ಎರಡನೇ ಚಿತ್ರಕ್ಕೆ ಧನಂಜಯ್ ಗೆ ನಾಯಕಿಯಾಗುತ್ತಿರುವುದು ನನ್ನ ಅದೃಷ್ಟ: ಮೋಕ್ಷಾ ಕುಶಾಲ್
'ಮೋಕ್ಷ ಕುಶಾಲ್'' ಸ್ಯಾಂಡಲ್ ವುಡ್ ನ ಹೊಸ ಪ್ರತಿಭಾವಂತ ನಟಿ. ಮೂಲತ: ಕೂರ್ಗ್ ನವರಾದರೂ ನಿಜವಾಗಿಯೂ ಬೆಂಗಳೂರಿಗರಾಗಿ ಗುರುತಿಸಿಕೊಂಡಿದ್ದಾರೆ. ಇಂಜಿನಿಯರಿಂಗ್ ಪದವಿ ಪಡೆದಿರುವ ಮೋಕ್ಷ, ಮಾಡೆಲ್-ನಟಿಯಾಗಿ ಚಂದನವನದಲ್ಲಿ ಹೊಸ ಭರವಸೆ ಮೂಡಿಸಿದ್ದಾರೆ.
Published: 29th May 2023 03:27 PM | Last Updated: 29th May 2023 03:42 PM | A+A A-

ನಟಿ ಮೋಕ್ಷ ಕುಶಾಲ್
'ಮೋಕ್ಷ ಕುಶಾಲ್'' ಸ್ಯಾಂಡಲ್ ವುಡ್ ನ ಹೊಸ ಪ್ರತಿಭಾವಂತ ನಟಿ. ಮೂಲತ: ಕೂರ್ಗ್ ನವರಾದರೂ ನಿಜವಾಗಿಯೂ ಬೆಂಗಳೂರಿಗರಾಗಿ ಗುರುತಿಸಿಕೊಂಡಿದ್ದಾರೆ. ಇಂಜಿನಿಯರಿಂಗ್ ಪದವಿ ಪಡೆದಿರುವ ಮೋಕ್ಷ, ಮಾಡೆಲ್-ನಟಿಯಾಗಿ ಚಂದನವನದಲ್ಲಿ ಹೊಸ ಭರವಸೆ ಮೂಡಿಸಿದ್ದಾರೆ. ಸುನಿ ನಿರ್ದೇಶನದ 'ಮೋಡ ಕವಿದ ವಾತಾವರಣ' ಚಿತ್ರದೊಂದಿಗೆ ನಟನಾ ಪಯಣ ಆರಂಭಿಸಿದ ಈಕೆಗೆ, ಮೊದಲ ಚಿತ್ರ ಬಿಡುಗಡೆಗೂ ಮುನ್ನವೇ ಹಲವು ಸಿನಿಮಾಗಳ ಅವಕಾಶಗಳು ಒದಗಿ ಬಂದಿವೆ.
'ಇದೀಗ ಪರಮ್ ಅವರ ಚೊಚ್ಚಲ ನಿರ್ದೇಶನದಲ್ಲಿ ನಟಿಸಲು ಸಿದ್ಧರಾಗಿದ್ದಾರೆ, ಜಿಯೋ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದಲ್ಲಿ ಧನಂಜಯ್ ನಾಯಕ ನಟನಾಗಿ ನಟಿಸುತ್ತಿದ್ದಾರೆ. ಮೊದಲ ಶೂಟಿಂಗ್ ಶೆಡ್ಯೂಲ್‌ನಲ್ಲಿ ಭಾಗವಹಿಸಿದ್ದು, ಜೂನ್ ಮೊದಲ ವಾರದಲ್ಲಿ ಮುಂದಿನ ಶೆಡ್ಯೂಲ್ ಪುನರಾರಂಭಿಸುವ ನಿರೀಕ್ಷೆಯಿದೆ.

