ಕುತೂಹಲ ಮೂಡಿಸಿದ ಸೈನ್ಸ್-ಫಿಕ್ಷನ್ ‘ಮಂಡಲ’ ಸಿನಿಮಾ: ಮಾರ್ಚ್ 10ಕ್ಕೆ ತೆರೆಗೆ

ಅಜಯ್ ಸರ್ಪೇಷ್ಕರ್ ಚೊಚ್ಚಲ ನಿರ್ದೇಶನದಲ್ಲಿ ಮೂಡಿ ಬಂದಿರುವ ಸೈನ್ಸ್ ಫಿಕ್ಷನ್ ಸಿನಿಮಾ ‘ಮಂಡಲ’ ಮಾರ್ಚ್ 10 ರಂದು ಬಿಡುಗಡೆಯಾಗುತ್ತಿದೆ.
ಮಂಡಲ ಚಿತ್ರದ ಸ್ಟಿಲ್
ಮಂಡಲ ಚಿತ್ರದ ಸ್ಟಿಲ್

ಅಜಯ್ ಸರ್ಪೇಷ್ಕರ್ ಚೊಚ್ಚಲ ನಿರ್ದೇಶನದಲ್ಲಿ ಮೂಡಿ ಬಂದಿರುವ ಸೈನ್ಸ್ ಫಿಕ್ಷನ್ ಸಿನಿಮಾ ‘ಮಂಡಲ’ ಮಾರ್ಚ್ 10 ರಂದು ಬಿಡುಗಡೆಯಾಗುತ್ತಿದೆ.

ಅಜಯ್ ಅವರು ತಮ್ಮ ಮೊದಲ ಚಿತ್ರದಲ್ಲಿ ಒಳ್ಳೆ ಸಬ್ಜೆಕ್ಟ್ ಜೊತೆಗೆ ಅನುಭವಿ ಕಲಾವಿದರನ್ನು ಒಟ್ಟುಗೂಡಿಸಿ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಅನಂತ್ ನಾಗ್, ಪ್ರಕಾಶ್ ಬೆಳವಾಡಿ, ಶರ್ಮಿಳಾ ಮಾಂಡ್ರೆ, ಸಂಯುಕ್ತ ಹೊರನಾಡು, ಕಿರಣ್ ಶ್ರೀನಿವಾಸ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.

‘ಮಂಡಲ’ ಚಿತ್ರಕ್ಕೆ ಅಜಯ್ ಅವರೇ ಖುದ್ದು ಕಥೆ ಬರೆದು ನಿರ್ದೇಶನದ ಜೊತೆಗೆ ಸಿನಿಮಾ ನಿರ್ಮಾಣವನ್ನೂ ಮಾಡಿದ್ದಾರೆ.

ಕೈಯಲ್ಲಿದ್ದ ಚಿತ್ರಗಳ ಕಥೆಯನ್ನು ಮರು ಪರಿಶೀಲನೆ ನಡೆಸುತ್ತಿದ್ದ ಸಮಯದಲ್ಲಿ ಮಂಡಲಾ ಚಿತ್ರ ತಂಡ ನನ್ನನ್ನು ಸಂಪರ್ಕಿಸಿತ್ತು. ಚಿತ್ರದಲ್ಲಿ ಭಾಗವಾಗಲು ನಾನು ಬಯಸಿದ್ದೆ ಎಂದು ಶರ್ಮಿಳಾ ಮಾಂಡ್ರೆಯವರು ಹೇಳಿದ್ದಾರೆ.

“13 ವರ್ಷಗಳಿಂದ ಇಂಡಸ್ಟ್ರಿಯಲ್ಲಿರುವುದರಿಂದ, ಸ್ಕ್ರಿಪ್ಟ್‌ಗಳನ್ನು ಬುದ್ಧಿವಂತಿಕೆಯಿಂದ ಆಯ್ಕೆ ಮಾಡುವ ಅಗತ್ಯವಿದೆ ಎಂದು ಭಾವಿಸಿದ್ದೆ. ಮಂಡಲ ಆ ಬುದ್ಧಿವಂತ ಸ್ಕ್ರಿಪ್ಟ್‌ಗಳಲ್ಲಿ ಒಂದಾಗಿದೆ. ನಾನು ಸಿನಿಮಾ ಮಾಡಲು ಬಯಸುತ್ತೇನೆ, ಅದು ನನಗೆ ನಟಿಯಾಗಿ ಬೆಳೆಯಲು ಸಹಾಯ ಮಾಡುತ್ತದೆ. ವಿಶೇಷವಾಗಿ ಒಟಿಟಿ ನಮಗೆ ಉತ್ತಮ ವಿಷಯವನ್ನು ನೀಡುವುದರೊಂದಿಗೆ, ಸ್ಪರ್ಧೆಯನ್ನೂ ಹೆಚ್ಚಿಸಿದೆ ಎಂದು ತಿಳಿಸಿದರು

