್ದೇಶಕ ವಿಜಯ್ ಚಂದರ್ ಅವರೊಂದಿಗೆ ಕೆಲಸ ಮಾಡಿದ ಕಾರ್ತಿಕ್ ರಾಜನ್, ನಾಗಾರ್ಜುನ ಮತ್ತು ಸಮಂತಾ ಅಭಿನಯದ ತೆಲುಗು ಚಿತ್ರ ರಾಜು ಗಾರಿ ಗಾದಿ 2 ಸಿನಿಮಾದ ಕಥೆ ಬರೆದಿದ್ದಾರೆ. ತಮಿಳಿನ ವೆಬ್ ಸೀರೀಸ್ ನಿಶಾಗೆ ಕೆಲಸ ಮಾಡಿದ ಕಾರ್ತಿಕ್, ಕನ್ನಡದ ಹೆಡ್ ಬುಷ್ ಸಿನಿಮಾದಲ್ಲಿಯೂ ಸಹ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ. ಈ ಎಲ್ಲಾ ಅನುಭವಗಳನ್ನು ಸೇರಿಸಿ ಕನ್ನಡದಲ್ಲಿ ಗ್ಯಾಂಗ್‌ಸ್ಟರ್ ಸಿನಿಮಾ ನಿರ್ದೇಶಿಸಲು ಮುಂದಾಗಿದ್ದಾರೆ ಕಾರ್ತಿಕ್.
ಇದನ್ನೂ ಓದಿ: ತಮ್ಮ 2ನೇ ಸಿನಿಮಾದಲ್ಲಿ ಗ್ಯಾಂಗ್‌ಸ್ಟರ್ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ವಿಕ್ರಮ್ ರವಿಚಂದ್ರನ್
ಚಿತ್ರದ ಚಿತ್ರೀಕರಣ ಬೆಂಗಳೂರು ಮತ್ತು ಶಿವಮೊಗ್ಗದಲ್ಲಿ ನಡೆಯಲಿದೆ. ಯುವರಾಜ್ ಸಂಗೀತ, ಪಿಕೆ ಅವರ ಸಂಕಲನ ಚಿತ್ರಕ್ಕಿದೆ.