ಶ್ರೇಯಸ್​ ನಟನೆಯ 'ಒಂದ್ಸಲ ಮೀಟ್ ಮಾಡೋಣ' ಚಿತ್ರಕ್ಕೆ ಎಸ್​.ನಾರಾಯಣ್​ ಆ್ಯಕ್ಷನ್​ ಕಟ್​

ಕನ್ನಡ ಚಿತ್ರರಂಗದ ಮೇರು ನಟರಾದ ಡಾ. ರಾಜ್​ಕುಮಾರ್, ವಿಷ್ಣುವರ್ಧನ್, ಅಂಬರೀಶ್ ಇಂತಹ ದಿಗ್ಗಜ ನಟರ ಸಿನಿಮಾಗಳಿಗೆ ಆ್ಯಕ್ಷನ್​ ಕಟ್​ ಹೇಳಿರುವ ಹೆಸರಾಂತ ನಿರ್ದೇಶಕ ಎಸ್.ನಾರಾಯಣ್, ಇದೀಗ 'ಪಡ್ಡೆಹುಲಿ' ಸಿನಿಮಾ ಖ್ಯಾತಿಯ ಶ್ರೇಯಸ್ ಮಂಜು ನಟನೆಯ ಹೊಸ ಚಿತ್ರವೊಂದಕ್ಕೆ ಆ್ಯಕ್ಷನ್​ ಕಟ್ ಹೇಳುತ್ತಿದ್ದಾರೆ.
ಒಂದ್ಸಲ ಮೀಟ್ ಮಾಡೋಣ ಚಿತ್ರತಂಡ.
ಒಂದ್ಸಲ ಮೀಟ್ ಮಾಡೋಣ ಚಿತ್ರತಂಡ.
Updated on

ಕನ್ನಡ ಚಿತ್ರರಂಗದ ಮೇರು ನಟರಾದ ಡಾ. ರಾಜ್​ಕುಮಾರ್, ವಿಷ್ಣುವರ್ಧನ್, ಅಂಬರೀಶ್ ಇಂತಹ ದಿಗ್ಗಜ ನಟರ ಸಿನಿಮಾಗಳಿಗೆ ಆ್ಯಕ್ಷನ್​ ಕಟ್​ ಹೇಳಿರುವ ಹೆಸರಾಂತ ನಿರ್ದೇಶಕ ಎಸ್.ನಾರಾಯಣ್, ಇದೀಗ 'ಪಡ್ಡೆಹುಲಿ' ಸಿನಿಮಾ ಖ್ಯಾತಿಯ ಶ್ರೇಯಸ್ ಮಂಜು ನಟನೆಯ ಹೊಸ ಚಿತ್ರವೊಂದಕ್ಕೆ ಆ್ಯಕ್ಷನ್​ ಕಟ್ ಹೇಳುತ್ತಿದ್ದಾರೆ.

ಸಿನಿಮಾಗೆ 'ಒಂದ್ಸಲ ಮೀಟ್ ಮಾಡೋಣ' ಎಂದು ಟೈಟಲ್ ಇಡಲಾಗಿದ್ದು, ಇತ್ತೀಚೆಗೆ ಚಿಕ್ಕಮಗಳೂರಿನ ಶ್ರೀದೇವಿರಮ್ಮ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ಸಮಾರಂಭ ನೆರವೇರಿತು.

ಶ್ರೇಯಸ್ ಮಂಜು ಹಾಗೂ ತಾರಾ ಅನುರಾಧ ಅವರ ಮೇಲೆ ಸೆರೆಹಿಡಿಯಲಾದ ಮೊದಲ ಸನ್ನಿವೇಶಕ್ಕೆ ಸ್ಥಳೀಯ ಶಾಸಕರಾದ ಹೆಚ್ ಡಿ ತಮ್ಮಯ್ಯ ಆರಂಭ ಫಲಕ ತೋರಿದರು. ನಿರ್ಮಾಣ ಸಹಾಯಕ ಮಹದೇವ ಕ್ಯಾಮರಾ ಚಾಲನೆ ಮಾಡಿದರು.

