ಸುದೀಪ್ ಅಭಿಮಾನಿಗಳಿಗೆ ಗುಡ್ ನ್ಯೂಸ್: 'ಕಬಾಲಿ' ನಿರ್ಮಾಪಕರ ಜೊತೆ ಕಿಚ್ಚನ 46ನೇ ಸಿನಿಮಾ!
ವಿಕ್ರಾಂತ್ ರೋಣ ನಂತರ ಮುಂದಿನ ಸಿನಿಮಾ ಯಾವುದು ಎಂದು ಕಿಚ್ಚ ಸುದೀಪ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಈ ಸಂಬಂಧ ಹೊಸ ಅಪ್ ಡೇಟ್ ಸಿಕ್ಕಿದ್ದು, ಸುದೀಪ್ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.
Published: 25th May 2023 10:29 AM | Last Updated: 25th May 2023 06:14 PM | A+A A-

ಸುದೀಪ್
ವಿಕ್ರಾಂತ್ ರೋಣ ನಂತರ ಮುಂದಿನ ಸಿನಿಮಾ ಯಾವುದು ಎಂದು ಕಿಚ್ಚ ಸುದೀಪ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಈ ಸಂಬಂಧ ಹೊಸ ಅಪ್ ಡೇಟ್ ಸಿಕ್ಕಿದ್ದು, ಸುದೀಪ್ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.
ತಮ್ಮ 46ನೇ ಸಿನಿಮಾ ಬಗ್ಗೆ ಸುದೀಪ್ ಮಾಹಿತಿ ನೀಡಿರುವುದು ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ, ಸುದೀಪ್ ಅವರ ಮುಂದಿನ ಸಿನಿಮಾವನ್ನು ತಮಿಳು ನಿರ್ಮಾಣ ಸಂಸ್ಥೆಯೊಂದು ನಿರ್ಮಾಣ ಮಾಡುತ್ತಿದ್ದು, ‘ಕಬಾಲಿ’ ನಿರ್ಮಾಪಕರ ಜೊತೆ ಕೈ ಜೋಡಿಸಿದ್ದಾರೆ.
ಸಿನಿಮಾದ ನಿರ್ಮಾಪಕರು ಯಾರು ಎಂದು ಸಣ್ಣದೊಂದು ಝಲಕನ್ನು ತಮಿಳಿನ ಕಲೈಪುಲಿ ಎಸ್ ಥಾನು ನಿರ್ಮಾಣ ಸಂಸ್ಥೆ ಬಿಡುಗಡೆ ಮಾಡಿದೆ. ಕಿಚ್ಚ ಕಾರಿನಿಂದ ಇಳಿಯುವುದರ ಜೊತೆಗೆ ಮೇಕಪ್ ನಲ್ಲಿ ಭಾಗಿಯಾಗುವ ಸಣ್ಣದೊಂದು ವಿಡಿಯೋ ಬಿಡುಗಡೆ ಮಾಡಿದ್ದಾರೆ.
ಇದನ್ನೂ ಓದಿ: ಕಿಚ್ಚನ ಹೊಸ ಚಿತ್ರ ಅನೌನ್ಸ್: ಮಾಹಿತಿ ಹಂಚಿಕೊಂಡ ನಟ
ವಿಕ್ರಾಂತ್ ರೋಣ ತೆರೆಕಂಡ ಬಳಿಕ ಸುದೀಪ್ ಅಭಿನಯದ 46ನೇ ಸಿನಿಮಾ ಕುರಿತು ಮಾಹಿತಿ ತಿಳಿಯಲು ಫ್ಯಾನ್ಸ್ ಕಾದಿದ್ದರು. ಅವರಿಗೆಲ್ಲ ಖುಷಿ ಸುದ್ದಿ ಸಿಕ್ಕಿದೆ. ತಮಿಳಿನಲ್ಲಿ ‘ಕಬಾಲಿ’, ‘ತುಪಾಕಿ’, ‘ಅಸುರನ್’ ಮುಂತಾದ ಸಿನಿಮಾಗಳನ್ನು ನಿರ್ಮಾಣ ಮಾಡಿದ ಖ್ಯಾತಿ ‘ವಿ ಕ್ರಿಯೇಷನ್ಸ್’ ಸಂಸ್ಥೆಗೆ ಇದೆ. ಈ ಬ್ಯಾನರ್ ಜೊತೆ ಸುದೀಪ್ ಅವರು ಸಿನಿಮಾ ಮಾಡಲಿರುವುದು ವಿಶೇಷವಾಗಿದೆ.
ತಮಿಳಿನ ಖ್ಯಾತ ನಿರ್ಮಾಣ ಸಂಸ್ಥೆ ಜೊತೆ ಸುದೀಪ್ ಕೈ ಜೋಡಿಸಿದ್ದಾರೆ. ‘ವಿ ಕ್ರಿಯೇಷನ್ಸ್’ ಮೂಲಕ ಅವರ ಹೊಸ ಸಿನಿಮಾ ನಿರ್ಮಾಣ ಆಗಲಿದೆ. ಈ ಚಿತ್ರಕ್ಕೆ ಕಲೈಪುಲಿ ಎಸ್. ಥಾನು ಅವರು ಬಂಡವಾಳ ಹೂಡಲಿದ್ದಾರೆ.
ಇದನ್ನೂ ಓದಿ: ಶ್ರೀಮಂತ' ಸಿನಿಮಾ ಮೇ 19 ರಂದು ತೆರೆಗೆ: ಸೋನು ಸೂದ್ ನಾಯಕ, ಚಿತ್ರಕ್ಕೆ ಕಿಚ್ಚ ಸುದೀಪ್ ಬೆಂಬಲ
ಸಿನಿಮಾ ಎಕ್ಸ್‌ಪ್ರೆಸ್ ಈ ಹಿಂದೆ ವರದಿ ಮಾಡಿದಂತೆ, ಸುದೀಪ್ ಅವರ ಮುಂದಿನ ಸಿನಿಮಾವನ್ನು ಚೊಚ್ಚಲ ನಿರ್ದೇಶಕ ವಿಜಯ್ ಅವರು ನಿರ್ದೇಶಿಸುವ ಸಾಧ್ಯತೆಯಿದೆ, ಇದು ಕನ್ನಡ-ತಮಿಳು ದ್ವಿಭಾಷಾ ಚಿತ್ರ ಎಂದು ನಿರೀಕ್ಷಿಸಲಾಗಿದೆ ಮತ್ತು ಥ್ರಿಲ್ಲರ್ ಎಂದು ಹೇಳಲಾಗುತ್ತದೆ. ವಿಕ್ರಾಂತ್ ರೋಣ ನಂತರ ಮುಂಬರುವ ಪ್ರಾಜೆಕ್ಟ್‌ಗೆ ಕಲಾ ನಿರ್ದೇಶಕ ಶಿವಕುಮಾರ್ ಸುದೀಪ್ ಜೊತೆಯಾಗಲಿದ್ದಾರೆ.