ದಿವ್ಯಾ ಉರುಡುಗ - ಅರವಿಂದ ಕೆಪಿ
ದಿವ್ಯಾ ಉರುಡುಗ - ಅರವಿಂದ ಕೆಪಿ

ಪ್ರೀತಿಗೆ ಹೊಸ ವ್ಯಾಖ್ಯಾನ ನೀಡಲು ಬರುತ್ತಿದೆ 'ಅರ್ಧಂಬರ್ದ ಪ್ರೇಮಕಥೆ': ನಿರ್ದೇಶಕ ಅರವಿಂದ್ ಕೌಶಿಕ್ ಮನದಾಳದ ಮಾತು

ರಕ್ಷಿತ್ ಶೆಟ್ಟಿಯವರ ಚೊಚ್ಚಲ ಚಿತ್ರವಾದ ತುಗ್ಲಕ್, ಅನೀಶ್ ತೇಜೇಶ್ವರ್ ನಟನೆಯ ನಮ್ ಏರಿಯಾಲ್ ಒಂದಿನ ಮತ್ತು ದಿವ್ಯಾ ಉರುಡುಗ ನಟಿಸಿದ ಹುಲಿರಾಯ ಮುಂತಾದ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಚಿತ್ರಗಳಿಗೆ ಹೆಸರುವಾಸಿಯಾದ ಅರವಿಂದ್ ಕೌಶಿಕ್ ಇದೀಗ 'ಅರ್ಧಂಬರ್ದ ಪ್ರೇಮಕಥೆ'ಯನ್ನು ನಿರ್ದೇಶಿಸಿದ್ದಾರೆ.
Published on

ರಕ್ಷಿತ್ ಶೆಟ್ಟಿಯವರ ಚೊಚ್ಚಲ ಚಿತ್ರವಾದ ತುಗ್ಲಕ್, ಅನೀಶ್ ತೇಜೇಶ್ವರ್ ನಟನೆಯ ನಮ್ ಏರಿಯಾಲ್ ಒಂದಿನ ಮತ್ತು ದಿವ್ಯಾ ಉರುಡುಗ ನಟಿಸಿದ ಹುಲಿರಾಯ ಮುಂತಾದ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಚಿತ್ರಗಳಿಗೆ ಹೆಸರುವಾಸಿಯಾದ ಅರವಿಂದ್ ಕೌಶಿಕ್ ಇದೀಗ 'ಅರ್ಧಂಬರ್ದ ಪ್ರೇಮಕಥೆ'ಯನ್ನು ನಿರ್ದೇಶಿಸಿದ್ದಾರೆ. ಡಿಸೆಂಬರ್ 1 ರಂದು ಚಿತ್ರ ಬಿಡುಗಡೆಗೆ ಸಜ್ಜಾಗಿದೆ.

'ಇದು ಆಧುನಿಕ ಪ್ರೀತಿಯ ಸಮಕಾಲೀನ ಕಥೆಯಾಗಿದೆ. ಸಾಂಪ್ರದಾಯಿಕ ಪ್ರೇಮಕಥೆಗಳಲ್ಲಿ, ಪ್ರೀತಿ ಮುಂದುವರಿಯುತ್ತದೆ. ಆದರೆ, ಇಂದಿನ ಸಂದರ್ಭದಲ್ಲಿ ನಾನು ಪ್ರೀತಿಯನ್ನು ಅನ್ವೇಷಿಸಲು ಬಯಸುತ್ತೇನೆ. ಪ್ರೀತಿ ಯಾವಾಗಲೂ ಶಾಶ್ವತವಲ್ಲ; ಕೆಲವೊಮ್ಮೆ ಸಂಬಂಧಗಳು ವಿಷಕಾರಿಯಾಗುತ್ತವೆ ಮತ್ತು ದೂರ ಹೋಗಲು ಸ್ವಾತಂತ್ರ್ಯವಿರಬೇಕು. ಪ್ರೀತಿಯು ಅಸ್ತಿತ್ವದಲ್ಲಿದ್ದರೆ, ಅದು ಬೇಷರತ್ತಾಗಿರಬೇಕು' ಎಂದು ಅರವಿಂದ್ ಕೌಶಿಕ್ ಹೇಳಿದರು. 

