ಲಿಖಿತ್ ಕುಮಾರ್ ನಿರ್ದೇಶನದ ಪ್ರಯೋಗಾತ್ಮಕ ಥ್ರಿಲ್ಲರ್‌ನಲ್ಲಿ ಮಾಹಿರ್ ಮೊಹಿಯುದ್ದೀನ್- ಚೈತ್ರಾ ಜೆ ಆಚಾರ್
ನಿರ್ದೇಶಕ ಲಿಖಿತ್ ಕುಮಾರ್ ಪ್ರಯೋಗಾತ್ಮಕ ಥ್ರಿಲ್ಲರ್‌ನೊಂದಿಗೆ ಸ್ಯಾಂಡಲ್‌ವುಡ್‌ಗೆ ಪ್ರವೇಶ ಮಾಡಲು ಸಿದ್ಧರಾಗಿದ್ದಾರೆ. ಚಿತ್ರದಲ್ಲಿ ಹೊಸ ಮುಖ ಮಾಹಿರ್ ಮೊಹಿಯುದ್ದೀನ್ ನಟಿಸಿದ್ದು, ಚೈತ್ರಾ ಜೆ ಆಚಾರ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಹರಿಣಿ ಸುಂದರರಾಜನ್ ಅವರು ವಿಶೇಷ ಹಾಡೊಂದನ್ನು ಹಾಡಿದ್ದಾರೆ.
Published: 03rd May 2023 11:52 AM | Last Updated: 03rd May 2023 05:09 PM | A+A A-

ಚೈತ್ರಾ ಜೆ ಆಚಾರ್
ನಿರ್ದೇಶಕ ಲಿಖಿತ್ ಕುಮಾರ್ ಪ್ರಯೋಗಾತ್ಮಕ ಥ್ರಿಲ್ಲರ್‌ನೊಂದಿಗೆ ಸ್ಯಾಂಡಲ್‌ವುಡ್‌ಗೆ ಪ್ರವೇಶ ಮಾಡಲು ಸಿದ್ಧರಾಗಿದ್ದಾರೆ. ಚಿತ್ರದಲ್ಲಿ ಹೊಸ ಮುಖ ಮಾಹಿರ್ ಮೊಹಿಯುದ್ದೀನ್ ನಟಿಸಿದ್ದು, ಚೈತ್ರಾ ಜೆ ಆಚಾರ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಹರಿಣಿ ಸುಂದರರಾಜನ್ ಅವರು ವಿಶೇಷ ಹಾಡೊಂದನ್ನು ಹಾಡಿದ್ದಾರೆ.

ಶೂಟಿಂಗ್ ಕಂಪ್ಲೀಟ್ ಮಾಡಿರುವ ಲಿಕಿತ್ ತಮ್ಮ ಸಿನಿಮಾ ಹೇಗೆ ಯೂನಿಕ್ ಆಗಿರುತ್ತದೆ ಎಂಬುದನ್ನು ವಿವರಿಸುತ್ತಾರೆ. 'ಮಾಹಿರ್ ಮೊಹಿಯುದ್ದೀನ್ ನಿರ್ವಹಿಸಿರುವ ನಾಯಕನ ಪಾತ್ರ ಸಿದ್ಧಾರ್ಥ್, ಶೇ ತೊಂಬತ್ತರಷ್ಟು ಪರದೆಯ ಸಮಯವನ್ನು ಪಡೆಯುತ್ತದೆ ಮತ್ತು ಆತನೊಂದಿಗೆ ಐದು ಪಾತ್ರಗಳು ಪರದೆಯ ಮೇಲೆ ಕನಿಷ್ಠ ಉಪಸ್ಥಿತಿಯನ್ನು ಪಡೆಯುತ್ತವೆ ಮತ್ತು ತಮ್ಮ ಧ್ವನಿಯ ಮೂಲಕ ತಮ್ಮ ಪಾತ್ರಗಳನ್ನು ಮತ್ತಷ್ಟು ಪ್ರತಿನಿಧಿಸುತ್ತವೆ' ಎನ್ನುತ್ತಾರೆ.
ಕಥೆಯು ಸಿದ್ಧಾರ್ಥ್ ಸುತ್ತ ಸುತ್ತುತ್ತದೆ. ಆತ ಹೇಗೆ ಎದುರಾಗುವ ಜೀವನದ ಸವಾಲುಗಳನ್ನು ಎದುರಿಸುತ್ತಾನೆ ಮತ್ತು ಅವ್ಯವಸ್ಥೆಯ ಒಗಟುಗಳಿಂದ ಹೇಗೇ ಪಾರಾಗುತ್ತಾನೆ ಎಂಬುದಾಗಿರುತ್ತದೆ. ಚಿತ್ರವು ಸಮಸ್ಯೆಗಳಿಂದ ತುಂಬಿದ ಆತನ ಪ್ರಯಾಣ ಮತ್ತು ಉಳಿವಿಗಾಗಿ ಆತನ ಹೋರಾಟವನ್ನು ತೋರಿಸುತ್ತದೆ. ರಂಗಭೂಮಿ ಕಲಾವಿದ ಮಾಹಿರ್ ಮೊಹಿಯುದ್ದೀನ್ ಈ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಇದರಲ್ಲಿ ಶ್ರೀನಿವಾಸ್ ಪ್ರಭು, ಮಾಸ್ಟರ್ ಅನುರಾಗ್ ಮತ್ತು ಶಶಿಕಲಾ ಪ್ರಮುಖ ಪಾತ್ರಗಳಲ್ಲಿದ್ದಾರೆ.
ಲಕ್ಷ್ಯ ಆರ್ಟ್ ಬ್ಯಾನರ್ ಅಡಿಯಲ್ಲಿ ಟಿ ಶಿವಕುಮಾರ್ ನಿರ್ಮಾಣದ ಈ ಚಿತ್ರಕ್ಕೆ ಶಂಕರ್ ರಾಮನ್ ಮತ್ತು ರಘು ನಿಡುವಳ್ಳಿ ಸಂಭಾಷಣೆ, ಮಿಧುನ್ ಮುಕುಂದನ್ ಸಂಗೀತ ಮತ್ತು ಗೌತಮ್ ಕೃಷ್ಣ ಅವರ ಛಾಯಾಗ್ರಹಣವಿದೆ.