ಪುತ್ರ ಅಧ್ವಯ್ ಸಿನಿಮಾಗೆ ನಟ ರವಿಶಂಕರ್ ನಿರ್ದೇಶನ!

ನಟ, ನಿರ್ದೇಶಕ, ಬರಹಗಾರ, ಡಬ್ಬಿಂಗ್ ಆರ್ಟಿಸ್ಟ್ ಆಗಿ ಹೆಸರು ಗಳಿಸಿರುವ ರವಿಶಂಕರ್ ಅವರು, ಇದೀಗ ತಮ್ಮ ಪುತ್ರ ಅಧ್ವಯ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲು ಸಿದ್ಧತೆ ನಡೆಸಿದ್ದಾರೆ.
ರವಿ ಶಂಕರ್
ರವಿ ಶಂಕರ್

ನಟ, ನಿರ್ದೇಶಕ, ಬರಹಗಾರ, ಡಬ್ಬಿಂಗ್ ಆರ್ಟಿಸ್ಟ್ ಆಗಿ ಹೆಸರು ಗಳಿಸಿರುವ ರವಿಶಂಕರ್ ಅವರು, ಇದೀಗ ತಮ್ಮ ಪುತ್ರ ಅಧ್ವಯ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲು ಸಿದ್ಧತೆ ನಡೆಸಿದ್ದಾರೆ.

ಚಿತ್ರದ ಕುರಿತು ಸಿದ್ಧತೆಗಳು ನಡೆಯುತ್ತಿವೆ. ಟೀಸ್ ಬಿಡುಗಡೆ ಮೂಲಕ ಚಿತ್ರದ ಕುರಿತು ಅಧಿಕೃತವಾಗಿ ಮಾಹಿತಿ ನೀಡಲಾಗುತ್ತದೆ. ಅಕ್ಟೋಬರ್ 24 ರಂದು ಟೀಸರ್ ಬಿಡುಗಡೆ ಮಾಡುತ್ತೇವೆಂದು ರವಿಶಂಕರ್ ಅವರು ಮಾಹಿತಿ ನೀಡಿದ್ದಾರೆ.

ಕಾಲೇಜು ಪ್ರಣಯ, ನಿಗೂಢತೆ, ದೈವತ್ವವ ಅಂಶಗಳೊಂದಿಗೆ ಚಿತ್ರದ ಕಥೆಯನ್ನು ಹೆಣೆಯಲಾಗಿದೆ. ಮತ್ತೆ ನಿರ್ದೇಶನಕ್ಕಿಳಿಯುತ್ತಿರುವುದು ಸಂತಸ ತಂದಿದೆ. 20 ವರ್ಷಗಳ ಹಿಂದೆ ಮಾಲಾಶ್ರೀ ಅಭಿನಯದ ದುರ್ಗಿ ಚಿತ್ರವನ್ನು ನಿರ್ದೇಶಿಸಿದ್ದೆ. ನಂತರ ಜೀವನವು ನಟನೆ ಎಂಬ ವಿಭಿನ್ನ ದಿಕ್ಕಿಗೆ ಕರೆದೊಯ್ದಿತು. ಆದರೆ, ನಿರ್ದೇಶನ ಕುರಿತ ಆಸೆ ಮಾತ್ರ ಇನ್ನೂ ಜೀವಂತವಾಗಿದೆ. ಮಗನ ಬಗ್ಗೆ ಇತರರಿಗಿಂತ ಹೆಚ್ಚಾಗಿ ಅರ್ಥ ಮಾಡಿಕೊಂಡಿದ್ದೇನೆ. ಇತರರು ಅವನ ಮೇಲೆ ಬೆಳಕು ಚೆಲ್ಲುವ ಬದಲು ನಾನೇ ಆತನ ಸಿನಿಮಾ ನಿರ್ದೇಶನ ಮಾಡಬೇಕೆಂದು ಬಯಸಿದ್ದೆ. ನಾಯಕಿ ಆಯ್ಕೆ ಪ್ರಕ್ರಿಯೆ ಮುಂದುವರೆದಿದೆ.

<strong>ಅಧ್ವಯ್</strong>
ಅಧ್ವಯ್

ಹೊಸ ಮುಖಕ್ಕಾಗಿ ಹುಡುಕಾಟ ನಡೆಸುತ್ತಿದ್ದೇವೆ. ಚಿತ್ರವನ್ನು ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಸೇರಿದಂತೆ ಬಹು ಭಾಷೆಗಳಲ್ಲಿ ಮಾಡುವ ಚಿಂತನೆಗಳಿವೆ ಎಂದು ತಿಳಿಸಿದ್ದಾರೆ.

ರವಿಶಂಕರ್ ಅವರ ಪುತ್ರ ಅಧ್ವಯ್, ನ್ಯೂಯಾರ್ಕ್‌ನ ದಿ ಲೀ ಸ್ಟ್ರಾಸ್‌ಬರ್ಗ್ ಥಿಯೇಟರ್ ಮತ್ತು ಫಿಲ್ಮ್ ಇನ್‌ಸ್ಟಿಟ್ಯೂಟ್‌ನಲ್ಲಿ ಒಂದು ವರ್ಷದ ಕೋರ್ಸ್'ನ್ನು ಪೂರ್ಣಗೊಳಿಸಿದ್ದು, ತವರಿಗೆ ಮರಳಿದ್ದಾನೆ. ತಂದೆ ನಿರ್ದೇಶನದ ಚಿತ್ರದ ಮೂಲಕ ಅಧ್ವಯ್ ಸ್ಯಾಂಡಲ್ ವುಡ್'ಗೆ ಪಾದಾರ್ಪಣೆ ಮಾಡುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com