ಶರಣ್ ಅಭಿನಯದ 'ಛೂಮಂತರ್' ಬಿಡುಗಡೆ ದಿನಾಂಕ ಮುಂದಕ್ಕೆ; ಮೇನಲ್ಲಿ ತೆರೆಗೆ ಬರಲು ಸಿದ್ಧ

ನಟ ಶರಣ್ ಅಭಿನಯದ ಛೂಮಂತರ್ ಸಿನಿಮಾ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ. ಆರಂಭದಲ್ಲಿ ಏಪ್ರಿಲ್‌ನಲ್ಲಿ ಬಿಡುಗಡೆ ಮಾಡಲು ಯೋಜಿಸಲಾಗಿತ್ತು, ಇದೀಗ ಹೊಸ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಘೋಷಿಸಿದೆ.
ಛೂಮಂತರ್ ಚಿತ್ರದಲ್ಲಿ ನಟ ಶರಣ್
ಛೂಮಂತರ್ ಚಿತ್ರದಲ್ಲಿ ನಟ ಶರಣ್
Updated on

ನಟ ಶರಣ್ ಅಭಿನಯದ ಛೂಮಂತರ್ ಸಿನಿಮಾ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ. ಆರಂಭದಲ್ಲಿ ಏಪ್ರಿಲ್‌ನಲ್ಲಿ ಬಿಡುಗಡೆ ಮಾಡಲು ಯೋಜಿಸಲಾಗಿತ್ತು, ಇದೀಗ ಹೊಸ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಘೋಷಿಸಿದೆ.

ಇತ್ತೀಚಿನ ಪ್ರಕಟಣೆಯ ಪ್ರಕಾರ, ನವನೀತ್ ನಿರ್ದೇಶನದ ಹಾರರ್-ಕಾಮಿಡಿ ಸಿನಿಮಾ ಮೇ 10 ರಂದು ತೆರೆಗೆ ಬರಲು ಸಿದ್ಧವಾಗಿದೆ. ಈ ಚಿತ್ರವು ಶರಣ್ ಅವರ ಹಿಂದಿನ ಪಾತ್ರಗಳಿಗಿಂತ ವಿಭಿನ್ನವಾಗಿದ್ದು, ಕನ್ನಡದಲ್ಲಿ ಹಾರರ್ ಚಿತ್ರಗಳ ತಯಾರಿಕೆಗೆ ಛೂಮಂತರ್ ಹೊಸ ಮಾನದಂಡವನ್ನು ಹೊಂದಿಸುತ್ತದೆ ಎನ್ನುತ್ತದೆ ಚಿತ್ರತಂಡ.

ಇತ್ತೀಚೆಗಷ್ಟೇ ಉಪಾಧ್ಯಕ್ಷ ಚಿತ್ರದ ಮೂಲಕ ಯಶಸ್ಸನ್ನು ಕಂಡಿದ್ದ ಚಿಕ್ಕಣ್ಣ ಛೂಮಂತರ್ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅಧ್ಯಕ್ಷ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದ ಚಿಕ್ಕಣ್ಣ ಮತ್ತು ಶರಣ್ ಇದೀಗ ಮತ್ತೊಮ್ಮೆ ತೆರೆಮೇಲೆ ಮೋಡಿಮಾಡಲು ಸಿದ್ಧರಾಗಿದ್ದಾರೆ. ಅಸಾಮಾನ್ಯ ಚಟುವಟಿಕೆಗಳು ಮತ್ತು ಪ್ರೇತಗಳ ​​ಸುತ್ತ ಸುತ್ತುವ ಛೂಮಂತರ್ ಸಿನಿಮಾ, 50 ನಿಮಿಷಗಳ ವಿಎಫ್‌ಎಕ್ಸ್‌ನಿಂದ ಅತ್ಯುತ್ತಮವಾಗಿ ಮೂಡಿಬಂದಿದೆ. ಇದುವೇ ಚಿತ್ರದ ಪ್ರಮುಖ ಅಂಶಗಳಲ್ಲಿ ಒಂದಾಗಿದೆ.

ತರುಣ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಮಾನಸ ತರುಣ್ ಮತ್ತು ತರುಣ್ ಶಿವಪ್ಪ ಅವರು ನಿರ್ಮಿಸುತ್ತಿರುವ ಛೂಮಂತರ್ ಚಿತ್ರಕ್ಕೆ ಚಂದನ್ ಶೆಟ್ಟಿ ಸಂಗೀತ ಸಂಯೋಜಿಸಿದ್ದಾರೆ ಮತ್ತು ಅವಿನಾಶ್ ಆರ್ ಬಸುತ್ಕರ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ವೆಂಕಿ ಯುಡಿವಿ ಸಂಕಲನವಿದ್ದು, ಅನುಪ್ ಕಟ್ಟುಕರನ್ ಛಾಯಾಗ್ರಹಣ ಮಾಡಿದ್ದಾರೆ.

ಛೂಮಂತರ್ ಚಿತ್ರದಲ್ಲಿ ನಟ ಶರಣ್
ಛೂಮಂತರ್ ಚಿತ್ರದ ಟೀಸರ್

ಚಿತ್ರದಲ್ಲಿ ಮೇಘನಾ ಗಾಂವ್ಕರ್, ಅದಿತಿ ಪ್ರಭುದೇವ, ಪ್ರಭು ಮುಂಡ್ಕೂರ್ ಮತ್ತು ರಜಿನಿ ಭಾರದ್ವಾಜ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com