ಪರಮ್ ನಿರ್ದೇಶನದ 'ಕೋಟಿ' ಚಿತ್ರದ ಟೀಸರ್ ಬಿಡುಗಡೆ; ಪಾತ್ರದ ಬಗ್ಗೆ ನಟ ಡಾಲಿ ಧನಂಜಯ್ ಮಾತು

ಡಾಲಿ ಧನಂಜಯ ಅಭಿನಯದ ಕೋಟಿ ಚಿತ್ರದ ಮೂಲಕ ಕನ್ನಡ ಕಿರುತೆರೆಯಲ್ಲಿ ಹೆಸರು ಮಾಡಿದ್ದ ಪರಮ್ ನಿರ್ದೇಶನಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಚಿತ್ರತಂಡ ಕುತೂಹಲಕಾರಿ ಪೋಸ್ಟರ್ ಬಿಡುಗಡೆ ಮಾಡುವ ಚಿತ್ರದ ಅಧಿಕೃತ ಘೋಷಣೆ ಮಾಡಿದ್ದು, ಚಿತ್ರದ ಬಗ್ಗೆ ತೀವ್ರ ನಿರೀಕ್ಷೆ ಹುಟ್ಟುಹಾಕಿದೆ.
ಕೋಟಿ ಚಿತ್ರದ ಸ್ಟಿಲ್
ಕೋಟಿ ಚಿತ್ರದ ಸ್ಟಿಲ್
Updated on

ಡಾಲಿ ಧನಂಜಯ ಅಭಿನಯದ ಕೋಟಿ ಚಿತ್ರದ ಮೂಲಕ ಕನ್ನಡ ಕಿರುತೆರೆಯಲ್ಲಿ ಹೆಸರು ಮಾಡಿದ್ದ ಪರಮ್ ನಿರ್ದೇಶನಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಚಿತ್ರತಂಡ ಕುತೂಹಲಕಾರಿ ಪೋಸ್ಟರ್ ಬಿಡುಗಡೆ ಮಾಡುವ ಚಿತ್ರದ ಅಧಿಕೃತ ಘೋಷಣೆ ಮಾಡಿದ್ದು, ಚಿತ್ರದ ಬಗ್ಗೆ ತೀವ್ರ ನಿರೀಕ್ಷೆ ಹುಟ್ಟುಹಾಕಿದೆ.

ಇದೀಗ ಚಿತ್ರದ ಟೀಸರ್ ರಿಲೀಸ್ ಮಾಡಲಾಗಿದ್ದು, ಒಂದು ನಿಮಿಷದ ವಿಡಿಯೋ ಚಿತ್ರದ ಕಥಾವಸ್ತುವನ್ನು ತೆರೆದಿಡುತ್ತದೆ. ಚಿತ್ರದಲ್ಲಿ ನಟ ಡಾಲಿ ಧನಂಜಯ್ ಅವರು ಕೋಟಿ ಎಂಬ ಹೆಸರಿನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಪಾತ್ರದ ಸುತ್ತ ಕೋಟಿ ಸಿನಿಮಾ ಸುತ್ತುತ್ತದೆ.

ಟೀಸರ್‌ನಲ್ಲಿ ನಟಿ ತಾರಾ ಅನುರಾಧ, ನಟ ರಂಗಾಯಣ ರಘು ಮತ್ತು ರಮೇಶ್ ಇಂದಿರಾ ಪಾತ್ರಗಳನ್ನು ತೋರಿಸಲಾಗಿದೆ. ಕೋಟಿ ಚಿತ್ರ ಜಿಯೋ ಸ್ಟುಡಿಯೋಸ್‌ ಪ್ರಸ್ತುತಪಡಿಸುತ್ತಿರುವ ಮೊದಲ ಕನ್ನಡ ಸಿನಿಮಾವಾಗಿದೆ.

ನಿರ್ದೇಶಕರಾಗಿ ತಮ್ಮ ಪ್ರವೇಶದ ಕುರಿತು ಪ್ರತಿಕ್ರಿಯಿಸಿದ ಪರಮ್, 'ಕೋಟಿ ಚಿತ್ರದ ಮೂಲಕ ಬೆಳ್ಳಿತೆರೆಯಲ್ಲಿ ನನ್ನ ದೃಷ್ಟಿಗೆ ಜೀವ ತುಂಬಿರುವುದು ವರ್ಣನಾತೀತ ಭಾವನೆಯಾಗಿದೆ. ನನ್ನ ಕಥೆಯನ್ನು ನಂಬಿ ನನಗೆ ಅವಕಾಶ ನೀಡಿದ ಜಿಯೋ ಸ್ಟುಡಿಯೋಸ್ ಮತ್ತು ಜ್ಯೋತಿ ದೇಶಪಾಂಡೆ ಅವರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು. ಕಥೆಗಾರರನ್ನು ಪೋಷಿಸುವ ಕಡೆಗಿನ ಅವರ ಅಚಲವಾದ ಬದ್ಧತೆಯು ಕೇವಲ ಸಿನಿಮಾಗಳನ್ನು ನಿರ್ಮಿಸುವುದು ಮಾತ್ರವಲ್ಲ; ಇದು ಕಂಟೆಂಟ್ ಅನ್ನು ಬೆಳೆಸುವುದು, ವೈವಿಧ್ಯಮಯ ಧ್ವನಿಗಳನ್ನು ವರ್ಧಿಸುವುದು ಮತ್ತು ನಿರೂಪಣೆಗಳನ್ನು ರೂಪಿಸುವುದಾಗಿದೆ. ಜಿಯೋ ಸ್ಟುಡಿಯೋಸ್ ತನ್ನ ಹೆಜ್ಜೆಗುರುತುಗಳನ್ನು ವಿಸ್ತರಿಸುವುದನ್ನು ಮುಂದುವರೆಸುತ್ತಿರುವುದರಿಂದ, ಕನ್ನಡ ಚಿತ್ರರಂಗದಲ್ಲಿಯೂ ಯಶಸ್ಸಿನ ಕಥೆಯನ್ನು ಮರುಸೃಷ್ಟಿಸಲೆಂದು ನಾವು ಆಶಿಸುತ್ತೇವೆ' ಎಂದು ಹೇಳುತ್ತಾರೆ.

