ಕಾರ್ಕಳದ ಕಣಂಜಾರು ಗ್ರಾಮದಲ್ಲಿ ನಡೆಯುವ ಕಥೆಗಳನ್ನು ಹೊತ್ತು ತಂದ ಥ್ರಿಲ್ಲರ್ 'ಕಣಂಜಾರು'!

ನಿರ್ದೇಶಕ ಆರ್ ಬಾಲಚಂದ್ರ ಅವರು ತಮ್ಮ ಮುಂಬರುವ ಥ್ರಿಲ್ಲರ್ ಜಗತ್ತಿನ ಕಣಂಜಾರು ಸಿನಿಮಾಗಾಗಿ ಬಹು ಜವಾಬ್ದಾರಿಗಳನ್ನು ಹೊತ್ತುಕೊಂಡಿದ್ದಾರೆ. ನಿರ್ದೇಶನದ ಜೊತೆಗೆ ನಾಯಕನಾಗಿಯೂ ನಟಿಸುತ್ತಿರುವ ಅವರು ಆರ್‌ಪಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ಕಣಂಜಾರು ಚಿತ್ರದ ಸ್ಟಿಲ್
ಕಣಂಜಾರು ಚಿತ್ರದ ಸ್ಟಿಲ್
Updated on

ನಿರ್ದೇಶಕ ಆರ್ ಬಾಲಚಂದ್ರ ಅವರು ತಮ್ಮ ಮುಂಬರುವ ಥ್ರಿಲ್ಲರ್ ಜಗತ್ತಿನ ಕಣಂಜಾರು ಸಿನಿಮಾಗಾಗಿ ಬಹು ಜವಾಬ್ದಾರಿಗಳನ್ನು ಹೊತ್ತುಕೊಂಡಿದ್ದಾರೆ. ನಿರ್ದೇಶನದ ಜೊತೆಗೆ ನಾಯಕನಾಗಿಯೂ ನಟಿಸುತ್ತಿರುವ ಅವರು ಆರ್‌ಪಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ಥ್ರಿಲ್ಲರ್ ಕಾರ್ಕಳದ ಕಣಂಜಾರು ಗ್ರಾಮದಲ್ಲಿ ನಡೆಯುವ ಘಟನೆಗಳ ಸುತ್ತ ಕೇಂದ್ರೀಕೃತವಾಗಿದೆ.

ಚಿತ್ರದ ಮಹತ್ವವೆಂದರೆ ಅದರ ರೋಮಾಂಚಕ ನಿರೂಪಣೆಯಾಗಿದೆ. ಕಾರ್ಕಳ, ಉಡುಪಿ ಮತ್ತು ಹೊನ್ನಾವರ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ. ‘ಮೊದಲಿಗೆ ಬೇರೆಯವರಿಗೆ ನಿರ್ದೇಶನದ ಜವಾಬ್ದಾರಿ ವಹಿಸಿದ್ದೆ, ಅದು ಕೈಗೂಡದೇ ಇದ್ದಾಗ ನಾನೇ ಜವಾಬ್ದಾರಿ ತೆಗೆದುಕೊಂಡೆ’ ಎನ್ನುತ್ತಾರೆ ಕರಾವಳಿ ಭಾಗಗಳಲ್ಲಿ 55ರಿಂದ 60 ದಿನಗಳ ಕಾಲ ಚಿತ್ರೀಕರಣ ಮಾಡಿರುವ ಬಾಲಚಂದ್ರ. 

ಚಿತ್ರವು ಸದ್ಯ ಪೋಸ್ಟ್-ಪ್ರೊಡಕ್ಷನ್‌ನ ಅಂತಿಮ ಹಂತದಲ್ಲಿದೆ ಮತ್ತು ಚಿತ್ರತಂಡ ಇತ್ತೀಚೆಗಷ್ಟೇ ಚಿತ್ರದ ಮೋಷನ್ ಪೋಸ್ಟರ್ ಅನ್ನು ಬಿಡುಗಡೆ ಮಾಡಿದ್ದು, ಚಿತ್ರ 2024ರ ಆರಂಭದಲ್ಲಿ ತೆರೆಗೆ ಬರುವ ಸಾಧ್ಯತೆಯಿದೆ.

ಚಿತ್ರದಲ್ಲಿ ಶರ್ಮಿತಾ ಗೌಡ, ಹಿರಿಯ ನಟ ರಾಮಕೃಷ್ಣ, ಪಿಎಸ್ ಶ್ರೀಧರ್ ಮತ್ತು ಮೇಘಾ ನಟಿಸಿದ್ದಾರೆ. ಹರ್ಷವರ್ಧನ್ ರಾಜ್ ಸಂಗೀತ ಸಂಯೋಜಿಸಿದ್ದರೆ, ಶಶಾಂಕ್ ಶೇಷಗಿರಿ ಅವರ ಹಿನ್ನೆಲೆ ಸಂಗೀತ, ವೆಂಕಿ ಉಡಿವಿ ಅವರ ಸಂಕಲನ, ಮಂಜುನಾಥ್ ಹೆಗಡೆ ಅವರ ಛಾಯಾಗ್ರಹಣ ಚಿತ್ರಕ್ಕಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com