ನನ್ನ ನಟನೆಗೆ ನಾನೇ ವಿಮರ್ಶಕ, ಆದರೆ 'ಮಾರಿಗೋಲ್ಡ್' ಚಿತ್ರದಲ್ಲಿ ಉತ್ತಮ ಕೆಲಸ ಮಾಡಿದ್ದೇನೆ: ದಿಗಂತ್

'ದುರಾಸೆ, ಸ್ನೇಹ ಮತ್ತು ಮಾನವ ಸ್ವಭಾವದ ಸಂಕೀರ್ಣಗಳನ್ನು ನಿರುಪದ್ರವಿ ವಸ್ತುವಿನ ಹಿನ್ನೆಲೆಯಲ್ಲಿ ಅನ್ವೇಷಿಸಲಾಗಿದೆ. ಮಾರಿಗೋಲ್ಡ್ ಎಂಬ ಹೂವು ಕೂಡ ಇದೆ. ಅಲ್ಲದೆ, ‘ಮಾರಿ’ ಪದವು ‘ಮಾರಾಟ’ ಮತ್ತು ‘ದೆವ್ವ’ ಸೇರಿದಂತೆ ಬಹು ಅರ್ಥಗಳನ್ನು ಹೊಂದಿದೆ.
ಮಾರಿಗೋಲ್ಡ್ ಚಿತ್ರತಂಡ
ಮಾರಿಗೋಲ್ಡ್ ಚಿತ್ರತಂಡ
Updated on

ರಾಘವೇಂದ್ರ ನಾಯಕ್ ನಿರ್ದೇಶನದ ಮಾರಿಗೋಲ್ಡ್ ಸಿನಿಮಾ ಹೊಸ ಅರ್ಥವನ್ನು ನೀಡಲು ಮುಂದಾಗಿದೆ. ನಟ ದಿಗಂತ್, ಸಂಗೀತಾ ಶೃಂಗೇರಿ, ಯಶ್ ಶೆಟ್ಟಿ ಮತ್ತು ಕಾಕ್ರೋಚ್ ಸುದಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಮಾರಿಗೋಲ್ಡ್ ಚಿತ್ರದಲ್ಲಿ, ಜನರ ನೈಜ ಪಾತ್ರಗಳನ್ನು ಬಿಚ್ಚಿಡಲಾಗಿದೆ.

'ದುರಾಸೆ, ಸ್ನೇಹ ಮತ್ತು ಮಾನವ ಸ್ವಭಾವದ ಸಂಕೀರ್ಣಗಳನ್ನು ನಿರುಪದ್ರವಿ ವಸ್ತುವಿನ ಹಿನ್ನೆಲೆಯಲ್ಲಿ ಅನ್ವೇಷಿಸಲಾಗಿದೆ. ಮಾರಿಗೋಲ್ಡ್ ಎಂಬ ಹೂವು ಕೂಡ ಇದೆ. ಅಲ್ಲದೆ, ‘ಮಾರಿ’ ಪದವು ‘ಮಾರಾಟ’ ಮತ್ತು ‘ದೆವ್ವ’ ಸೇರಿದಂತೆ ಬಹು ಅರ್ಥಗಳನ್ನು ಹೊಂದಿದೆ. ಸಿನಿಮಾವಾಗಿ ಇದು ಬಯಕೆ ಮತ್ತು ನೈತಿಕತೆ ಕುರಿತು ಹೇಳುತ್ತದೆ. ಮಾನವ ಸಂಬಂಧಗಳು ಮತ್ತು ಆಕಾಂಕ್ಷೆಗಳ ಸಂಕೀರ್ಣತೆಗಳನ್ನು ತೆರೆದಿಡುತ್ತದೆ ಎಂದು ನಿರ್ದೇಶದ ರಾಘವೇಂದ್ರ ನಾಯಕ್ ಹೇಳುತ್ತಾರೆ.

