'ಎಲ್ಟು ಮುತ್ತಾ' ಪೋಸ್ಟರ್ ರಿಲೀಸ್; ವಿಭಿನ್ನ ಶೀರ್ಷಿಕೆಯ ಚಿತ್ರದ ಮೂಲಕ ನಿರ್ದೇಶಕನಾಗಿ ರಾ ಸೂರ್ಯ ಪದಾರ್ಪಣೆ

ರಾ ಸೂರ್ಯ ಇದೇ ಮೊದಲ ಬಾರಿಗೆ ನಿರ್ದೇಶನಕನ ಜವಾಬ್ದಾರಿಯನ್ನು ಹೊತ್ತಿದ್ದು, 'ಎಲ್ಟು ಮುತ್ತಾ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಚಿತ್ರದ ಶೀರ್ಷಿಕೆಯೇ ವಿಶೇಷವಾಗಿದ್ದು, ನಿರೀಕ್ಷೆ ಹುಟ್ಟುಹಾಕಿದೆ. ಕೊಡಗಿನಿಂದ ಬಂದವರಾದ ಮತ್ತು ವೈದ್ಯಕೀಯ ಹಿನ್ನೆಲೆ ಹೊಂದಿರುವ ರಾ ಸೂರ್ಯ ಅವರು ಈ ಸಿನಿಮಾ ಮೂಲಕ ವಿಭಿನ್ನ ದೃಷ್ಟಿಕೋನವನ್ನು ತೆರೆಮೇಲೆ ತರುತ್ತಿದ್ದಾರೆ.
ಎಲ್ಟು ಮುತ್ತಾ ಚಿತ್ರದ ಪೋಸ್ಟರ್
ಎಲ್ಟು ಮುತ್ತಾ ಚಿತ್ರದ ಪೋಸ್ಟರ್
Updated on

ರಾ ಸೂರ್ಯ ಇದೇ ಮೊದಲ ಬಾರಿಗೆ ನಿರ್ದೇಶನಕನ ಜವಾಬ್ದಾರಿಯನ್ನು ಹೊತ್ತಿದ್ದು, 'ಎಲ್ಟು ಮುತ್ತಾ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಚಿತ್ರದ ಶೀರ್ಷಿಕೆಯೇ ವಿಶೇಷವಾಗಿದ್ದು, ನಿರೀಕ್ಷೆ ಹುಟ್ಟುಹಾಕಿದೆ. ಕೊಡಗಿನಿಂದ ಬಂದವರಾದ ಮತ್ತು ವೈದ್ಯಕೀಯ ಹಿನ್ನೆಲೆ ಹೊಂದಿರುವ ರಾ ಸೂರ್ಯ ಅವರು ಈ ಸಿನಿಮಾ ಮೂಲಕ ವಿಭಿನ್ನ ದೃಷ್ಟಿಕೋನವನ್ನು ತೆರೆಮೇಲೆ ತರುತ್ತಿದ್ದಾರೆ.

ಶೀರ್ಷಿಕೆ ಮತ್ತು ಕಥೆಯ ಮಹತ್ವವನ್ನು ವಿವರಿಸುವ ನಿರ್ದೇಶಕ ಸೂರ್ಯ, 'ಕೂರ್ಗ್‌ನಲ್ಲಿ ಕಾರಿಯಪ್ಪನಂತಹ ಸಾಂಪ್ರದಾಯಿಕ ಹೆಸರುಗಳು ಸಾಮಾನ್ಯವಾಗಿದ್ದು, ಅಂತ್ಯಕ್ರಿಯೆಯ ಆಚರಣೆಗಳಲ್ಲಿ ಬ್ಯಾಂಡ್‌ಗಳನ್ನು ಪ್ರದರ್ಶಿಸುವ ವ್ಯಕ್ತಿಗಳನ್ನು ಸಾಮಾನ್ಯವಾಗಿ 'ಎಲ್ಟು' ಅಥವಾ 'ಮುತ್ತಾ' ಎಂಬ ಹೆಸರುಗಳಿಂದ ಕರೆಯಲಾಗುತ್ತದೆ. ಅವರ ಜೀವನವನ್ನು ಚಿತ್ರಿಸಿರುವ ಈ ಸಿನಿಮಾವನ್ನು ಸಂಪೂರ್ಣವಾಗಿ ಮಡಿಕೇರಿಯಲ್ಲಿ ಚಿತ್ರೀಕರಿಸಲಾಗಿದೆ. ಚಿತ್ರಕ್ಕೆ ನಾವು ಕಾಲ್ಪನಿಕ ಅಂಶಗಳನ್ನು ಸೇರಿಸುವಾಗ ನೈಜ ಜೀವನದ ಕಥೆಯ ಸಾರಕ್ಕೆ ಧಕ್ಕೆಯಾಗದಂತೆ ನೋಡಿಕೊಂಡಿದ್ದೇವೆ' ಎಂದರು.

ಚಿತ್ರವು ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ಅದರ ಪೋಸ್ಟರ್ ಮತ್ತು ಶೀರ್ಷಿಕೆಯನ್ನು ಇತ್ತೀಚೆಗೆ ಶೈಲಜಾ ಕಿರಗಂದೂರು ಅನಾವರಣಗೊಳಿಸಿದರು. Eltuu Muthaa ತಮ್ಮ ಕೊನೇ ಉಸಿರಿರೋವರೆಗೂ ಹೋರಾಟದಲ್ಲಿ ತೊಡಗಿರುವ ಪಾತ್ರಗಳ ಸುತ್ತ ಕೇಂದ್ರೀಕೃತವಾಗಿದೆ. ಚಿತ್ರದಲ್ಲಿ ಶೌರ್ಯ ಪ್ರತಾಪ ಮತ್ತು ಪ್ರಿಯಾಂಕಾ ಮಳಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಜಿರಳೆ ಸುಧಿ, ಯಮುನಾ ಶ್ರೀನಿಧಿ ಮತ್ತು ನವೀನ್ ಪಡೀಲ್ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಚಿತ್ರಕ್ಕೆ ಪ್ರಸನ್ನ ಕೇಶವ ಕೆಎಸ್ ಅವರ ಸಂಗೀತ ಸಂಯೋಜನೆಯಿದ್ದು, ಮೆಯ್ಯಪ್ಪ ಭಾಸ್ಕರ್ (ಮಿಲ್ಕಿ) ಛಾಯಾಗ್ರಹಣವನ್ನು ನಿಭಾಯಿಸುತ್ತಾರೆ ಮತ್ತು ಸಂಕಲನವನ್ನು ಯೇಸು ನಿರ್ವಹಿಸಿದ್ದಾರೆ.

Follow KannadaPrabha channel on WhatsApp

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com