ಚಿತ್ರವು ಪ್ರವಾಸ ಆಧಾರಿತ ಪ್ರೇಮಕಥೆಯಾಗಿರುವುದರಿಂದ, ನಿರ್ಮಾಪಕರು ಚಿಕ್ಕಮಗಳೂರು, ಸಕಲೇಶಪುರ, ವಿರಾಜಪೇಟೆ, ಕಣ್ಣೂರು, ಮೈಸೂರು, ಬೆಂಗಳೂರು, ಬೆಳಗಾವಿ ಮತ್ತು ಗೋವಾ ಮುಂತಾದ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲು ನಿರ್ಧರಿಸಿದ್ದಾರೆ.

<strong>ಶ್ರೇಯಸ್ ಮಂಜು, ಬೃಂದಾ ಆಚಾರ್ಯ</strong>
ಶ್ರೇಯಸ್ ಮಂಜು, ಬೃಂದಾ ಆಚಾರ್ಯ

ಚಿತ್ರದಲ್ಲಿ ಶ್ರೇಯಸ್ ಮಂಜು ಮುಖ್ಯ ಪಾತ್ರದಲ್ಲಿ ನಟಿಸಿದ್ದು, ಕೌಸಲ್ಯ ಸುಪ್ರಜಾ ರಾಮ ಚಿತ್ರದಲ್ಲಿನ ಪಾತ್ರಕ್ಕೆ ಹೆಸರುವಾಸಿಯಾಗಿರುವ ಬೃಂದಾ ಆಚಾರ್ಯ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.

ಒಂದ್ಸಲ ಮೀಟ್ ಮಾಡೋಣ ಚಿತ್ರವನ್ನು ಈಶಾ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ತ್ಯಾಗರಾಜ್ ನಿರ್ಮಿಸಿದ್ದಾರೆ, ಮಂಜು ಮತ್ತು ರಮೇಶ್ ಯಾದವ್ ಸಹ-ನಿರ್ಮಾಣ ಮಾಡುತ್ತಿದ್ದಾರೆ. ನಿರ್ದೇಶಕ ನಾರಾಯಣ ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದು, ಜಸ್ಸಿ ಗಿಫ್ಟ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಕುಮಾರ್ ಗೌಡ ಛಾಯಾಗ್ರಹಣ, ಶಿವಪ್ರಸಾದ್ ಯಾದವ್ ಸಂಕಲನದ ಹೊಣೆ ಹೊತ್ತಿದ್ದಾರೆ.

ಪೋಷಕ ಪಾತ್ರದಲ್ಲಿ ತಾರಾ ಅನುರಾಧ, ಶರತ್ ಲೋಹಿತಾಶ್ವ, ಸಾಧು ಕೋಕಿಲ, ಪ್ರಮೋದ್ ಶೆಟ್ಟಿ, ಕಲ್ಯಾಣಿ, ರಂಗಾಯಣ ರಘು, ಪಾವಗಡ ಮಂಜು, ಜಯರಾಮ್, ಸುಜಯ್ ಶಾಸ್ತ್ರಿ, ಗಿರಿ ಮುಂತಾದವರಿದ್ದಾರೆ.

ಶ್ರೇಯಸ್ ಅವರು ತಂದೆ ಕೆ ಮಂಜು ನಿರ್ಮಾಣದಲ ವಿಷ್ಣು ಪ್ರಿಯ ಎಂಬ ಸಿನಿಮಾದಲ್ಲೂ ನಟಿಸಿದ್ದು, ಈ ಸಿನಿಮಾ ಇನ್ನೂ ತೆರೆಗೆ ಬರಬೇಕಿದೆ. ಈ ನಡುವೆ 'ದಿಲ್ದಾರ್‌' ಎನ್ನುವ ಸಿನಿಮಾದಲ್ಲೂ ಕೂಡ ನಟಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com