ಪರಮ್, ಮೋಕ್ಷಾ ಕುಶಾಲ್, ಡಾಲಿ ಧನಂಜಯ್ ಮತ್ತು ರಮೇಶ್ ಇಂದಿರಾ
ಪರಮ್, ಮೋಕ್ಷಾ ಕುಶಾಲ್, ಡಾಲಿ ಧನಂಜಯ್ ಮತ್ತು ರಮೇಶ್ ಇಂದಿರಾ

ತಮ್ಮ ಪಾತ್ರದ ಬಗ್ಗೆ ಮಾತನಾಡುವ ಧನಂಜಯ್, 'ಜನರು ಒಂದು ಕೋಟಿ ರೂಪಾಯಿ ಪಡೆದರೆ ಜೀವನದಲ್ಲಿ ಸೆಟಲ್ ಆಗಬಹುದು ಎಂದು ಭಾವಿಸುತ್ತಾರೆ. ನಮ್ಮ ಕೋಟಿ ಕೂಡ ಹಾಗೆಯೇ ಯೋಚಿಸುತ್ತಾನೆ. ನೀವು ಪ್ರತಿ ಮನೆಯಲ್ಲಿ, ಪ್ರತಿ ಕುಟುಂಬದಲ್ಲಿ ಕೋಟಿಯನ್ನು ಕಾಣಬಹುದು. ಇಂಥವರು ಇಷ್ಟು ದುಡ್ಡು ಸಂಪಾದಿಸಿದರೆ ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು ಮತ್ತು ನೆಮ್ಮದಿಯಿಂದ ಬದುಕಬಹುದು ಎಂದು ಭಾವಿಸುತ್ತಾರೆ. ಆದರೆ, ಜೀವನದ ಮೋಜಿನ ಭಾಗವೆಂದರೆ ನಮ್ಮಲ್ಲಿ ಪ್ರತಿಯೊಬ್ಬರಲ್ಲೂ ಒಂದು ಕೋಟಿ ಇರುತ್ತದೆ. ಈ ಪಾತ್ರವನ್ನು ನಿರ್ವಹಿಸುವುದರಿಂದ ನನ್ನೊಳಗೆ ಆಳವಾಗಿ ಅಡಗಿದ್ದ ಕೋಟಿಯ ಪದರಗಳನ್ನು ಅನ್ವೇಷಿಸಲು ನನಗೆ ಸಾಧ್ಯವಾಯಿತು ಮತ್ತು ಈಗ ನಾನು ನಿಮ್ಮಲ್ಲಿರುವ 'ಕೋಟಿ'ಯನ್ನು ಕಂಡುಹಿಡಿಯಬೇಕೆಂದು ಬಯಸುತ್ತೇನೆ' ಎನ್ನುತ್ತಾರೆ.

ಕೋಟಿ ಚಿತ್ರದ ಸ್ಟಿಲ್
ಪರಮ್ ನಿರ್ದೇಶನದ 'ಕೋಟಿ' ಸಿನಿಮಾ ಘೋಷಣೆ; ಡಾಲಿ ಧನಂಜಯ್ ನಾಯಕ, ಪೋಸ್ಟರ್ ಬಿಡುಗಡೆ

ಕೋಟಿ ಸಿನಿಮಾ ಮೂಲಕ ಕೊಡಗಿನ ಕುವರಿ ಮೋಕ್ಷ ಕುಶಾಲ್ ಅವರು ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ರಂಗಾಯಣ ರಘು, ತಾರಾ ಅನುರಾಧ ಅವರೊಂದಿಗೆ ಪೃಥ್ವಿ ಶಾಮನೂರು, ಸರ್ದಾರ್ ಸತ್ಯ ಮತ್ತು ತನುಜಾ ವೆಂಕಟೇಶ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ವಾಸುಕಿ ವೈಭವ್ ಅವರು ಕೋಟಿಯಲ್ಲಿ ಐದು ಹಾಡುಗಳನ್ನು ರಚಿಸಿದ್ದಾರೆ. ಅದರಲ್ಲಿ ಮೂರನ್ನು ಯೋಗರಾಜ್ ಭಟ್ ಮತ್ತು ಒಂದನ್ನು ವಾಸುಕಿ ಸ್ವತಃ ಬರೆದಿದ್ದಾರೆ. ಚಿತ್ರಕ್ಕೆ ನೋಬಿನ್ ಪಾಲ್ (777 ಚಾರ್ಲಿ) ಅವರ ಹಿನ್ನೆಲೆ ಸಂಗೀತ, ಪ್ರತೀಕ್ ಶೆಟ್ಟಿ (ಕಾಂತಾರ) ಅವರ ಸಂಕಲನವಿದೆ. ಅರುಣ್ ಬ್ರಹ್ಮನ್ ಚಿತ್ರದ ಛಾಯಾಗ್ರಹಣವನ್ನು ನಿಭಾಯಿಸಿದ್ದಾರೆ. ಚಿತ್ರ ಸದ್ಯ ಪೋಸ್ಟ್ ಪ್ರೊಡಕ್ಷನ್‌ ಹಂತದದ್ದು, ಕೋಟಿ ಜೂನ್ 14 ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com