ಅನೀಶ್ ತೇಜೇಶ್ವರ್, ಮಿಲನಾ ನಾಗರಾಜ್ ನಟನೆಯ 'ಆರಾಮ್ ಅರವಿಂದ ಸ್ವಾಮಿ' ಸಿನಿಮಾ ಚಿತ್ರೀಕರಣ ಪೂರ್ಣ

ಆರಾಮ್ ಅರವಿಂದ್ ಸ್ವಾಮಿ ಚಿತ್ರದ ಶೂಟಿಂಗ್ ಮುಗಿದಿದ್ದು, ಸದ್ಯ ಚಿತ್ರ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಅಭಿಷೇಕ್ ಶೆಟ್ಟಿ ನಿರ್ದೇಶನ ಈ ಚಿತ್ರದಲ್ಲಿ ಅನೀಶ್ ತೇಜೇಶ್ವರ್ (ನಮ್ ಏರಿಯಾಲ್ ಒಂದಿನ), ಕೌಸಲ್ಯ ಸುಪ್ರಜಾ ರಾಮ ಖ್ಯಾತಿಯ ಮಿಲನ್ ನಾಗರಾಜ್ ಮತ್ತು ಹೃತಿಕಾ ಶ್ರೀನಿವಾಸ್ ಪ್ರಮುಖ ಪಾತ್ರಗಳಲ್ಲಿದ್ದಾರೆ.
ಆರಾಮ್ ಅರವಿಂದ ಸ್ವಾಮಿ ಚಿತ್ರದ ಸ್ಟಿಲ್

ಇತ್ತೀಚಿನ ಮಾಧ್ಯಮ ಸಂವಾದದ ಸಂದರ್ಭದಲ್ಲಿ, ಆರಾಮ್ ಅರವಿಂದ ಸ್ವಾಮಿ ಚಿತ್ರವು ವಿಶಿಷ್ಟವಾದ ಕಥೆಯನ್ನು ಹೇಳುತ್ತದೆ ಎಂದು ಚಿತ್ರತಂಡ ಭರವಸೆ ನೀಡಿದೆ. ನಿರ್ದೇಶಕ ಅಭಿಷೇಕ್ ಶೆಟ್ಟಿ ಮಾತನಾಡಿ, ಪ್ರೇಕ್ಷಕರಿಗೆ ತಾಜಾ ಮತ್ತು ಉತ್ತಮ ಅನುಭವದ ಭರವಸೆ ನೀಡಿದರು.

ಚಿತ್ರಕ್ಕೆ ಅರ್ಜುನ್ ಜನ್ಯ ಅವರ ಸಂಗೀತ ಸಂಯೋಜನೆ ಇದೆ. 'ನಮ್ ನಾಣಿ ಬಿಕಾಂ ಪಾಸ್' ಮತ್ತು 'ಗಜಾನನ ಮತ್ತು ಗ್ಯಾಂಗ್' ಚಿತ್ರದ ನಂತರ ಅಭಿಷೇಕ್ ಅವರ ಮೂರನೇ ಚಿತ್ರ ಆರಾಮ್ ಅರವಿಂದ ಸ್ವಾಮಿ ಆಗಿದೆ. ಸಿನಿಮಾ ಬಿಡುಗಡಗೆ ಕುತೂಹಲದಿಂದ ಎದುರು ನೋಡುತ್ತಿರುವ ಚಿತ್ರತಂಡ, ಇದು ಒಂದು ಸಂತೋಷಕರ ಸಿನಿಮೀಯ ಅನುಭವ ನೀಡಲಿದೆ ಎಂದು ಅಭಿಮಾನಿಗಳಿಗೆ ಭರವಸೆ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com