ಹಯವದನ ನಿರ್ದೇಶನದ ಎಲ್ಲೋ ಜೋಗಪ್ಪ ನಿನ್ನರಮನೆ ಚಿತ್ರಕ್ಕೆ ಸಂಜನಾ ದಾಸ್ ಎಂಟ್ರಿ
ನಟಿ ಸಂಜನಾ ದಾಸ್ ಅವರು ನಿರ್ದೇಶಕ ಹಯವದನ ಅವರ ಮುಂದಿನ ಅಂಜನ್ ನಾಗೇಂದ್ರ ಮತ್ತು ವೆನ್ಯಾ ರೈ ನಟಿಸಿರುವ ಎಲ್ಲೋ ಜೋಗಪ್ಪ ನಿನ್ನರಮನೆ ತಾರಾಗಣವನ್ನು ಸೇರಿದ್ದಾರೆ.
Published: 20th March 2023 10:37 AM | Last Updated: 20th March 2023 10:38 AM | A+A A-

ಸಂಜನಾ ದಾಸ್
ನಟಿ ಸಂಜನಾ ದಾಸ್ ಅವರು ನಿರ್ದೇಶಕ ಹಯವದನ ಅವರ ಮುಂದಿನ ಅಂಜನ್ ನಾಗೇಂದ್ರ ಮತ್ತು ವೆನ್ಯಾ ರೈ ನಟಿಸಿರುವ ಎಲ್ಲೋ ಜೋಗಪ್ಪ ನಿನ್ನರಮನೆ ತಾರಾಗಣವನ್ನು ಸೇರಿದ್ದಾರೆ.
ರೂಪದರ್ಶಿ-ನಟಿಯಾಗಿರುವ ಸಂಜನಾ, ಮನಸ್ಮಿತಾ ಮತ್ತು ಇನ್ನೂ ಬಿಡುಗಡೆಯಾಗದ ಕೆಟಿಎಂ ಚಿತ್ರದ ಮೂಲಕ ತಮ್ಮ ಚಲನಚಿತ್ರ ವೃತ್ತಿಜೀವನವನ್ನು ಪ್ರಾರಂಭಿಸಿದರು. ಎಲ್ಲೋ ಜೋಗಪ್ಪ ನಿನ್ನರಮನೆ ಅವರ ಮೂರನೇ ಸಿನಿಮಾ ಆಗಿದೆ. ಟ್ರಾವೆಲ್ ಆಧರಿತ ಯೂತ್ ಎಂಟರ್‌ಟೈನರ್ ಆಗಿರುವ ಸಿನಿಮಾ ಚಿತ್ರೀಕರಣಕ್ಕೆ ಸಂಜನಾ ಅವರು ಮಾರ್ಚ್ 29ರಿಂದ ಮನಾಲಿಯಲ್ಲಿ ತಂಡವನ್ನು ಸೇರಿಕೊಳ್ಳಲಿದ್ದಾರೆ.
ಇದನ್ನೂ ಓದಿ: 'ಎಲ್ಲೋ ಜೋಗಪ್ಪ ನಿನ್ನರಮನೆ' ಸಿನಿಮಾಗೆ ನಟಿ ವೆನ್ಯಾ ರೈ ನಾಯಕಿ
ಪಂಡೋರಸ್ ಬಾಕ್ಸ್ ಪ್ರೊಡಕ್ಷನ್ ಮತ್ತು ಕೃಷ್ಣಛಾಯಾ ಚಿತಾಲ್ ಬ್ಯಾನರ್ ಅಡಿಯಲ್ಲಿ ಪವನ್ ಸಿಮಿಕೇರಿ ಅವರ ಸಹಯೋಗದೊಂದಿಗೆ ಹಯವದನ ಅವರು ಎಲ್ಲೋ ಜೋಗಪ್ಪ ನಿನ್ನರಮನೆ ಸಿನಿಮಾಗೆ ನಿರ್ಮಾಪಕರಾಗಿ ಬಡ್ತಿ ಪಡೆಯುತ್ತಿದ್ದಾರೆ.
ಡಾನ್ ಮ್ಯಾಕ್ಸ್ ನಿರ್ದೇಶನದ '@' ಮೂಲಕ ಸಂಜನಾ ದಾಸ್ ಮಲಯಾಳಂಗೂ ಕಾಲಿಡುತ್ತಿದ್ದಾರೆ.