ರಘುವರ್ಧನ್ ನಿರ್ಮಾಣದ ಈ ಚಿತ್ರಕ್ಕೆ ಕೆಎಸ್ ಚಂದ್ರಶೇಖರ್ ಅವರ ಛಾಯಾಗ್ರಹಣವಿದ್ದು, ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ ಮತ್ತು ವೀರ್ ಸಮರ್ಥ್ ಸಂಗೀತ ಸಂಯೋಜಿಸಿದ್ದಾರೆ. ನಿರ್ದೇಶಕರೂ (ಬದ್ರಿ) ಆಗಿರುವ ನಿರ್ಮಾಪಕ ರಘುವರ್ಧನ್ ಅವರು ಮುಂದಿನ ಸಿನಿಮಾಗಾಗಿ ಕಥೆಯ ಹುಡುಕಾಟದಲ್ಲಿದ್ದರು. ಬಳಿಕ ರಾಘವೇಂದ್ರ ನಾಯಕ್ ಅವರ ಕಥೆಗೆ ಬೆಂಬಲವಾಗಿ ನಿಂತರು. 'ಕ್ರೈಮ್ ಥ್ರಿಲ್ಲರ್ ಚಿತ್ರ ನಿರ್ದೇಶಿಸುವುದು ನನ್ನ ಮುಂದಿರಲಿಲ್ಲವಾದರೂ, ಈ ಸಿನಿಮಾದ ಕಥೆಯು ನನ್ನನ್ನು ಈ ಚಿತ್ರ ನಿರ್ಮಾಣಕ್ಕೆ ಪ್ರೇರೇಪಿಸಿತು' ಎಂದು ರಘುವರ್ಧನ್ ಹಂಚಿಕೊಳ್ಳುತ್ತಾರೆ.

'ಮಾರಿಗೋಲ್ಡ್‌ ಚಿತ್ರದಲ್ಲಿನ ಪಾತ್ರಗಳಿಂದ ಹಿಡಿದು ತಿರುವುಗಳವರೆಗೆ ಕಥೆಯ ಪ್ರತಿಯೊಂದು ಅಂಶವು ತಾಜಾತನದಿಂದ ಕೂಡಿದೆ. ನಾನು ದಿಗಂತ್ ಅವರೊಂದಿಗೆ ವಿಭಿನ್ನ ಸ್ಕ್ರಿಪ್ಟ್ ಮಾಡಲು ಬಯಸಿದ್ದೆ. ಅವರು ಈವರೆಗೆ ಬಹುತೇಕ ಪ್ರೇಮ ಕಥೆಗಳಲ್ಲೇ ಕಾಣಿಸಿಕೊಂಡಿದ್ದಾರೆ. ಆದರೆ, ನಟನಾಗಿ ನಾನು ಅವರ ಸಾಮರ್ಥ್ಯ ಏನೆಂಬುದನ್ನು ಕಂಡುಕೊಂಡೆ. ಅವರು ಕ್ರೀಡಾಪಟು ಮತ್ತು ಬ್ಯಾಡ್ಮಿಂಟನ್ ಚಾಂಪಿಯನ್ ಆಗಿದ್ದಾರೆ. ಅವರು ಲವರ್ ಬಾಯ್ ಆಗಿ ನಟಿಸುವುದಕ್ಕಿಂತ ಹೆಚ್ಚಿನ ಸಾಮರ್ಥ್ಯ ಹೊಂದಿದ್ದಾರೆ ಎಂದು ನನಗೆ ತಿಳಿದಿದೆ ಎನ್ನುತ್ತಾರೆ ನಿರ್ದೇಶಕ ರಾಘವೇಂದ್ರ.

ಮಾರಿಗೋಲ್ಡ್ ಚಿತ್ರತಂಡ
ದಿಗಂತ್- ಸಂಗೀತಾ ಶೃಂಗೇರಿ ಅಭಿನಯದ 'ಮಾರಿಗೋಲ್ಡ್' ಚಿತ್ರ ಬಿಡುಗಡೆ ದಿನಾಂಕ ಘೋಷಣೆ

ಅವರು ಒಂದು ನಿರ್ದಿಷ್ಟ ರೀತಿಯ ಪಾತ್ರದಲ್ಲಿ ಮುಂದುವರಿಯುವುದು ನನಗೆ ಇಷ್ಟವಿರಲಿಲ್ಲ. ಅದರಿಂದ ಅವರನ್ನು ಹೊರಗೆ ತರಲು ಮತ್ತು ಅವರಲ್ಲಿರುವ ಬಹುಮುಖತೆಯನ್ನು ಪ್ರದರ್ಶಿಸುವ ಗುರಿಯನ್ನು ಹೊಂದಿದ್ದೇನೆ. ಅವರು ತಕ್ಷಣವೇ ಮಾರಿಗೋಲ್ಡ್ ಚಿತ್ರದ ಪಾತ್ರವನ್ನು ಒಪ್ಪಿಕೊಳ್ಳಲಿಲ್ಲ. ಆರಂಭದಲ್ಲಿ ಅವರು ಹಿಂಜರಿಯುತ್ತಿದ್ದರು ಮತ್ತು ಪಾತ್ರವನ್ನು ಒಪ್ಪಿಕೊಳ್ಳುವ ಮುನ್ನ ಎರಡು ದಿನ ಸಮಯ ತೆಗೆದುಕೊಂಡರು ಎಂದು ಅವರು ಹೇಳುತ್ತಾರೆ.

