
ಊರ್ವಶಿ ರೌಟೇಲಾ-ರಿಷಬ್ ಪಂತ್
ನವದೆಹಲಿ: ಭಾರತ ಕ್ರಿಕೆಟ್ ತಂಡದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ ಮತ್ತು ಬಾಲಿವುಡ್ ನಟಿ ಊರ್ವಶಿ ರೌಟೇಲಾ ಸುದ್ದಿ ಸದಾ ಸುದ್ದಿಯಲ್ಲಿರುತ್ತದೆ.
ಇನ್ನು ರಿಷಭ ಹೆಸರಿನ ಜೊತೆಗೆ ಊರ್ವಶಿ ರೌಟೇಲಾ ಹೆಸರು ತಳುಕು ಹಾಕಲಾಗುತ್ತಿತ್ತು. ಇದಾದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಇಬ್ಬರ ನಡುವೆ ವಾಗ್ವಾದವೂ ನಡೆದಿತ್ತು. ಗಮನಾರ್ಹವೆಂದರೆ ರಿಷಬ್ ಪಂತ್ ಅಪಘಾತದ ನಂತರ ಇಬ್ಬರ ಬಗ್ಗೆ ಯಾವುದೇ ಚರ್ಚೆಗಳು ನಡೆದಿಲ್ಲ. ಆದಾಗ್ಯೂ, ಈಗ ಮತ್ತೊಮ್ಮೆ ಊರ್ವಶಿ ರೌಟೇಲಾ ಅವರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಆ ವೀಡಿಯೋದಲ್ಲಿ ಊರ್ವಶಿ ಪಂತ್ ಹೆಸರಿನಿಂದ ತಪ್ಪಿಸಿಕೊಳ್ಳುತ್ತಿರುವುದನ್ನು ಕಾಣಬಹುದಾಗಿದೆ.
ವಾಸ್ತವವಾಗಿ, ಊರ್ವಶಿ ರೌಟೇಲಾ ಅವರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಇದರಲ್ಲಿ ಪತ್ರಕರ್ತರೊಬ್ಬರು ರಿಷಬ್ ಪಂತ್ ಬಗ್ಗೆ ಕೆಲವು ಪ್ರಶ್ನೆಗಳನ್ನು ಕೇಳುತ್ತಾರೆ. ರಿಷಭ್ ಹೆಸರು ಕೇಳುತ್ತಿದ್ದಂತೆ ಊರ್ವಶಿಯ ಮುಖ ಕಳೆಗುಂದುತ್ತದೆ. ಪಂತ್ ಗೆ ಸಂಬಂಧಿಸಿದ ಪ್ರಶ್ನೆಗೆ ಪತ್ರಕರ್ತ ಊರ್ವಶಿಗೆ ಉತ್ತರ ಕೊಡಿ ಎಂದು ಕೇಳಿದಾಗ ಸಿಟ್ಟಿಗೆದ್ದ ಆಕೆ ಟಿಆರ್ ಪಿ ಗಾಗಿ ಇದನ್ನೆಲ್ಲಾ ಮಾಡುತ್ತಿದ್ದೀರಿ ಎಂದು ಹರಿಹಾಯುತ್ತಾರೆ. ಪಂತ್ ಹೆಸರನ್ನು ತಪ್ಪಿಸಲು ರೌಟೇಲಾ ಬಯಸಿದ್ದಾರೆಂದು ವೀಡಿಯೊದಲ್ಲಿ ತೋರುತ್ತಿದೆ.
ಇದನ್ನೂ ಓದಿ: ‘ಕಾಂತಾರ 2' ಸಿನಿಮಾದಲ್ಲಿ ರಿಷಬ್ ಶೆಟ್ಟಿ ಜೊತೆ ನಟಿ ಊರ್ವಶಿ ರೌಟೇಲಾ: ಚಿತ್ರ ತಂಡ ಹೇಳಿದ್ದೇನು?
2022ರ ಡಿಸೆಂಬರ್ ನಲ್ಲಿ ರಿಷಬ್ ಪಂತ್ ಕಾರು ಭೀಕರ ಅಪಘಾತಕ್ಕೀಡಾಗಿತ್ತು. ಇದರಿಂದಾಗಿ ಪಂತ್ ಗಂಭೀರವಾಗಿ ಗಾಯಗೊಂಡಿದ್ದರು. ಅವರ ಬೆನ್ನು, ಕೈ, ಮೊಣಕಾಲು, ಕಾಲುಗಳಲ್ಲಿ ಸಾಕಷ್ಟು ಗಾಯವಾಗಿತ್ತು. ಅಂದಿನಿಂದ ಅವರು ಕ್ರಿಕೆಟ್ ನಿಂದ ದೂರ ಸರಿದಿದ್ದಾರೆ. ಪಂತ್ ತನ್ನ ಗಾಯಗಳಿಂದ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದರೂ, ಅವರ ಆಟವನ್ನು ನೋಡಲು ಇನ್ನು ಕಾಯಬೇಕಿದೆ.