ನಟ ಶಿವರಾಜ್‌ಕುಮಾರ್ ಪುತ್ರಿ ನಿವೇದಿತಾ ಚಿತ್ರ ನಿರ್ಮಾಣಕ್ಕೆ ಮುಂದು

ನಟ ಶಿವರಾಜ್ ಕುಮಾರ್ ಅವರ ಪುತ್ರಿ ನಿವೇದಿತಾ ಅವರು ಧಾರಾವಾಹಿ ಮತ್ತು ಮೂರು ವೆಬ್ ಸರಣಿಗಳನ್ನು (ಹನಿಮೂನ್, ಬೈ ಮಿಸ್ಟೇಕ್ ಮತ್ತು ಹೇಟ್ ಯು ರೋಮಿಯೋ) ನಿರ್ಮಿಸಿದ್ದಾರೆ. ಅವರು ಇದೀಗ 'ಶ್ರೀ ಮುತ್ತು ಸಿನಿ ಸರ್ವಿಸಸ್ ಬ್ಯಾನರ್' ಅಡಿಯಲ್ಲಿ ಸಿನಿಮಾ ನಿರ್ಮಾಣದೊಂದಿಗೆ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ.
ನಿವೇದಿತಾ ಶಿವರಾ‌ಜ್‌ಕುಮಾರ್
ನಿವೇದಿತಾ ಶಿವರಾ‌ಜ್‌ಕುಮಾರ್

ಕಲೆಯ ಮೇಲಿನ ಪ್ರೀತಿ ಡಾ. ರಾಜ್‌ಕುಮಾರ್ ಅವರ ಕುಟುಂಬದಲ್ಲಿ ಎಷ್ಟು ಆಳವಾಗಿದೆ ಎಂಬುದಕ್ಕೆ ಕುಟುಂಬದ ಪ್ರತಿಯೊಬ್ಬ ಸದಸ್ಯರು ಒಂದಿಲ್ಲೊಂದು ಕಲಾತ್ಮಕ ಕೆಲಸಗಳಲ್ಲಿ ತೊಡಗಿಸಿಕೊಂಡಿರುವುದೇ ಸಾಕ್ಷಿ. ನಟ ಶಿವರಾಜ್ ಕುಮಾರ್ ಅವರ ಪುತ್ರಿ ನಿವೇದಿತಾ ಅವರು ಧಾರಾವಾಹಿ ಮತ್ತು ಮೂರು ವೆಬ್ ಸರಣಿಗಳನ್ನು (ಹನಿಮೂನ್, ಬೈ ಮಿಸ್ಟೇಕ್ ಮತ್ತು ಹೇಟ್ ಯು ರೋಮಿಯೋ) ನಿರ್ಮಿಸಿದ್ದಾರೆ. ಅವರು ಇದೀಗ 'ಶ್ರೀ ಮುತ್ತು ಸಿನಿ ಸರ್ವಿಸಸ್ ಬ್ಯಾನರ್' ಅಡಿಯಲ್ಲಿ ಸಿನಿಮಾ ನಿರ್ಮಾಣದೊಂದಿಗೆ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ.

ಈ ಹೊಸ ಅಧ್ಯಾಯವು ಮೇ 1 ರಿಂದ ಪ್ರಾರಂಭವಾಗಿದೆ. ಅವರು ನಿರ್ಮಾಪಕಿಯಾಗಿ ತಮ್ಮ ಮೊದಲ ಚಲನಚಿತ್ರವನ್ನು ಪೋಸ್ಟರ್ ಜೊತೆಗೆ ಘೋಷಿಸಿದರು. ಇದು ನಿರ್ದೇಶಕ ಮತ್ತು ನಟ ವಂಶಿ ಕೃಷ್ಣ ಅವರ ಚೊಚ್ಚಲ ಚಿತ್ರವಾಗಿದೆ. ಚರಣ್ ರಾಜ್ ಮತ್ತು ಅಭಿಲಾಷ್ ಕಲಹತ್ತಿ ಕ್ರಮವಾಗಿ ಸಂಗೀತ ಮತ್ತು ಛಾಯಾಗ್ರಹಣ ಮಾಡಲಿದ್ದಾರೆ.