'ನನ್ನೆಲ್ಲಾ ಕಥೆಗಳು ಪ್ರೀತಿಯ ಅಂಶಗಳನ್ನು ಹೊಂದಿದ್ದವು. ಆದರೆ, ಅರ್ಧಂಬರ್ದ ಪ್ರೇಮಕಥೆಯಲ್ಲಿ ಸಂಬಂಧಗಳ ಅನ್ವೇಷಣೆಯು ಲವ್ ಸ್ಟೋರಿ ಮೂಲಕ ಸ್ವಾಭಾವಿಕವಾಗಿ ಸಂಭವಿಸಿದೆ. ಈ ನಿರೂಪಣೆಯು ಪ್ರೀತಿಯಲ್ಲಿರುವ ಇಬ್ಬರು ವ್ಯಕ್ತಿಗಳ ಸುತ್ತ ಸುತ್ತುತ್ತದೆ' ಎಂದು ತಿಳಿಸಿದರು.

ಚಿತ್ರದಲ್ಲಿ ಮಾಜಿ ಬಿಗ್ ಬಾಸ್ ಕನ್ನಡ ಸ್ಪರ್ಧಿಗಳಾದ ದಿವ್ಯಾ ಉರುಡುಗ ಮತ್ತು ಅರವಿಂದ್ ಕೆಪಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. 'ಬಿಗ್ ಬಾಸ್‌ ನಂತರ ಅವರ ಸುತ್ತಲು ಹಬ್ಬಿರುವ ಗಾಸಿಪ್‌ಗಳನ್ನು ನಾನು ಗಮನಿಸಿದ್ದೇನೆ. ಆರಂಭದಲ್ಲಿ ದಿವ್ಯಾ ಅವರನ್ನು ಚಿತ್ರಕ್ಕೆ ಕರೆತರುವ ಯೋಚನೆಯಿತ್ತು. ನಂತರ, ದಿವ್ಯಾ ಭೇಟಿ ಸಮಯದಲ್ಲಿ, ಅರವಿಂದ್ ಕೆಪಿ ಅವರ ಮೋಡಿ ಮತ್ತು ಸರಳತೆ ನನ್ನ ಕಣ್ಣಿಗೆ ಬಿದ್ದಿತು. ಅವರಿಬ್ಬರ ನಡುವೆ ಉತ್ತಮ ಕೆಮಿಸ್ಟ್ರಿ ಇದ್ದದ್ದರಿಂದ ನನ್ನ ಅರ್ಧದಷ್ಟು ಕೆಲಸ ಮುಗಿದಿದೆ. ಇದಲ್ಲದೆ, ಅರವಿಂದ್ ಅವರ ಉತ್ಸಾಹ ಮತ್ತು ಸವಾಲುಗಳನ್ನು ತೆಗೆದುಕೊಳ್ಳುವ ಇಚ್ಛೆಯು ಅವರನ್ನು ಸ್ವಾಭಾವಿಕವಾಗಿ ಹೊಂದಿಕೊಳ್ಳುವಂತೆ ಮಾಡಿತು. ಅವರ ಆಫ್-ಸ್ಕ್ರೀನ್ ಚೇಷ್ಟೆಯ ವರ್ತನೆಯು ತೆರೆಯ ಮೇಲೆ ಚೆನ್ನಾಗಿ ಅನುವಾದಗೊಂಡಿದೆ' ಎಂದರು ಕೌಶಿಕ್.

ಪಾತ್ರಕ್ಕೆ ಹೊಂದಿಕೊಂಡ ಬಗ್ಗೆ ಮಾತನಾಡುವ ಅವರು, 'ಕಥೆಯ ಬಗೆಗಿನ ಅವರ ತಿಳುವಳಿಕೆಯು ಕೆಲಸವನ್ನು ಸುಲಭಗೊಳಿಸಿತು. ಅವರ ಚಿತ್ರಣವು ಕೇವಲ ಮಧುರವಾದ ಪ್ರಣಯವಲ್ಲ, ಏಕೆಂದರೆ ಅವುಗಳು ತೆರೆಮರೆಯಲ್ಲಿರುತ್ತವೆ; ಇದು ಸ್ವಲ್ಪ ಸಂಕೀರ್ಣವಾಗಿದೆ, ಅವರ ಪ್ರಯಾಣಕ್ಕೆ ಹಲವು ಪದರಗಳನ್ನು ಸೇರಿಸುತ್ತದೆ' ಎಂದರು.

