ತಮ್ಮ ಮದುವೆ ಬಗ್ಗೆ ಕೊನೆಗೂ ಮೌನ ಮುರಿದ ವರ್ತೂರು ಸಂತೋಷ್: ಬಿಗ್ ಬಾಸ್ ಮನೆಯಲ್ಲಿ ಹೇಳಿದ್ದೇನು?
ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ವರ್ತೂರು ಸಂತೋಷ್ ಮೊದಲ ಬಾರಿಗೆ ತಮ್ಮ ವಿವಾಹದ ಬಗ್ಗೆ ಮಾತನಾಡಿದ್ದಾರೆ. ಅವರ ವಿವಾಹದ ಬಗ್ಗೆ ಎದ್ದಿದ್ದ ಎಲ್ಲಾ ಊಹಾಪೋಹಗಳಿಗೂ ವರ್ತೂರು ಸಂತೋಷ್ ಉತ್ತರಿಸಿದ್ದಾರೆ.
ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಅವರು ಹುಲಿ ಉಗುರು ಧರಿಸಿ ಜೈಲಿಗೆ ಹೋಗಿ ಬಂದ ಬಳಿಕ ಬಿಗ್ ಬಾಸ್ ಮನೆಯೊಳಗೆ ಅಷ್ಟಾಗಿ ಸುದ್ದಿಯಲ್ಲಿ ಇಲ್ಲದಿದ್ರೂ ಮನೆಯ ಹೊರಗೆ ಸುದ್ದಿಯಲ್ಲಿದ್ದಾರೆ. ಹುಲಿ ಉಗುರು ಬಳಿಕ ಅವರ ಮದುವೆಯ ವಿಚಾರ ಹೊರಗಡೆ ಚರ್ಚೆ ಆಗಿದೆ.
ವರ್ತೂರು ಸಂತೋಷ್ ಅವರು ಮದುವೆ ಆಗಿದ್ದಾರೆ. ಆದರೂ ಅವರು ಮದುವೆ ವಿಚಾರದಲ್ಲಿ ಸುಳ್ಳು ಹೇಳಿದ್ದಾರೆ ಎಂದು ಆರೋಪಿಸಲಾಗಿದೆ. ಅವರು ಮದುವೆ ಆಗಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದಲ್ಲದೆ ಅವರು ಹೆಣ್ಣು ಪೀಡುಕ, ಮಾದಕ ವ್ಯಸನಿ, ಪತ್ನಿ ಮೇಲೆ ದೌರ್ಜನ್ಯವೆಸಗಿದ್ದಾನೆ ಎಂದು ವರ್ತೂರು ಸಂತೋಷ್ ಅವರ ಕೆಲ ಸಂಬಂಧಿಗಳು ಆರೋಪಿಸಿದ್ದಾರೆ.
ಇದೀಗ ಈ ಬಗ್ಗೆ ವರ್ತೂರು ಮೌನ ಮುರಿದಿದ್ದಾರೆ. ಚಟುವಟಿಕೆಯೊಂದರಲ್ಲಿ ತನ್ನ ಮದುವೆ ವಿಚಾರದ ಬಗ್ಗೆ ಮಾತನಾಡಿದ್ದಾರೆ.
ನಾನು ಮೊದಲೇ ಮನೆಯಲ್ಲಿ ಹಿರಿಯರಿಗೆ ಹೇಳಿದ್ದೆ. ದೊಡ್ಡಪ್ಪ ನೀನು ಒಬ್ಬರನ್ನು ತೋರಿಸಿ ಇಂತಹ ವ್ಯಕ್ತಿಗೆ ತಾಳಿ ಕಟ್ಟು ಅಂತ ಕೇಳಿ ನಾನು ಕಟ್ಟುತ್ತೀನಿ.. ನಾನು ಮಾತು ಕೊಟ್ಟು ಒಪ್ಪಿಕೊಂಡು ಬಿಟ್ಟೆ. ಹಾಗೆ ದಿನ ಸಾಗುತ್ತಾ ಸಾಗುತ್ತಾ ನನ್ನ ತಾಯಿಯನ್ನು ನಿರ್ಲಕ್ಷ್ಯ ಮಾಡಲು ಶುರು ಮಾಡಿದ್ದರು. ನಾನು ಸಂಪಾದನೆ ಮಾಡಿರುವ ಜನರನ್ನು ತೊರೆದು ಹೆಂಡತಿ ಹಿಂದೆ ಹೋಗಬೇಕು ಅಂದ್ರೆ ನನಗೆ ಅದು ಸಾಧ್ಯವಿಲ್ಲ.
ಅವರ ತವರು ಮನೆಗೆ ಹೋಗಿ ಬಿಡುತ್ತಾರೆ. ಅಲ್ಲಿ ಹೇಳ್ತೀನಿ...ನನ್ನ ಮಾತಿನ ಪ್ರಕಾರ ನೀನು ಬಂದ್ರೆ ಇವತ್ತಿಗೂ ನೀನು ರಾಣಿನೇ. ಕರೆದ ಮೇಲೆ ಫಸ್ಟ್ ನಮ್ಮ ಮನೆಯಿಂದ ಗೇಟ್‌ನಿಂದ ಹೊರ ಹೋಗು ಎನ್ನುತ್ತಾರೆ. ಅವತ್ತು ಮಾತು ಕೊಟ್ಟು ಬಂದಿದ್ದೀನಿ ಇವತ್ತು ಆ ಮಾತುಗಳ ಮೇಲೆ ನಿಂತಿದ್ದೀನಿ' ಎಂದು ರಿಲೀಸ್ ಆಗಿರುವ ಪ್ರೋಮೋದಲ್ಲಿ ವರ್ತೂರ್ ಮಾತನಾಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