ಅಣ್ಣಾವ್ರು ಎಂದೇ ಖ್ಯಾತರಾಗಿರುವ ಡಾ. ರಾಜ್‌ಕುಮಾರ್ ಅವರು ತೆರೆಯ ಮೇಲೆ ಮನಮೋಹಕ ನಟರಾಗಿದ್ದರು ಮತ್ತು ಅವರ ಪತ್ನಿ ಪಾರ್ವತಮ್ಮ ಅವರು ತಮ್ಮ ನಿರ್ಮಾಣ ಸಂಸ್ಥೆಯ ಬೆನ್ನೆಲುಬಾಗಿ ತೆರೆಮರೆಯಲ್ಲಿ ನಿರ್ಣಾಯಕ ಪಾತ್ರವನ್ನು ನಿರ್ವಹಿಸಿದ್ದರು. ಅವರು ನಿರ್ಮಾಣ ಸಂಸ್ಥೆ ಪೂರ್ಣಿಮಾ ಎಂಟರ್‌ಪ್ರೈಸಸ್ ಅಡಿಯಲ್ಲಿ ಅನೇಕ ಸೂಪರ್ ಹಿಟ್ ಚಲನಚಿತ್ರಗಳನ್ನು ನಿರ್ಮಿಸಿದರು.

ಗೀತಾ ಪಿಕ್ಚರ್ಸ್ ಅಡಿಯಲ್ಲಿ ಗೀತಾ ಶಿವರಾಜ್‌ಕುಮಾರ್ ಮತ್ತು ಪಿಆರ್‌ಕೆ ನಿರ್ಮಾಣದ ಅಡಿಯಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರೊಂದಿಗೆ ಡಾ. ರಾಜ್ ಕುಟುಂಬದ ಈ ಪರಂಪರೆ ಈಗಲೂ ಮುಂದುವರೆದಿದೆ. ಈಗ ಶಿವಣ್ಣನ ಎರಡನೇ ಪುತ್ರಿ ನಿವೇದಿತಾ ಶಿವರಾಜ್‌ಕುಮಾರ್ ತಮ್ಮದೇ ನಿರ್ಮಾಣ ಸಂಸ್ಥೆಯಡಿಯಲ್ಲಿ ಚೊಚ್ಚಲ ಸಿನಿಮಾ ಮಾಡುತ್ತಿದ್ದಾರೆ.

'ಸಿನಿಮಾ ಇಂಡಸ್ಟ್ರಿ ಪುರುಷ ಪ್ರಧಾನವಾಗಿದ್ದ ಕಾಲದಲ್ಲಿ ನಿರ್ಮಾಪಕಿಯಾಗಿ ನನ್ನ ಅಜ್ಜಿ ಯಶಸ್ಸು ಸಾಧಿಸಿತ್ತು ನನಗೆ ಸ್ಪೂರ್ತಿದಾಯಕವಾಗಿತ್ತು' ಎಂದು ನಿವೇದಿತಾ ಅವರು ಉದ್ಯಮಕ್ಕೆ ಏಕೆ ಪ್ರವೇಶಿಸಲು ನಿರ್ಧರಿಸಿದರು ಎಂಬುದನ್ನು ವಿವರಿಸುತ್ತಾರೆ.

'ನಾನು ಧಾರಾವಾಹಿ ನಿರ್ಮಾಣದೊಂದಿಗೆ ವೃತ್ತಿಯನ್ನು ಪ್ರಾರಂಭಿಸಿದೆ ಮತ್ತು ಮೂರು ವೆಬ್ ಸರಣಿಗಳ ನಿರ್ಮಾಣ ಮಾಡಿದ್ದೇನೆ. ಆದರೆ, ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಕನ್ನಡ ವೆಬ್ ಸರಣಿಗಳಿಗೆ ಹೆಚ್ಚು ಬೇಡಿಕೆಯಿಲ್ಲ ಎಂಬುದನ್ನು ನಾನು ಅರಿತುಕೊಂಡೆ. ಕಳೆದ ಕೆಲವು ವರ್ಷಗಳಿಂದ ಇದನ್ನು ಸ್ಥಾಪಿಸಲು ಪ್ರಯತ್ನಿಸುತ್ತಿದ್ದರೂ, ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅದರ ಹೊರತಾಗಿಯೂ, ನಾನು ಪ್ರಯತ್ನಿಸುವುದನ್ನು ಮುಂದುವರಿಸುತ್ತೇನೆ. ಈ ಮಧ್ಯೆ, ನಾನು ವಂಶಿ ಕೃಷ್ಣ ಅವರ ಸ್ಕ್ರಿಪ್ಟ್ ಅನ್ನು ಕೇಳಿದೆ ಮತ್ತು ಅವರ ಆಲೋಚನೆಗೆ ಪ್ರಭಾವಿತಳಾದೆ. ಹಾಗಾಗಿ ನಾನು ಸಿನಿಮಾ ನಿರ್ಮಾಣಕ್ಕೆ ನಿರ್ಧರಿಸಿದೆ. ಇದೀಗ ವಂಶಿ ಕೃಷ್ಣ ಅವರೇ ನಿರ್ದೇಶಿಸಿ ನಟಿಸುವ ಸಿನಿಮಾದೊಂದಿಗೆ ಕೆಲಸ ಪ್ರಾರಂಭಿಸುತ್ತೇನೆ' ಎಂದು ಅವರು ಹೇಳುತ್ತಾರೆ.

