ಕುಗ್ಗಿದ್ದೆ... ಎದ್ದು ಬಂದಿದೀನಿ.. ಈಗ ಡೋಂಟ್ ಕೇರ್ ಎಂದ ಕಿರಿಕ್ ಕೀರ್ತಿ! ಅಷ್ಟಕ್ಕೂ ಆಗಿದ್ದೇನು?
ಬೆಂಗಳೂರು: ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ವೈಯಕ್ತಿಕ ವಿಚಾರವಾಗಿ ಹೆಚ್ಚು ಸುದ್ದಿಯಾಗಿದ್ದ ಮಾಜಿ ಬಿಗ್ ಬಾಸ್ ಸ್ಪರ್ಧಿ ಕಿರಿಕ್ ಕೀರ್ತಿ ತಮ್ಮ ಸೈದ್ದಾಂತಿಕ ವಿರೋಧಿಗಳ ವಿರುದ್ಧ ಕಿಡಿಕಾರಿದ್ದಾರೆ.
ಈ ಕುರಿತು ಫೇಸ್ ಬುಕ್ ಖಾತೆಯಲ್ಲಿ ಅವರು ಮಾಡಿರುವ ಫೋಸ್ಟ್ ಗಮನ ಸೆಳೆದಿದೆ. ಮಾಡ್ರೋ.. ಮಾಡ್ರಿ... ಕುಗ್ಗಿದ್ದೆ. ಎದ್ದು ಬಂದಿದೀನಿ. ಈಗ ನಿಮ್ಮಂತವರಿಗೆಲ್ಲಾ ಡೋಂಟ್ ಕೇರ್ ಎಂದಿದ್ದಾರೆ.
ಕಿರಿಕ್ ಕೀರ್ತಿ ಅವರು ಪತ್ನಿಯಿಂದ ದೂರವಾಗಿದ್ದಾರೆ ಎಂಬಂತಹ ವದಂತಿಗಳು ಸಾಮಾಜಿಕ ಸುದ್ದಿಗಳಲ್ಲಿ ಹರಿದಾಡಿತ್ತು. ಅಲ್ಲದೇ, ನಾನು ಈ ಜಗತ್ತಿಗೆ ವಿದಾಯ ಹೇಳಿಬಿಡಬೇಕು ಎಂದು ನಿರ್ಧಾರ ಮಾಡಿದ್ದೆ. ಡೆತ್ ನೋಟ್ನ್ನು ಕೂಡ ಬರೆದಿಟ್ಟಿದ್ದೆ’ ಎಂದು ಅವರೇ ಬರೆದುಕೊಂಡಿದ್ದ ಪೋಸ್ಟ್ ಕೂಡಾ ವೈರಲ್ ಆಗಿತ್ತು.
ಈ ವದಂತಿಗಳಿಗೆ ಇತ್ತೀಚಿಗೆ ನೆಟ್ಟಿಗರ ವಿರುದ್ಧ ಗರಂ ಆಗಿದ್ದ ಕಿರಿಕ್ ಕೀರ್ತಿ, ನಮ್ಮನ್ನು ಬದುಕೋಕೆ ಬಿಡ್ರಪ್ಪ... ಯಾಕ್ ಇಷ್ಟು ಟಾರ್ಚರ್ ಕೊಡ್ತೀರಿ..? ಅಂತಾ ಇತ್ತೀಚಿಗೆ ಒಂದು ಫೋಸ್ಟ್ ಮಾಡಿದ್ದರು. ಇದೀಗ ಅವರು ಡೋಂಟ್ ಕೇರ್ ಎಂದಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