ಸಾಂಪ್ರದಾಯಿಕ ಮತ್ತು ತರಗತಿಯಲ್ಲಿ ಅತ್ಯುತ್ತಮ ಶೈಕ್ಷಣಿಕ ಹಿನ್ನೆಲೆವುಳ್ಳ ಮೋಕ್ಷಾ, ಯಾವಾಗಲೂ ವಿವಿಧ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರಂತೆ. ಇಂಜಿನಿಯರಿಂಗ್ ಮುಗಿಸಿದ ನಂತರ, ಸೃಜನಾತ್ಮಕ ಕ್ಷೇತ್ರದತ್ತ ಒಲವು ಬಲವಾಯಿತು. 9 ರಿಂದ 5 ರವರೆಗೆ ಕೆಲಸ ಮಾಡಲು ಇಷ್ಟವಾಗಲಿಲ್ಲ. ಬೇರೆ ಏನಾದರೂ ಮಾಡಬೇಕೆಂದು ಮನಸ್ಸು ಹಂಬಲಿಸುತಿತ್ತು. ಇದು ಚಿತ್ರರಂಗದತ್ತ ನನ್ನನ್ನು ಕರೆದೊಯ್ಯಿತು. ಖ್ಯಾತ ಮಾಡೆಲ್ ನೃತ್ಯ ನಿರ್ದೇಶಕರಾದ ಪ್ರಸಾದ್ ಬಿದ್ದಪ್ಪ ಅವರೊಂದಿಗೆ ಎರಡು ವರ್ಷ ಕೆಲಸ ಮಾಡಿದೆ. ರ್‍ಯಾಂಪ್ ವಾಕ್ ಸಿನಿಮಾ ಜಗತ್ತಿನತ್ತ ನನ್ನ ವೃತ್ತಿ ಹೊರಳಿಸಿತು. ಅನೇಕ ಅಡಿಷನ್ ಗಳಲ್ಲಿ ಪಾಲ್ಗೊಂಡ ನಂತರ ಚಿತ್ರಗಳಲ್ಲಿ ಅಭಿನಯಿಸಲು ನಿರ್ಧರಿಸಿದೆ ಎಂದು ತಿಳಿಸಿದರು.
'ಮೋಡ ಕವಿದ ವಾತಾವರಣ' ನಂತರ ಎರಡನೇ ಸಿನಿಮಾದಲ್ಲಿ ಧನಂಜಯ್ ಅವರಂತಹ ನಾಯಕರ ಜೊತೆಗೆ ನಾಯಕಿಯಾಗಿ ಅಭಿನಯಿಸುತ್ತಿದ್ದೇನೆ. ಈ ಪಾತ್ರಕ್ಕಾಗಿ ಆಕಾಂಕ್ಷಿಗಳಾಗಿದ್ದ 200 ಕ್ಕೂ ಹೆಚ್ಚು ನಟಿಯರ ಪೈಕಿ ನಾನು ಮಾತ್ರ ಆಯ್ಕೆಯಾಗಿತ್ತು ಎಂದು ತಿಳಿದಾಗ ಹೆಚ್ಚು ಸಂತೋಷವಾಯಿತು. ಒಬ್ಬರ ಸಿನಿ ಪಯಣದಲ್ಲಿ ಅದೃಷ್ಟವೂ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದು ಇದರಿಂದ ನನಗೆ ಅರಿವಾಯಿತು. ನಾನು ಅದೃಷ್ಟಶಾಲಿ ಅಂದುಕೊಂಡಿದ್ದೇನೆ. ಈ ಚಿತ್ರ ಈಗಾಗಲೇ ನಿರ್ಮಾಣ ಹಂತದಲ್ಲಿದ್ದು, ಮೈಸೂರಿನಲ್ಲಿ ಚಿತ್ರೀಕರಣ ನಡೆಯುತ್ತಿದೆ. ಜೂನ್ 2 ರಿಂದ ನನ್ನ ಮುಂದಿನ ಶೂಟಿಂಗ್ ಆರಂಭಿಸಲು ಕುತೂಹಲದಿಂದ ಕಾಯುತ್ತಿದ್ದೇನೆ ಎಂದರು.
ಈ ಚಿತ್ರ ನನ್ನ ವೃತ್ತಿಜೀವನ ಬೆಳವಣಿಗೆಗೆ ಗಮನಾರ್ಹವಾದ ಕೊಡುಗೆ ನೀಡಲಿದ್ದು, ಮುಂದಿನ ಚಿತ್ರಗಳೊಂದಿಗೆ ಬಣ್ಣದ ಲೋಕದಲ್ಲಿ ಮಿಂಚಲು ಎದುರು ನೋಡುತ್ತಿದ್ದೇನೆ ಎಂದು ಅವರು ತಿಳಿಸಿದರು.