ಯುವ ನಿರ್ಮಾಪಕಿ ತಮ್ಮ ಪ್ರೊಡಕ್ಷನ್ ಹೌಸ್ ಅನ್ನು ಅನನ್ಯವಾಗಿಸಲು ಸ್ಪಷ್ಟ ಯೋಜನೆಯನ್ನು ಹೊಂದಿದ್ದಾರೆ. ತಾಂತ್ರಿಕ ಉತ್ಕೃಷ್ಟತೆಯನ್ನು ಉಳಿಸಿಕೊಂಡು ಮತ್ತು ಹೊಸ ಪ್ರತಿಭೆಗಳನ್ನು ಪ್ರೋತ್ಸಾಹಿಸುವಾಗ ಸಮಕಾಲೀನ ಮತ್ತು ಆಸಕ್ತಿದಾಯಕ ವಿಷಯಗಳೊಂದಿಗೆ ಚಲನಚಿತ್ರಗಳನ್ನು ಹೊರತರಲು ಬಯಸುತ್ತಾರೆ. 

'ನಾನು ಹೆಚ್ಚಾಗಿ ಹೊಸಬರು ಮತ್ತು ನನ್ನ ವಯಸ್ಸಿನ ಜನರೊಂದಿಗೆ ಕೆಲಸ ಮಾಡುವ ಗುರಿಯನ್ನು ಹೊಂದಿದ್ದೇನೆ. ಕಂಟೆಂಟ್ ಮೇಲೆ ಗಮನ ಕೇಂದ್ರೀಕರಿಸುತ್ತೇನೆ ಮತ್ತು ಕಮರ್ಷಿಯಲ್ ಅಥವಾ ಮುಖ್ಯವಾಹಿನಿಯ ಚಲನಚಿತ್ರಗಳಿಗೆ ಪ್ರವೇಶಿಸುವುದಿಲ್ಲ' ಎಂದು ನಿವೇದಿತಾ ಹೇಳುತ್ತಾರೆ. 

ಅವರು ತಮ್ಮ ತಂದೆಯ ಮಾರ್ಗದರ್ಶನ ಮತ್ತು ಬೆಂಬಲಕ್ಕಾಗಿ ಧನ್ಯವಾದಗಳನ್ನು ಅರ್ಪಿಸುತ್ತಾರೆ. 'ವಾಸ್ತವವಾಗಿ, ಅವರು ಚಲನಚಿತ್ರ ನಿರ್ಮಾಣವನ್ನು ಪ್ರಾರಂಭಿಸಲು ನನಗೆ ಹೇಳಿದರು. ಅವರು ಈಗ ಬರುತ್ತಿರುವ ಸ್ಕ್ರಿಪ್ಟ್‌ಗಳನ್ನು ಕೇಳಲು ಕುಳಿತುಕೊಂಡರು ಮತ್ತು ಆಗಾಗ್ಗೆ ನನಗೆ ಅವರ ಪ್ರತಿಕ್ರಿಯೆಯನ್ನು ನೀಡುತ್ತಿದ್ದರು. ಮೌಲ್ಯಯುತವಾದ ಅಭಿಪ್ರಾಯಗಳನ್ನು ತೆಗೆದುಕೊಳ್ಳುವಲ್ಲಿ ಅವರು ನನ್ನ ವಿಶ್ವಾಸಾರ್ಹ ವ್ಯಕ್ತಿಯಾಗಿರುತ್ತಾರೆ' ಎನ್ನುತ್ತಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com