ಪ್ರಮೋದ್ ಶೆಟ್ಟಿ- ತೇಜು ಬೆಳವಾಡಿ ನಟನೆಯ 'ಲಾಫಿಂಗ್ ಬುದ್ಧ' ಚಿತ್ರ ನಿರ್ಮಾಣಕ್ಕೆ ನಟ ರಿಷಬ್ ಶೆಟ್ಟಿ ಮುಂದು
ಕಾಮಿಡಿ ಎಂಟರ್‌ಟೈನರ್ 'ಲಾಫಿಂಗ್ ಬುದ್ಧ' ಸಿನಿಮಾವನ್ನು ನಟ ರಿಷಬ್ ಶೆಟ್ಟಿ ನಿರ್ಮಾಣ ಮಾಡಲಿದ್ದಾರೆ. ಎಂ ಭರತ್ ರಾಜ್ ನಿರ್ದೇಶನದ ಈ ಚಿತ್ರಕ್ಕೆ ಭಾನುವಾರ ಭದ್ರಾವತಿಯ ಚಂಡಿಕಾ ದುರ್ಗಾ ದೇವಸ್ಥಾನದಲ್ಲಿ ಮುಹೂರ್ತ ನೆರವೇರಿತು.
Published: 13th March 2023 11:42 AM | Last Updated: 13th March 2023 02:19 PM | A+A A-

ಪ್ರಮೋದ್ ಶೆಟ್ಟಿ- ತೇಜು ಬೆಳವಾಡಿ
ಕಾಮಿಡಿ ಎಂಟರ್‌ಟೈನರ್ 'ಲಾಫಿಂಗ್ ಬುದ್ಧ' ಸಿನಿಮಾವನ್ನು ನಟ ರಿಷಬ್ ಶೆಟ್ಟಿ ನಿರ್ಮಾಣ ಮಾಡಲಿದ್ದಾರೆ. ಎಂ ಭರತ್ ರಾಜ್ ನಿರ್ದೇಶನದ ಈ ಚಿತ್ರಕ್ಕೆ ಭಾನುವಾರ ಭದ್ರಾವತಿಯ ಚಂಡಿಕಾ ದುರ್ಗಾ ದೇವಸ್ಥಾನದಲ್ಲಿ ಮುಹೂರ್ತ ನೆರವೇರಿತು.
ಲಾಫಿಂಗ್ ಬುದ್ಧ ಸಿನಿಮಾ ಪೊಲೀಸ್ ಪೇದೆಯ ಸುತ್ತ ಸುತ್ತುತ್ತದೆ. ದೇಹದ ತೂಕ ಹೆಚ್ಚಿರುವ ಪೊಲೀಸ್ ಕಾನ್‌ಸ್ಟೇಬಲ್ ಹೇಗೆ ಜನರ ಉತ್ಸಾಹವನ್ನು ಹೆಚ್ಚಿಸುತ್ತಾರೆ ಮತ್ತು ಇಡೀ ಪೊಲೀಸ್ ಠಾಣೆಗೆ ಸಂತೋಷವನ್ನು ತರುತ್ತಾರೆ ಎಂಬುದೇ ಚಿತ್ರದ ತಿರುಳು. ಹಾಸ್ಯದ ಜತೆಗೆ ಭಾವನಾತ್ಮಕ ದೃಶ್ಯಗಳು ಸಹ ಸಿನಿಮಾದಲ್ಲಿ ಇರಲಿವೆ ಎಂದಿದೆ ಚಿತ್ರತಂಡ.
ಚಿತ್ರದಲ್ಲಿ ಪ್ರಮೋದ್ ಶೆಟ್ಟಿ ಮತ್ತು ಹಿರಿಯ ನಟ ಪ್ರಕಾಶ್ ಬೆಳವಾಡಿ ಅವರ ಪುತ್ರಿ ತೇಜು ಬೆಳವಾಡಿ ನಟಿಸಿದ್ದಾರೆ. ತೇಜು ಕೊನೆಯದಾಗಿ ಗಂಟುಮೂಟೆ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.
ಇದನ್ನೂ ಓದಿ: ರಿಷಬ್ ಶೆಟ್ಟಿ ಮುಡಿಗೆ ಮತ್ತೊಂದು ಗರಿ: ಪ್ರತಿಷ್ಠಿತ 'ದಾದಾ ಸಾಹೇಬ್ ಪಾಲ್ಕೆ' ಪ್ರಶಸ್ತಿಗೆ ಕಾಂತಾರ ನಟ ಭಾಜನ
ಕಾಫಿ ಗ್ಯಾಂಗ್ ಸ್ಟುಡಿಯೋಸ್ ಸಹಯೋಗದಲ್ಲಿ ರಿಷಬ್ ಶೆಟ್ಟಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಶ್ರೀಕಾಂತ್ ಮತ್ತು ವಿಕಾಸ್ ಸಹ ನಿರ್ಮಾಪಕರಾಗಿದ್ದಾರೆ. ಹಿಂದಿನ ಸಂದರ್ಶನವೊಂದರಲ್ಲಿ, ರಿಷಬ್ ಈ ಚಿತ್ರದಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ಪಾತ್ರಕ್ಕೆ ಪ್ರಮೋದ್ ಅತ್ಯುತ್ತಮವಾಗಿ ಸರಿಹೊಂದುತ್ತಾರೆ ಎಂದು ಹೇಳಿದ್ದರು.
ಭದ್ರಾವತಿ ಮತ್ತು ಸುತ್ತಮುತ್ತ ಚಿತ್ರೀಕರಣ ನಡೆಯಲಿದ್ದು, ವಿಷ್ಣು ವಿಜಯ್ ಅವರ ಸಂಗೀತ, ಚಂದ್ರಶೇಖರ್ ಅವರ ಛಾಯಾಗ್ರಹಣ ಮತ್ತು ಕೆಎಂ ಪ್ರಕಾಶ್ ಅವರ ಸಂಕಲನ ಚಿತ್ರಕ್ಕಿದೆ.