'ಶ್ರೀಮಂತ' ಸಿನಿಮಾ ಮೇ 19 ರಂದು ತೆರೆಗೆ: ಸೋನು ಸೂದ್ ನಾಯಕ, ಚಿತ್ರಕ್ಕೆ ಕಿಚ್ಚ ಸುದೀಪ್ ಬೆಂಬಲ
ನಟ ಸೋನು ಸೂದ್ ಅವರು ಕಷ್ಟದಲ್ಲಿರುವವರಿಗೆ ನೆರವಾಗುವುದಕ್ಕೆ ಹೆಸರುವಾಸಿಯಾಗಿದ್ದಾರೆ. ಈ ವಾರ ಶ್ರೀಮಂತ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಮರಳಿದ್ದಾರೆ. ಸೋನು ಕೊನೆಯದಾಗಿ 2019ರ 'ಕುರುಕ್ಷೇತ್ರ' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.
Published: 18th May 2023 01:26 PM | Last Updated: 19th May 2023 07:14 PM | A+A A-

ಶ್ರೀಮಂತ ಚಿತ್ರದ ಪೋಸ್ಟರ್
ನಟ ಸೋನು ಸೂದ್ ಅವರು ಕಷ್ಟದಲ್ಲಿರುವವರಿಗೆ ನೆರವಾಗುವುದಕ್ಕೆ ಹೆಸರುವಾಸಿಯಾಗಿದ್ದಾರೆ. ಈ ವಾರ ಶ್ರೀಮಂತ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಮರಳಿದ್ದಾರೆ. ಸೋನು ಕೊನೆಯದಾಗಿ 2019ರ 'ಕುರುಕ್ಷೇತ್ರ' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.
ಹಾಸನ ರಮೇಶ್ ನಿರ್ದೇಶನದ 'ಶ್ರೀಮಂತ' ಸಿನಿಮಾ ರೈತರ ಜೀವನದ ಮೇಲೆ ಬೆಳಕು ಚೆಲ್ಲುತ್ತದೆ ಮತ್ತು ಕೃಷಿ ಕ್ಷೇತ್ರದ ಮೇಲೆ ತಂತ್ರಜ್ಞಾನದ ಪ್ರಭಾವದ ಕುರಿತು ಹೇಳುತ್ತದೆ. ಸೋನು ಸೂದ್ ರೈತನ ಪಾತ್ರದಲ್ಲಿ ನಟಿಸಿದ್ದಾರೆ. ಸಾಂಕ್ರಾಮಿಕ ರೋಗದಿಂದಾಗಿ ಸಿನಿಮಾ ಬಿಡುಗಡೆಯ ಸವಾಲುಗಳನ್ನು ಎದುರಿಸಿದ ನಂತರ, ಅಂತಿಮವಾಗಿ ಚಿತ್ರವು ಮೇ 19 ರಂದು ತೆರೆಗೆ ಬರುತ್ತಿದೆ.
ಕಿಚ್ಚ ಸುದೀಪ್ ಅವರು ಚಿತ್ರದ ನಿರೂಪಣೆಗೆ ಧ್ವನಿ ನೀಡುವ ಮೂಲಕ ಚಿತ್ರದ ಭಾಗವಾಗಿದ್ದಾರೆ ಎಂದು ಚಿತ್ರತಂಡ ಇತ್ತೀಚೆಗೆ ಘೋಷಿಸಿದೆ. ನಿರೂಪಣೆಯು ಇಡೀ ಚಲನಚಿತ್ರವನ್ನು ಮುಂದಕ್ಕೆ ಸಾಗಿಸುತ್ತದೆ ಮತ್ತು ಅವರ ಉಪಸ್ಥಿತಿಯು ಶ್ರೀಮಂತನಿಗೆ ಅಮೂಲ್ಯವಾದ ಬೆಂಬಲವನ್ನು ನೀಡಿದೆ ಎಂದು ನಿರ್ದೇಶಕ ರಮೇಶ್ ಹೇಳುತ್ತಾರೆ.