ದಿಗಂತ್ ಮಾತನಾಡಿ, ರಾಘವೇಂದ್ರ ನಾಯ್ಕ್ ಅವರನ್ನು ವಿಭಿನ್ನ ಪಾತ್ರದಲ್ಲಿ ನನ್ನನ್ನು ನೋಡಲು ಬಯಸಿದ್ದರು ಮತ್ತು ನಾನು ವೈವಿಧ್ಯಮಯ ಪಾತ್ರಗಳಿಗೆ ಜೀವ ತುಂಬಬಹುದು ಎಂಬ ವಿಶ್ವಾಸ ಹೊಂದಿದ್ದರು. ಮಾರಿಗೋಲ್ಡ್ ಒಂದು ಥ್ರಿಲ್ಲರ್ ಆಗಿದೆ. ವಾಸ್ತವವಾಗಿ, ನಾವು ಈ ಚಿತ್ರವನ್ನು ಸುಡುವ ಬಿಸಿಲಿನಲ್ಲಿ ಚಿತ್ರೀಕರಿಸಿದ್ದೇವೆ. ಸರಿಯಾದ ಶಾಟ್‌ಗಳು ಸಿಗುವವರೆಗೂ ರಾಘವೇಂದ್ರ ಅವರು ಬಿಡುತ್ತಿರಲಿಲ್ಲ. ನನ್ನ ಪಾತ್ರಕ್ಕೆ ಮತ್ತು ಇತರರ ಪಾತ್ರಗಳಿಗೆ ವೈವಿಧ್ಯತೆಯನ್ನು ತುಂಬಿದ್ದಾರೆ. ನನ್ನ ಕೆಲಸಗಳಿಗೆ ನಾನೇ ದೊಡ್ಡ ವಿಮರ್ಶಕನಾಗಿದ್ದೇನೆ ಮತ್ತು ಇತ್ತೀಚೆಗೆ ಈ ಚಿತ್ರವನ್ನು ನೋಡಿದಾಗ, ನಾನು ಈ ಚಿತ್ರದಲ್ಲಿ ಉತ್ತಮವಾಗಿ ಕೆಲಸ ಮಾಡಿದ್ದೇನೆ ಎಂದು ನನಗೆ ಅನಿಸಿತು ಎನ್ನುತ್ತಾರೆ.

ಮಾರಿಗೋಲ್ಡ್ ಚಿತ್ರತಂಡ
ಮಾರಿಗೋಲ್ಡ್ ಚಿತ್ರದ ಟ್ರೈಲರ್

ಬಿಗ್ ಬಾಸ್ ಕನ್ನಡ ಸೀಸನ್ 10 ರ ಸ್ಪರ್ಧಿ ಮತ್ತು ನಟಿ ಸಂಗೀತಾ ಶೃಂಗೇರಿ ಮಾತನಾಡಿ, 'ನಾನು ಯಾವಾಗಲೂ ವೈವಿಧ್ಯಮಯ ಪಾತ್ರಗಳಲ್ಲಿ ನಟಿಸಲು ಬಯಸುತ್ತೇನೆ. ಈ ಚಿತ್ರದಲ್ಲಿ, ನಾನು ನರ್ತಕಿಯ ಪಾತ್ರದಲ್ಲಿ ನಟಿಸಿದ್ದೇನೆ. ಈ ಪಾತ್ರವನ್ನು ಒಂದು ಅವಕಾಶವಾಗಿ ನೋಡುತ್ತೇನೆ. ನನ್ನ ಪಾತ್ರದ ಮೂಲಕ, ಹುಡುಗಿ ಪ್ರೀತಿಗಾಗಿ ಎಷ್ಟು ದೂರ ಹೋಗುತ್ತಾಳೆ ಎಂಬುದನ್ನು ಚಿತ್ರ ತೋರಿಸುತ್ತದೆ. ಇದು ಕಷ್ಟದ ಪಾತ್ರವಾಗಿದ್ದು, ಪ್ರೇಕ್ಷಕರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ನೋಡಲು ನಾನು ಉತ್ಸುಕಳಾಗಿದ್ದೇನೆ. ಗ್ಲಾಮರಸ್ ಪಾತ್ರಗಳಲ್ಲಿಯೂ ಕಾಣಿಸಿಕೊಳ್ಳಬೇಕಾಗುತ್ತದೆ. ಬೋಲ್ಡ್ ದೃಶ್ಯಗಳ ಸಂದರ್ಭದಲ್ಲಿ ನಾನು ಅವುಗಳನ್ನು ಸ್ಪಷ್ಟ ಕಲಾತ್ಮಕ ದೃಷ್ಟಿಯೊಂದಿಗೆ ಅವುಗಳನ್ನು ಸಂಪರ್ಕಿಸಲು ಬಯಸುತ್ತೇನೆ' ಎಂದು ಹೇಳುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com