ಸಿನಿಮಾ ಬಗ್ಗೆ ಮಾತನಾಡಿ, ಮಂಡಲ ಒಂದು ವೈಜ್ಞಾನಿಕ ಚಿತ್ರವಾಗಿದ್ದು, ಚಿತ್ರದ ಕಥಾವಸ್ತುವನ್ನು ಬೆಂಗಳೂರಿನೊಂದಿಗೆ ಹೊಂದಿಸಿದ್ದರೂ, ವಿಶ್ವಕ್ಕೆ ಸಂಬಂಧಿಸಿದ ಸಿನಿಮಾ ಎಂಬಂತೆ ಭಾವನೆ ಮೂಡುತ್ತದೆ. ಪ್ರಪಂಚ ತಿಳಿಯದ ವಿಚಾರಗಳ ಬಗ್ಗೆ ಸಿನಿಮಾ ಮಾತನಾಡುತ್ತದೆ. ಏಲಿಯನ್ಸ್ ಬಗ್ಗೆ ಮಾತನಾಡುತ್ತದೆ. ಹಲವು ಸಿನಿಮಾಗಳಲ್ಲಿ ಏಲಿಯನ್ಸ್ ಗಳನ್ನು ನೋಡಿದ್ದೇವೆ. ಅಮೆರಿಕಾ ರಾಷ್ಟ್ರಕ್ಕಷ್ಟೇ ಏಲಿಯನ್ಸ್ ಗಳು ಏಕೆ ಭೇಟಿ ನೀಡುತ್ತವೆ. ಕರ್ನಾಟಕದಲ್ಲೂ ಏಲಿಯನ್ಸ್ ಗಳು ಹೆಲೋ ಹೇಳುವ ಸಮಯ ಬಂದಿದೆ ಎಂದರು.

10 ವರ್ಷದಲ್ಲಿ 9 ಸಿನಿಮಾ ಮಾಡಿರುವ ಕಿರಣ್ ಮಂಡಲ ಚಿತ್ರದ ಮೂಲಕ ಮತ್ತೆ ಬೆಳ್ಳಿತೆರೆಗೆ ಬರುತ್ತಿರುವ ಖುಷಿಯಲ್ಲಿದ್ದಾರೆ.

ಈ ಸಿನಿಮಾವನ್ನು ಆಯ್ಕೆ ಮಾಡಿಕೊಳ್ಳಲು ಒಂದೆರೆಡು ಕಾರಣಗಳಿದ್ದವು. “ಮೊದಲನೆಯದಾಗಿ, ಚಿತ್ರದಲ್ಲಿ ಅನಂತ್ ನಾಗ್ ಮತ್ತು ಪ್ರಕಾಶ್ ಬೆಳವಾಡಿ ಇರುವುದು. ಒಬ್ಬ ನಟ ಮಿಸ್ ಮಾಡಿಕೊಳ್ಳಬಾರದ ಅವಕಾಶ ಇದಾಗಿತ್ತು. ಇನ್ನು ಎರಡನೇ ಕಾರಣ ಕಥೆ ಹಾಗೂ ಸ್ಕ್ರಿಪ್ಟ್. ಚಿತ್ರದ ಕಥೆ ಆಸಕ್ತಿದಾಯಕವಾಗಿತ್ತು ಹಾಗೂ ಸಾಕಷ್ಟು ಕಲ್ಪನೆಗಳಿಂದ ಕೂಡಿತ್ತು. ಪ್ರತಿಯೊಂದು ಪ್ರಶ್ನೆಗೂ ಚಿತ್ರದಲ್ಲಿ ತಾರ್ಕಿಕ ಉತ್ತರಗಳಿವೆ. ವಿವಿಧ ಭಾವನೆಗಳನ್ನು ಚಿತ್ರದಲ್ಲಿ ನೋಡಬಹುದಾಗಿದೆ. ಕನ್ನಡದಲ್ಲಿ ಗಾರ್ಡನ್ಸ್ ಆಫ್ ಗ್ಯಾಲಕ್ಸಿ ಮತ್ತು ಅವೆಂಜರ್ಸ್ ನಂತಹ ಚಿತ್ರಗಳನ್ನು ತರುವುದು ಅಜಯ್ ಅವರ ಆಲೋಚನೆ ಎಂದು ಕಿರಣ್ ಹೇಳಿದ್ದಾರೆ.

