ದರ್ಶನ್ ಅಭಿನಯದ 'ಕಾಟೇರ' ಚಿತ್ರದಲ್ಲಿ ಮಾಲಾಶ್ರೀ ಪುತ್ರಿ ರಾಧನ ರಾಮ್ ನಟನೆ
ಬುದ್ಧಿವಂತ, ಧೈರ್ಯಶಾಲಿ ಮತ್ತು ಆಕರ್ಷಕ ಪಾತ್ರ ಎಂದು ಎಂದು ನಿರ್ದೇಶಕ ತರುಣ್ ಕಿಶೋರ್ ಸುಧೀರ್ 'ಕಾಟೇರ'ದಲ್ಲಿನ ತಮ್ಮ ನಾಯಕಿಯನ್ನು ವಿವರಿಸುತ್ತಾರೆ. ದರ್ಶನ್ ಅಭಿನಯದ ಆ್ಯಕ್ಷನ್ ಕಮರ್ಷಿಯಲ್ ಎಂಟರ್‌ಟೈನರ್ ಮೂಲಕ ಮಾಲಾಶ್ರೀ ಅವರ ಪುತ್ರಿ ರಾಧನಾ ರಾಮ್ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ.
Published: 25th March 2023 10:43 AM | Last Updated: 25th March 2023 03:25 PM | A+A A-

ರಾಧನಾ ರಾಮ್
ಬುದ್ಧಿವಂತ, ಧೈರ್ಯಶಾಲಿ ಮತ್ತು ಆಕರ್ಷಕ ಪಾತ್ರ ಎಂದು ಎಂದು ನಿರ್ದೇಶಕ ತರುಣ್ ಕಿಶೋರ್ ಸುಧೀರ್ 'ಕಾಟೇರ'ದಲ್ಲಿನ ತಮ್ಮ ನಾಯಕಿಯನ್ನು ವಿವರಿಸುತ್ತಾರೆ. ದರ್ಶನ್ ಅಭಿನಯದ ಆ್ಯಕ್ಷನ್ ಕಮರ್ಷಿಯಲ್ ಎಂಟರ್‌ಟೈನರ್ ಮೂಲಕ ಮಾಲಾಶ್ರೀ ಅವರ ಪುತ್ರಿ ರಾಧನಾ ರಾಮ್ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ.
ಚಿತ್ರತಂಡ ಇತ್ತೀಚೆಗಷ್ಟೇ ಹಬ್ಬದ ಸಂದರ್ಭದಲ್ಲಿ ನಾಯಕಿಯ ಫಸ್ಟ್ ಲುಕ್ ಅನ್ನು ಬಹಿರಂಗಪಡಿಸಿದೆ ಮತ್ತು ಅವರ ಪಾತ್ರದ ಹೆಸರು ಪ್ರಭಾವತಿ ಎಂದು ಹಂಚಿಕೊಂಡಿದೆ. ಫಸ್ಟ್ ಲುಕ್‌ಗೆ ನೀಡಿರುವ ಶೀರ್ಷಿಕೆಯಲ್ಲಿ, 'ಒಂದು ಶಕ್ತಿಯುತ ಆತ್ಮ, ತನ್ನ ಬೆರಗುಗೊಳಿಸುವ ವರ್ತನೆಯಿಂದ ನಿಮ್ಮನ್ನು ಮೋಡಿ ಮಾಡುತ್ತದೆ. 70ರ ದಶಕದಲ್ಲಿ ಹಳ್ಳಿಯ ಹಿನ್ನೆಲೆಯ ಈ ಚಿತ್ರದಲ್ಲಿ ರಾಧನ ರಾಮ್ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ' ಎಂದು ಬರೆಯಲಾಗಿದೆ.
'ರಾಧನಾ ಅವರು ಚಿತ್ರೀಕರಣಕ್ಕೆ ಚೆನ್ನಾಗಿ ಸಿದ್ಧಳಾಗಿದ್ದಾರೆ ಮತ್ತು ಈ ಪಾತ್ರವನ್ನು ನಿಭಾಯಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಹೊಸಬರಿಂದ ಬಂದಿರುವ ಇವರ ಪಾತ್ರ ಪ್ರೇಕ್ಷಕರಿಗೆ ಅಚ್ಚರಿ ಮೂಡಿಸಲಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೊತೆ ನಟಿಸಿರುವ ಅವರು ಈ ಚಿತ್ರಕ್ಕೆ ಸಾಕಷ್ಟು ಕೊಡುಗೆ ನೀಡಲಿದ್ದಾರೆ' ಎನ್ನುತ್ತಾರೆ ನಿರ್ದೇಶಕ ತರುಣ್.
ಈಮಧ್ಯೆ, ಚಿತ್ರತಂಡ ಸೋಮವಾರದಿಂದ ಮುಂದಿನ ಚಿತ್ರೀಕರಣವನ್ನು ಪುನರಾರಂಭಿಸಲಿದೆ ಮತ್ತು ಮುಂದಿನ 25 ದಿನಗಳಲ್ಲಿ ಬೆಂಗಳೂರು ಮತ್ತು ಮೈಸೂರಿನಲ್ಲಿ ನಿರ್ಣಾಯಕ ಭಾಗಗಳನ್ನು ಪೂರ್ಣಗೊಳಿಸಲಿದೆ.
ಇದನ್ನೂ ಓದಿ: 'ನನಗಿನ್ನೂ ನಂಬೋಕೆ ಆಗ್ತಿಲ್ಲ': ದರ್ಶನ್ ಜೊತೆ ಸಿನಿಮಾ ಬಗ್ಗೆ ರಾಧನಾ ರಾಮ್ ಮಾತು!
ಕಾಟೇರವನ್ನು ರಾಕ್‌ಲೈನ್ ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್ ಅಡಿಯಲ್ಲಿ ರಾಕ್‌ಲೈನ್ ವೆಂಕಟೇಶ್ ನಿರ್ಮಿಸಿದ್ದಾರೆ. ವಿ ಹರಿಕೃಷ್ಣ ಅವರ ಸಂಗೀತ ಮತ್ತು ಸುಧಾಕರ್ ಎಸ್ ರಾಜ್ ಅವರ ಛಾಯಾಗ್ರಹಣವಿದೆ. ಈ ಚಿತ್ರದಲ್ಲಿ ದಕ್ಷಿಣ ಭಾರತದ ನಟ ಜಗಪತಿ ಬಾಬು ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.