ನಾವು ಒಳ್ಳೆಯ ದೇಶದಲ್ಲಿದ್ದೇವೆ, ಜನರು ಬೆಂಬಲಿಸುತ್ತಾರೆ; ಸಮಸ್ಯೆ ಎದುರಾದರೆ ಮೌನವಾಗಿರಬೇಡಿ: ರಶ್ಮಿಕಾ ಮಂದಣ್ಣ
ಸೆಲೆಬ್ರಿಟಿಗಳಿಗೆ ಡೀಪ್‌ಫೇಕ್ ಹೊಸ ಸಮಸ್ಯೆಯಾಗಿ ಪರಿಣಮಿಸಿದೆ. ಒಬ್ಬರ ಬಳಿಕ ಒಬ್ಬರ ಫೇಕ್ ವಿಡಿಯೋಗಳು ವೈರಲ್ ಆಗುತ್ತಿದೆ. ನಟಿ ರಶ್ಮಿಕಾ ಮಂದಣ್ಣ ಡೀಪ್‌ಫೇಕ್ ವಿಡಿಯೋ ಭಾರೀ ಕೋಲಹಲ ಸೃಷ್ಟಿಸಿತ್ತು.
ಇದೇ ಮೊದಲ ಬಾರಿಗೆ ಮಾಧ್ಯಮಗಳ ಮುಂದೆ ಆ ವಿಚಾರದ ಬಗ್ಗೆ ಮಾತನಾಡಿದ್ದಾರೆ. ರಶ್ಮಿಕಾ ನಟನೆಯ ಬಾಲಿವುಡ್ ಸಿನಿಮಾ 'ಅನಿಮಲ್' ಈ ವಾರ ತೆರೆಗೆ ಬರ್ತಿದೆ. ಸಿನಿಮಾ ಪ್ರಚಾರಕ್ಕಾಗಿ ತಂಡ ಹೈದರಾಬಾದ್‌ಗೆ ಹೋಗಿದ್ದರು. ಈ ವೇಳೆ ಮಾಧ್ಯಮಗಳ ಪ್ರಶ್ನೆಗೆ ರಶ್ಮಿಕಾ ಉತ್ತರಿಸಿದ್ದಾರೆ.
ಈ ಸಮಸ್ಯೆ ಎಲ್ಲರಿಗೂ ಇದೆ. ಮೊದಲಿಗೆ ಅಮಿತಾಮ್ ಬಚ್ಚನ್ ಸರ್ ಸಪೋರ್ಟ್ ಮಾಡಿದರು. ನಂತರ ಎಲ್ಲರೂ ಬೆಂಬಲಿಸಿದರು. ಮೊದಲು ಆ ವಿಡಿಯೋ ನೋಡಿದಾಗ ನೋವಾಯಿತು. ಆದ್ರೆ ಇದು ಸರ್ವೇ ಸಾಧಾರಣ ಆಗಿಬಿಟ್ಟಿದೆ.
ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದು ಬೇಡ ಎಂದುಕೊಂಡೆ. ಆದ್ರೆ ಎಲ್ಲರೂ ಮುಂದೆ ಬಂದು ಸಪೋರ್ಟ್ ಮಾಡಿದ್ದು ನೋಡಿ ಇದು ಸಾಮಾನ್ಯ ವಿಷಯ ಅಲ್ಲ, ನಾನು ಪ್ರತಿಕ್ರಿಯಿಸಬೇಕು ಎಂದುಕೊಂಡೆ. ಇದೇ ಕಾರಣಕ್ಕೆ ಈಗ ಡೀಪ್‌ಫೇಕ್ ಬಗ್ಗೆ ಮೇಲೆ ಕ್ರಮ ಕೈಗೊಳ್ಳುತ್ತಿದ್ದಾರೆ. ಹಾಗಾಗಿ ಎಲ್ಲಾ ಹುಡುಗಿಯರಿಗೆ ಹೇಳಲು ಬಯಸುತ್ತೇನೆ. ಈ ವಿಷಯಗಳು ಸಾಮಾನ್ಯವಲ್ಲ, ಇದು ನಿಮಗೆ ಎದುರಾದರೆ ಮೌನವಾಗಿರಬೇಡಿ, ಮುಂದೆ ಬಂದು ಪ್ರತಿಕ್ರಿಯಿಸಿ, ನಾವು ಒಳ್ಳೆಯ ದೇಶದಲ್ಲಿದ್ದೇವೆ, ಜನ ಬೆಂಬಲಿಸುತ್ತಾರೆ ಎಂದು ರಶ್ಮಿಕಾ ಹೇಳಿದ್ದಾರೆ.
ಈ ವಿಚಾರವನ್ನು ಹಂಚಿಕೊಳ್ಳಲು ನನಗೆ ತುಂಬಾ ನೋವಾಗಿದೆ. ಆದರೂ ವೈರಲ್ ಆಗುತ್ತಿರುವ ನನ್ನ ಡೀಪ್‌ಫೇಕ್ ವೀಡಿಯೊ ಬಗ್ಗೆ ಮಾತನಾಡಬೇಕಾಗಿದೆ. ಪ್ರಾಮಾಣಿಕವಾಗಿ ಹೇಳಬೇಕೆಂದರೇ, ಈ ರೀತಿ ಏನಾದರೂ ಆಗುವುದು ನನಗೆ ಮಾತ್ರವಲ್ಲ, ಪ್ರತಿಯೊಬ್ಬರಿಗೂ ತುಂಬಾ ಭಯಾನಕ. ತಂತ್ರಜ್ಞಾನವನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಕಾರಣದಿಂದಾಗಿ ಇಂದು ನಮ್ಮಲ್ಲಿ ಹಲವರು ಇಂತಹ ಘಟನೆಗಳಿಗೆ ಗುರಿಯಾಗುತ್ತಿದ್ದಾರೆ.
ಮಹಿಳೆಯಾಗಿ ಮತ್ತು ನಟಿಯಾಗಿ, ನನ್ನ ರಕ್ಷಣೆಗೆ ಮತ್ತು ಬೆಂಬಲಕ್ಕೆ ಬಂದ ನನ್ನ ಕುಟುಂಬ, ಸ್ನೇಹಿತರು ಮತ್ತು ಹಿತೈಷಿಗಳಿಗೆ ನಾನು ಕೃತಜ್ಞಳಾಗಿದ್ದೇನೆ. ಆದರೆ, ನಾನು ಶಾಲೆ ಅಥವಾ ಕಾಲೇಜಿನಲ್ಲಿದ್ದಾಗ ಇಂತಹ ಘಟನೆ ನಡೆದಿದ್ದರೇ, ನಾನು ಅದನ್ನು ಹೇಗೆ ನಿಭಾಯಿಸುತ್ತಿದ್ದೇ ಎಂಬುದು ನಿಜಕ್ಕೂ ನನಗೆ ಗೊತ್ತಿಲ್ಲ. ನಮ್ಮಲ್ಲಿ ಹೆಚ್ಚಿನವರು ಇಂತಹ ಕೆಟ್ಟ ಘಟನೆಗೆ ಸಾಕ್ಷಿಯಾಗುವ ಮೊದಲು ತುರ್ತಾಗಿ ಪರಿಹರಿಸಬೇಕಾಗಿದೆ" ಎಂದು ಮನವಿ ಮಾಡಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