ಕನ್ನಡ ಗೊತ್ತಿಲ್ಲ ಎಂದು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಅವಮಾನ: ಡ್ಯಾನ್ಸರ್ ಸಲ್ಮಾನ್ ಯೂಸುಫ್ ಆರೋಪ!
ನರ್ತಕ ಮತ್ತು ನೃತ್ಯ ಸಂಯೋಜಕ ಸಲ್ಮಾನ್ ಯೂಸುಫ್ ಖಾನ್ ತಮ್ಮ ಬಿಂದಾಸ್ ನೃತ್ಯದ ಶೈಲಿಯಿಂದ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಇನ್ನು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ತಮಗಾದ ಅನುಭವವನ್ನು ಸಲ್ಮಾನ್ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
Published: 15th March 2023 07:37 PM | Last Updated: 15th March 2023 07:39 PM | A+A A-

ಸಲ್ಮಾನ್ ಯೂಸುಫ್ ಖಾನ್
ನರ್ತಕ ಮತ್ತು ನೃತ್ಯ ಸಂಯೋಜಕ ಸಲ್ಮಾನ್ ಯೂಸುಫ್ ಖಾನ್ ತಮ್ಮ ಬಿಂದಾಸ್ ನೃತ್ಯದ ಶೈಲಿಯಿಂದ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಇನ್ನು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ತಮಗಾದ ಅನುಭವವನ್ನು ಸಲ್ಮಾನ್ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
ಸಲ್ಮಾನ್ ಯೂಸುಫ್ ಇಂದು ಬೆಳಿಗ್ಗೆ ತಮ್ಮ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು ಅದರಲ್ಲಿ ಕನ್ನಡದಲ್ಲಿ ಮಾತನಾಡದ್ದಕ್ಕೆ ವಿಮಾನ ನಿಲ್ದಾಣದಲ್ಲಿ ತನಗೆ ಹೇಗೆ ಕಿರುಕುಳ ನೀಡಲಾಯಿತು ಎಂಬುದನ್ನು ವಿವರಿಸಿದ್ದಾರೆ. ಕನ್ನಡದಲ್ಲಿ ಮಾತನಾಡಲು ಬರುವುದಿಲ್ಲ ಎಂಬ ಕಾರಣಕ್ಕೆ ಅಧಿಕಾರಿ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ಸಲ್ಮಾನ್ ಲೈವ್ ಬಂದು ತಮ್ಮ ಅನುಭವವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ನಾನು ದುಬೈಗೆ ತೆರಳಲು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿದ್ದಾಗ ಈ ಘಟನೆ ನಡೆದಿದೆ. ನನಗೆ ಭಾಷೆ ಅರ್ಥವಾಗುತ್ತದೆ. ಆದರೆ ಚೆನ್ನಾಗಿ ಮಾತನಾಡಲು ಬರುವುದಿಲ್ಲ. ಆದರೂ ಕನ್ನಡದಲ್ಲೇ ಹೇಳಲು ಪ್ರಯತ್ನಿಸಿದೆ. ಆದರೂ ಅಧಿಕಾರಿ ಪಾಸ್‌ಪೋರ್ಟ್ ತೋರಿಸಿ ತಂದೆ ತಾಯಿಯ ಹೆಸರು, ಹುಟ್ಟಿದ ಊರು ಹೇಳಿ ನೀವು ಮತ್ತು ನಿಮ್ಮ ತಂದೆ ಬೆಂಗಳೂರಿನಲ್ಲಿ ಹುಟ್ಟಿದ್ದು ನಿಮಗೆ ಕನ್ನಡ ಭಾಷೆ ಬರುವುದಿಲ್ಲವೇ? ಅಧಿಕಾರಿಯ ಪ್ರಶ್ನೆಗೆ ಉತ್ತರಿಸುವಾಗ ನನಗೆ ಕನ್ನಡ ಬರುವುದಿಲ್ಲ ಎಂದು ಸಲ್ಮಾನ್ ವಿಡಿಯೋದಲ್ಲಿ ಹೇಳಿದ್ದಾರೆ.
ನಾನು ಹುಟ್ಟಿದ್ದು ಬೆಂಗಳೂರಿನಲ್ಲಿ. ಆದರೆ ನಾನು ಆ ಭಾಷೆಯೊಂದಿಗೆ ಹುಟ್ಟಿದ್ದೇನೆ ಎಂದು ಅರ್ಥವಲ್ಲ. ನಾನು ಬೆಂಗಳೂರಿನಲ್ಲಿ ಹುಟ್ಟಿದ್ದು ಜಗತ್ತನ್ನು ಸುತ್ತಬಲ್ಲೆ. ನಾನು ಕನ್ನಡ ಭಾಷೆಯನ್ನು ಎಂದಿಗೂ ಅಧ್ಯಯನ ಮಾಡಿಲ್ಲ, ಏಕೆಂದರೆ ನನ್ನ ಶಾಲಾ ಅವಧಿಯಲ್ಲಿ ನಾನು ಎಂದಿಗೂ ದೇಶದಲ್ಲಿ ವಾಸಿಸಲಿಲ್ಲ. ನಾನು ಸೌದಿಯಲ್ಲಿ ಶಿಕ್ಷಣ ಪಡೆದಿದ್ದೇನೆ, ನನಗೆ ತಿಳಿದಿರುವ ಕನ್ನಡ ಭಾಷೆ ನನ್ನ ಸ್ನೇಹಿತರ ಮೂಲಕ ಎಂದು ಹೇಳಿದ್ದಾರೆ.
ಸಲ್ಮಾನ್ ಯೂಸುಫ್ ತಮ್ಮ ನೃತ್ಯ ಕೌಶಲ್ಯಕ್ಕೆ ಹೆಸರುವಾಸಿಯಾಗಿದ್ದಾರೆ. ಅವರು 'ಡ್ಯಾನ್ಸ್ ಇಂಡಿಯಾ ಡ್ಯಾನ್ಸ್' ನ ಮೊದಲ ಸೀಸನ್ ಗೆದ್ದರು, ನಂತರ ಅವರ ಜನಪ್ರಿಯತೆ ಹೆಚ್ಚಾಯಿತು. ಇದಾದ ನಂತರ ರೆಮೋ ಡಿಸೋಜಾ ಜೊತೆ 'ಎಬಿಸಿಡಿ' ಚಿತ್ರದಲ್ಲಿ ಕೆಲಸ ಮಾಡಿದರು. ಅದೇ ಸಮಯದಲ್ಲಿ, ಅವರು ಬಾಲಿವುಡ್ ನಟರಾದ ವರುಣ್ ಧವನ್ ಮತ್ತು ಶ್ರದ್ಧಾ ಕಪೂರ್ ಅವರೊಂದಿಗೆ 'ಸ್ಟ್ರೀಟ್ ಡ್ಯಾನ್ಸರ್ 3D' ಚಿತ್ರದಲ್ಲಿ ಕಾಣಿಸಿಕೊಂಡರು.