ಸಂಯುಕ್ತಾ ಅವರು ಮಾತನಾಡಿ, ವಿದೇಶಿಯರ ಪರಿಕಲ್ಪನೆಯು ಯಾವಾಗಲೂ ಕುತೂಹಲಗಳನ್ನು ಮೂಡಿಸುತ್ತವೆ ಹಾಗೂ ಆಕರ್ಷಕವಾಗಿರುತ್ತವೆ. ಹೀಗಾಗಿಯೇ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡೆ. ಹಾಲಿವಿಡ್ ಗಳಲ್ಲಿ ಅನ್ಯಲೋಕದ ಜೀವಿಗಳನ್ನು ನೋಡಿ ಆನಂದಿಸಿದ್ದೇವೆ. ಸಿನಿಮಾಗಳಲ್ಲಿ ಏಲಿಯನ್ ಗಳ ಕಲ್ಪನೆಗಳು ತುಂಬಾ ಆಸಕ್ತಿಯನ್ನು ಮೂಡಿಸುತ್ತದೆ. ಭಾರತದಲ್ಲಿ ಅಂತಹ ಪರಿಕಲ್ಪನೆಗಳು ಇಲ್ಲ. ಕನ್ನಡದಲ್ಲಿ ಇಂತಹದ್ದೊಂದು ಚಿತ್ರದ ಪ್ರಯೋಗವಾಗುತ್ತಿದೆ. ಬಾಹ್ಯಾಕಾಶದ ದೊಡ್ಡ ಅಭಿಮಾನಿಯಾಗಿರುವ ನಾನು ವಿದೇಶಿಯರ ಪರಿಕಲ್ಪನೆಯನ್ನು ನಂಬುತ್ತೇನೆ. ಹೀಗಾಗಿ ಮಂಡಲ ಸಿನಿಮಾ ಭಾಗವಾಗಲು ಉತ್ಸುಕಳಾಗಿದ್ದೆ ಎಂದು ಹೇಳಿದ್ದಾರೆ.

ಚಿತ್ರದಲ್ಲಿ ಸುಧಾ ಬೆಳವಾಡಿ, ನೀನಾಸಂ ಅಶ್ವಥ್, ಮನ್ ದೀಪ್ ರಾಯ್, ಕಿರಣ್ ನಾಯಕ್, ಸಮನ್ವಿತಾ ಶೆಟ್ಟಿ, ನರೇಶ್ ನರಸಿಂಹನ್ ಅವರನ್ನೊಳಗೊಂಡ ತಾರಾಬಳಗವಿದೆ.

ಅಜಯ್ ಸರ್ಪೇಷ್ಕರ್ ನಿರ್ದೇಶನದ ಚೊಚ್ಚಲ ಸಿನಿಮಾ ಇದಾಗಿದ್ದು, ಆರಂಭದಲ್ಲಿ ಕಿರುಚಿತ್ರಗಳನ್ನು ನಿರ್ದೇಶಿಸುತ್ತಿದ್ದ ಇವರು ಮಂಡಲ ಚಿತ್ರಕ್ಕೆ ಖುದ್ದು ಕಥೆ ಬರೆದು ನಿರ್ದೇಶನದ ಜೊತೆಗೆ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.

ಇನ್ನು ಚಿತ್ರಕ್ಕೆ ಜೆಸ್ಸಿ ಕ್ಲಿಂಟನ್ ಸಂಗೀತ ನೀಡಿದ್ದರೆ, ರಾಮಿಶೆಟ್ಟಿ ಪವನ್ ಸಂಕಲನ, ಮನೋಹರ್ ಜೋಶಿ ಛಾಯಾಗ್ರಹಣ, ನಿತಿನ್ ಲುಕೋಸೆ ಸೌಂಡ್ ಡಿಸೈನ್, ಒಲಿವರ್ ಎಲ್ವಿಸ್ ಹಾಗೂ ಮನೋಜ್ ಬೆಳ್ಳೂರು ವಿಎಫ್​ಎಕ್ಸ್, ಪ್ರಕಾಶ್ ಬೆಳವಾಡಿ ಹಾಗೂ ಅಜೆಯ್ ಸರ್ಪೇಷ್ಕರ್ ಅವರ ಚಿತ್ರಕಥೆ ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com