ಶೀರ್ಷಿಕೆಯಿಂದಲೇ ಪ್ರೇಕ್ಷಕರ ಗಮನ ಸೆಳೆದಿರುವ ನಟ ರಾಘವೇಂದ್ರ ರಾಜ್‌ಕುಮಾರ್ ಮತ್ತು ನಟಿ ಶ್ರುತಿ ಒಟ್ಟಿಗೆ ನಟಿಸಿರುವ '13' ಸಿನಿಮಾವು ಸೆಪ್ಟೆಂಬರ್ 15ಕ್ಕೆ ಬಿಡುಗಡೆಯಾಗಲಿದೆ.
ಈ ಹಿಂದೆ 'ಪಲ್ಲಕ್ಕಿ', 'ಅಮೃತವಾಹಿನಿ'ಯಂಥ ಚಿತ್ರಗಳನ್ನು ನಿರ್ದೇಶಿಸಿದ್ದ ಕೆ ನರೇಂದ್ರಬಾಬು ಅವರು '13' ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ ಅಂತರಧರ್ಮೀಯ ಪ್ರೇಮ ಕಥೆ ಇದ್ದು, ಗಂಡ- ಹೆಂಡತಿ ಅಂದರೆ ಹೀಗಿರಬೇಕು ಎನ್ನುವಂತಿದ್ದ ದಂಪತಿಗಳಿಬ್ಬರೂ ತಮ್ಮದಲ್ಲದ ತಪ್ಪಿಗೆ ಇಡೀ ಜೀವನ ಯಾವ ರೀತಿ ಕಷ್ಟ ಅನುಭವಿಸುತ್ತಾರೆ ಎಂಬುವ ಕಥೆ ಸಿನಿಮಾದಲ್ಲಿದೆಯಂತೆ
ಮನುಷ್ಯ ಸಂಬಂಧಗಳನ್ನು ಬೆಸೆಯುವ ಸಂದೇಶ ಕೂಡ ಈ ಚಿತ್ರದಲ್ಲಿದೆಯಂತೆ. ಸೆನ್ಸಾರ್‌ನಲ್ಲಿ ಈಗಾಗಲೇ ಸಿನಿಮಾಗೆ ಯು/ಎ ಪ್ರಮಾಣ ಪತ್ರ ಸಿಕ್ಕಿದೆ.
ಈ ಸಿನಿಮಾ ನರೇಂದ್ರ ಬಾಬು ಅವರ 8ನೇ ಚಿತ್ರವಾಗಿದ್ದು, ಚಿತ್ರದಲ್ಲಿ ಮೂರು ಕಮರ್ಷಿಯಲ್ ಹಾಡುಗಳಿವೆ. ಯು ವಿ ಪ್ರೊಡಕ್ಷನ್ ಅಡಿಯಲ್ಲಿ ಕೆ ಸಂಪತ್ ಕುಮಾರ್, ಎಚ್ ಎಸ್ ಮಂಜುನಾಥ್, ಮಂಜುನಾಥ ಗೌಡ ಹಾಗೂ ಸಿ ಕೇಶವಮೂರ್ತಿ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದು, ಚಿತ್ರಕ್ಕೆ ಶೋಗನ್ ಬಾಬು ಅವರು ಸಂಗೀತ ನೀಡಿದ್ದಾರೆ.
ಪಾರ್ಟ್ 1 ಹಾಗೂ ಪಾರ್ಟ್ 2ರಂತೆ ಚಿತ್ರದಂತ ಸಿನಿಮಾ ಮಾಡಿದ್ದು, ಪಾರ್ಟ್ 1 ಚಿತ್ರವು ಸೆಪ್ಟೆಂಬರ್ 15ರಂದು ಬಿಡುಗಡೆಯಾಗುತ್ತಿದೆ.
Advertisement