ರಕ್ಷಿತ್‌ ಶೆಟ್ಟಿ ಅಭಿನಯದ 777 ಚಾರ್ಲಿಗೆ ಮತ್ತೊಂದು ಗರಿ; ನಿರ್ದೇಶಕ ಕಿರಣ್‌ರಾಜ್‌ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ

ರಕ್ಷಿತ್ ಶೆಟ್ಟಿ ನಟಿಸಿರುವ 777 ಚಾರ್ಲಿ ಚಿತ್ರವು ದೆಹಲಿಯಲ್ಲಿ 13ನೇ ದಾದಾ ಸಾಹೇಬ್ ಫಾಲ್ಕೆ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಕ್ಕೆ ಅಧಿಕೃತವಾಗಿ ಆಯ್ಕೆಯಾಗಿದೆ. ಕಿರಣ್‌ರಾಜ್ ಅವರು ಚಿತ್ರೋತ್ಸವದಲ್ಲಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಸ್ವೀಕರಿಸಲು ಸಜ್ಜಾಗಿದ್ದಾರೆ.
777 ಚಾರ್ಲಿ ಚಿತ್ರದ ದೃಶ್ಯ - ಕಿರಣ್ ರಾಜ್
777 ಚಾರ್ಲಿ ಚಿತ್ರದ ದೃಶ್ಯ - ಕಿರಣ್ ರಾಜ್
Updated on

ಜೂನ್ 10ಕ್ಕೆ ಕಿರಣ್‌ರಾಜ್ ನಿರ್ದೇಶನದ 777 ಚಾರ್ಲಿ ಸಿನಿಮಾ ಬಿಡುಗಡೆಯಾಗಿ ವರ್ಷವಾಗಲಿದೆ. ಚಿತ್ರತಂಡ ವಾರ್ಷಿಕೋತ್ಸವವನ್ನು ಆಚರಿಸಲು ಸಿದ್ಧವಾಗಿದೆ. ಈಗಲೂ ಚಿತ್ರ ಹಾಟ್ ಟಾಪಿಕ್ ಆಗಿ ಮುಂದುವರಿಯುತ್ತಿದ್ದು, ಮತ್ತೊಂದು ಹೊಸ ಸುದ್ದಿ ಎಂದರೆ ರಕ್ಷಿತ್ ಶೆಟ್ಟಿ ನಟಿಸಿರುವ ಚಿತ್ರವು ದೆಹಲಿಯಲ್ಲಿ 13ನೇ ದಾದಾ ಸಾಹೇಬ್ ಫಾಲ್ಕೆ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಕ್ಕೆ ಅಧಿಕೃತವಾಗಿ ಆಯ್ಕೆಯಾಗಿದೆ. 

ಇದರ ಜೊತೆಗೆ, ಚಾರ್ಲಿ ಚಿತ್ರದ ಮೂಲಕ ನಿರ್ದೇಶಕರಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದ ಕಿರಣ್‌ರಾಜ್ ಅವರು ಚಿತ್ರೋತ್ಸವದಲ್ಲಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಸ್ವೀಕರಿಸಲು ಸಜ್ಜಾಗಿದ್ದಾರೆ.

ಈ ಬಗ್ಗೆ ಮಾತನಾಡುವ ಕಿರಣರಾಜ್, 'ಚಿತ್ರವನ್ನು ಗುರುತಿಸುತ್ತಿರುವುದು ಇಡೀ ಪಾತ್ರವರ್ಗ ಮತ್ತು ತಂಡದ ಶ್ರಮ ಮತ್ತು ಪರಿಶ್ರಮದ ಫಲಿತಾಂಶವಾಗಿದೆ ಎಂದು ನಾನು ನಂಬುತ್ತೇನೆ. ಒಂದು ಹಂತದಲ್ಲಿ, ನಮ್ಮ ಕನ್ನಡ ಚಲನಚಿತ್ರಗಳು ರಾಜ್ಯದ ಗಡಿಯನ್ನು ದಾಟುತ್ತಿರಲಿಲ್ಲ. ಆದರೆ, ಈಗ ನಮಗೆ ಸ್ಪರ್ಧಿಸಿ ಗೆಲ್ಲುವ ಅವಕಾಶವಿದ್ದು, ಅದು ದೊಡ್ಡ ಗೌರವವಾಗಿದೆ. ರಾಷ್ಟ್ರೀಯ ವೇದಿಕೆಗಳಲ್ಲಿ ತಾರೆಯರನ್ನು ಅಭಿನಂದಿಸುತ್ತಿರುವಾಗ, ಚಲನಚಿತ್ರವು ಮನ್ನಣೆಯನ್ನು ಪಡೆಯುವುದು ಅಷ್ಟೇ ಅಗತ್ಯವಾಗಿದೆ' ಎನ್ನುತ್ತಾರೆ.

ಕುತೂಹಲಕಾರಿಯಾಗಿ, 777 ಚಾರ್ಲಿ ಸಿನಿಮಾ ಈಗಲೂ ಬೇಡಿಕೆಯಲ್ಲಿದೆ ಮತ್ತು ಚಿತ್ರದ ಜಪಾನೀಸ್ ಆವೃತ್ತಿಯು ಜೂನ್ ಮತ್ತು ಆಗಸ್ಟ್ ನಡುವೆ ಬಿಡುಗಡೆಯಾಗುವ ನಿರೀಕ್ಷೆಯಿದೆ. ಶೀಘ್ರದಲ್ಲೇ ಲ್ಯಾಟಿನ್ ಅಮೆರಿಕ ಮತ್ತು ತೈವಾನ್‌ನಲ್ಲಿ ಚಿತ್ರ ಬಿಡುಗಡೆಯಾಗಲಿದೆ ಎಂದು ಕಿರಣ್‌ರಾಜ್ ಬಹಿರಂಗಪಡಿಸಿದ್ದಾರೆ.

ಚಿತ್ರದಲ್ಲಿ ನಟಿ ಸಂಗೀತಾ ಶೃಂಗೇರಿ, ರಾಜ್ ಬಿ ಶೆಟ್ಟಿ, ಶಾರ್ವರಿ ಮತ್ತು ಬಾಬಿ ಸಿಂಹ ನಟಿಸಿದ್ದಾರೆ. ಚಿತ್ರಕ್ಕೆ ನೋಬಿನ್ ಪಾಲ್ ಅವರ ಸಂಗೀತ ಮತ್ತು ಅರವಿಂದ್ ಕಶ್ಯಪ್ ಅವರ ಛಾಯಾಗ್ರಹಣವಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com