ಸದ್ಯ ಕನ್ನಡ ಚಿತ್ರರಂಗದಲ್ಲಿ ಕಮರ್ಷಿಯಲ್ ಚಿತ್ರಗಳದ್ದೇ ಕಾರುಬಾರಾಗಿದ್ದು, ಇಂತಹ ಸಿನಿಮಾ ಮಾಡುವ ನನ್ನ ಅಚಲವಾದ ನಂಬಿಕೆಯೇ ನಿರ್ಮಾಪಕರನ್ನು ಮೆಚ್ಚಿಸಿತು. ಚಿತ್ರದ ನಾಯಕನಿಗೆ ಮಚ್ಚಿನ ಬದಲು ನೇಗಿಲನ್ನು ನೀಡಿದ್ದೇನೆ. ಸೋನು ಸೂದ್ ಅವರು ಪ್ರಮುಖ ಪಾತ್ರದಲ್ಲಿ ನಟಿಸಿರುವುದು ಅವರ ನಿಜ ಜೀವನದ ನಾಯಕನ ಸ್ಥಾನಮಾನದ ಪರಿಣಾಮವಾಗಿದೆ. ಜಾಗತಿಕವಾಗಿ ಗುರುತಿಸಲ್ಪಟ್ಟಿರುವ ಸೋನು ಅವರ ಪಾತ್ರದ ಮೂಲಕ, ರೈತನಾಗಿ ಅವರ ಚಿತ್ರಣವು ಇನ್ನಷ್ಟು ಪ್ರಭಾವಶಾಲಿಯಾಗುತ್ತದೆ. ಸಂದೇಶವು ಹೆಚ್ಚಿನ ಪ್ರೇಕ್ಷಕರನ್ನು ತಲುಪಲು ಅನುವು ಮಾಡಿಕೊಡುತ್ತದೆ ಎಂದು ಅವರು ಹೇಳುತ್ತಾರೆ.
ಇದನ್ನೂ ಓದಿ: ಕರುನಾಡಿನಲ್ಲಿ 'ಶ್ರೀಮಂತ' ರೈತನಾದ ನಟ ಸೋನು ಸೂದ್!
ಚಿತ್ರದಲ್ಲಿ ವೈಷ್ಣವಿ ಚಂದ್ರನ್, ವೈಷ್ಣವಿ ಪಟವರ್ಧನ್, ಕ್ರಾಂತಿ, ಕಲ್ಯಾಣಿ, ಚರಣ್‌ರಾಜ್, ರಮೇಶ್ ಭಟ್, ಸಾಧು ಕೋಕಿಲ, ಕುರಿ ರಂಗ, ಬ್ಯಾಂಕ್ ಮಂಜಣ್ಣ, ರಾಜು ತಾಳಿಕೋಟೆ, ರವಿಶಂಕರ್ ಗೌಡ, ಗಿರಿ, ಮಧುಗಿರಿ ಪ್ರಕಾಶ್, ಬಸವರಾಜು ಹಾಸನ ಸೇರಿದಂತೆ ಪ್ರತಿಭಾವಂತ ಕಲಾವಿದರ ದಂಡೇ ಇದೆ.
ಗೋಲ್ಡನ್‌ರೇನ್ ಮೂವೀಸ್ ಅಡಿಯಲ್ಲಿ ಟಿಕೆ ರಮೇಶ, ಜಿ ನಾರಾಯಣಪ್ಪ ಮತ್ತು ವಿ ಸಂಜಯ್ ಬಾಬು ಜಂಟಿಯಾಗಿ ನಿರ್ಮಿಸಿರುವ ಈ ಚಿತ್ರಕ್ಕೆ ಹಂಸಲೇಖ ಅವರ ಸಂಗೀತ ಮತ್ತು ಆರವ್ ರಿಷಿಕ್ ಅವರ ಹಿನ್ನೆಲೆ ಸಂಗೀತವಿದೆ. ರವಿಕುಮಾರ್ ಸನಾ ಅವರ ಛಾಯಾಗ್ರಹಣವಿದೆ.