ಚಿತ್ರದಲ್ಲಿ ಅರವಿಂದ್ ಕೆಪಿ ಅವರ ಬೈಕಿಂಗ್ ಕೌಶಲ್ಯವನ್ನು ಬಳಸಿಕೊಳ್ಳಲಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಕೌಶಿಕ್, 'ಅವರ ಬೈಕಿಂಗ್ ವ್ಯಕ್ತಿತ್ವವು ಸಾಂದರ್ಭಿಕವಾಗಿದೆ. ಆದರೆ, ಪ್ರಮುಖವಲ್ಲ. ಒಂದು ವೇಳೆ ಅವರಿಗೆ ಮೋಟಾರ್‌ ಸೈಕಲ್ ಓಡಿಸುವುದು ಹೇಗೆಂದು ತಿಳಿದಿಲ್ಲದಿದ್ದರೂ, ಅದು ಅಷ್ಟೇನು ಪ್ರಭಾವ ಬೀರುತ್ತಿರಲಿಲ್ಲ. ಏಕೆಂದರೆ, ಅದು ಒಟ್ಟಾರೆ ವ್ಯಕ್ತಿತ್ವಕ್ಕೆ ಸಂಬಂಧಿಸಿದೆ. ಅದರ ಆಧಾರದ ಮೇಲೆ ನಾನು ಅವರನ್ನು ಚಿತ್ರಕ್ಕೆ ಕರೆತಂದಿದ್ದೇನೆ' ಎಂದು ಅವರು ಹೇಳಿದರು.

ಲವ್ ಸ್ಟೋರಿಗಾಗಿ ಅವರ ಚಿತ್ರ ನಿರ್ದೇಶನದ ಶೈಲಿಯಲ್ಲಿನ ಬದಲಾವಣೆಗಳ ಬಗ್ಗೆ ಮಾತನಾಡುವ ಕೌಶಿಕ್, 'ಇದು ಪ್ರಾಥಮಿಕವಾಗಿ ಕಥೆ ಹೇಳುವುದಕ್ಕೆ ಸಂಬಂಧಿಸಿದೆ. ನಿರ್ದೇಶಕನಾಗಿ, ನನಗೆ ಅನಗತ್ಯವೆಂದು ಅನಿಸಿದ್ದನ್ನು ಟ್ರಿಮ್ ಮಾಡಿದ್ದೇನೆ. ಇದು ಶುದ್ಧ ಮತ್ತು ಆಹ್ಲಾದಕರ ಪ್ರೇಮಕಥೆಗೆ ಕಾರಣವಾಯಿತು. ಅರ್ಜುನ್ ಜನ್ಯ ಅವರ ಸಂಗೀತ ಮತ್ತು ಸೂರ್ಯ ಅವರ ಛಾಯಾಗ್ರಹಣದೊಂದಿಗೆ, ಚಿತ್ರವು ಹಳೆಯ ಪ್ರಪಂಚದ ಮೋಡಿಯನ್ನು ತೆರೆಮೇಲೆ ತರುತ್ತದೆ' ಎಂದು ಕೌಶಿಕ್ ಹೇಳಿದರು. 
ಅಭಿಲಾಷ್ ದ್ವಾರಕೀಶ್, ಸೂರಜ್ ಹೂಗಾರ್, ಸುಜಿತ್ ಶೆಟ್ಟಿ ಮತ್ತು ಆಲ್ ಓಕೆ ನಿರ್ಣಾಯಕ ಪಾತ್ರಗಳಲ್ಲಿರುವುದಕ್ಕೆ ಸಂತೋಷವನ್ನು ವ್ಯಕ್ತಪಡಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com