'ವಿಐಪಿ' ಕಮರ್ಷಿಯಲ್ ಸಿನಿಮಾದ ಭಾಗವಾಗಿರುವುದಕ್ಕೆ ಸಂತೋಷವಾಗಿದೆ: ತೇಜಸ್ವಿನಿ ಶರ್ಮಾ

ಫ್ಲಾಟ್#9, ಮೇರಿ ಮತ್ತು ಇಂಗ್ಲಿಷ್ ಮಂಜ ಚಿತ್ರಗಳಲ್ಲಿ ನಟಿಸಿದ್ದ ತೇಜಸ್ವಿನಿ ಶರ್ಮಾ ಇದೀಗ ವಿಐಪಿ ಚಿತ್ರ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಬ್ರಹ್ಮ ಅವರ ನಿರ್ದೇಶನದ ಚಿತ್ರದಲ್ಲಿ ನಟ ವಸಿಷ್ಠ ಸಿಂಹ ಅವರೊಂದಿಗೆ ತೆರೆ ಹಂಚಿಕೊಳ್ಳುತ್ತಿರುವುದಕ್ಕೆ ಥ್ರಿಲ್ ಆಗಿದ್ದಾರೆ. ಕ್ರೈಮ್ ಥ್ರಿಲ್ಲರ್ ಎಂದು ಹೇಳಲಾದ ಈ ಚಿತ್ರದಲ್ಲಿ ತೇಜಸ್ವಿನಿ ಕಾಲೇಜು ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ.
ತೇಜಸ್ವಿನಿ ಶರ್ಮಾ - ವಿಐಪಿ ಚಿತ್ರದ ಪೋಸ್ಟರ್
ತೇಜಸ್ವಿನಿ ಶರ್ಮಾ - ವಿಐಪಿ ಚಿತ್ರದ ಪೋಸ್ಟರ್

ಫ್ಲಾಟ್#9, ಮೇರಿ ಮತ್ತು ಇಂಗ್ಲಿಷ್ ಮಂಜ ಚಿತ್ರಗಳಲ್ಲಿ ನಟಿಸಿದ್ದ ತೇಜಸ್ವಿನಿ ಶರ್ಮಾ ಇದೀಗ ವಿಐಪಿ ಚಿತ್ರ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಬ್ರಹ್ಮ ಅವರ ನಿರ್ದೇಶನದ ಚಿತ್ರದಲ್ಲಿ ನಟ ವಸಿಷ್ಠ ಸಿಂಹ ಅವರೊಂದಿಗೆ ತೆರೆ ಹಂಚಿಕೊಳ್ಳುತ್ತಿರುವುದಕ್ಕೆ ಥ್ರಿಲ್ ಆಗಿದ್ದಾರೆ. ಕ್ರೈಮ್ ಥ್ರಿಲ್ಲರ್ ಎಂದು ಹೇಳಲಾದ ಈ ಚಿತ್ರದಲ್ಲಿ ತೇಜಸ್ವಿನಿ ಕಾಲೇಜು ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ.

'ಥ್ರಿಲ್ಲರ್‌ ಸಿನಿಮಾಗಳೊಂದಿಗೆ ನಟನೆಯನ್ನು ಪ್ರಾರಂಭಿಸಿ ಮತ್ತು ವಿಭಿನ್ನ ಪ್ರಕಾರಗಳಲ್ಲಿ ಕೆಲಸ ಮಾಡುತ್ತಿರುವುದಕ್ಕೆ ಮತ್ತು ಕಮರ್ಷಿಯಲ್ ಚಿತ್ರದಲ್ಲಿ ನಟಿಸುತ್ತಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ವಿಐಪಿಯಲ್ಲಿ ಅನೇಕ್ ಶೇಡ್‌ಗಳಲ್ಲಿ ಕಾಣಿಸಿಕೊಳ್ಳುತ್ತಿರುವ ನಟ ವಸಿಷ್ಠ ಸಿಂಹ ಅವರೊಂದಿಗೆ ಕೆಲಸ ಮಾಡುವುದು ಆಸಕ್ತಿದಾಯಕವಾಗಿದೆ' ಎಂದು ಹೇಳುತ್ತಾರೆ ತೇಜಸ್ವಿನಿ.

ವಿಐಪಿ ಚಿತ್ರವನ್ನು ಕಲಾಸೃಷ್ಟಿ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಆರ್‌ಎಸ್ ಮೋಹನ್ ಕುಮಾರ್ ಮತ್ತು ಆರ್ ಅಚ್ಯುತ ರಾವ್ ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ಅಫ್ಜಲ್ ಅವರು ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಮತ್ತು ಮಹತ್ವದ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಬೆಂಗಳೂರು ಮತ್ತು ಕೊಡಗಿನಲ್ಲಿ ಚಿತ್ರೀಕರಣ ಮಾಡಲಾಗಿದೆ.

'ಕೆಲವು ಭಾಗಗಳನ್ನು ಹೊರತುಪಡಿಸಿ, ನಾನು ಬಹುತೇಕ ನನ್ನ ಭಾಗಗಳ ಚಿತ್ರೀಕರಣ ಪೂರ್ಣಗೊಂಡಿದೆ. ಮುಂಬರುವ ವೇಳಾಪಟ್ಟಿಯಲ್ಲಿ ಉಳಿದಿರುವುದು ಪೂರ್ಣಗೊಳ್ಳಲಿದೆ' ಎಂದು ತೇಜಸ್ವಿನಿ ಹೇಳುತ್ತಾರೆ.

ತೇಜಸ್ವಿನಿ ಶರ್ಮಾ - ವಿಐಪಿ ಚಿತ್ರದ ಪೋಸ್ಟರ್
VIP ಚಿತ್ರೀಕರಣ ಬಹುತೇಕ ಪೂರ್ಣ; ನಟ ವಸಿಷ್ಠ ಸಿಂಹ ಪಾತ್ರದ ಫಸ್ಟ್ ಲುಕ್ ಬಿಡುಗಡೆ

ವಿಐಪಿ ಸಿನಿಮಾ ತೇಜಸ್ವಿನಿಯ 6ನೇ ಯೋಜನೆಯಾಗಿದ್ದು, ಅವರು ಹೆಚ್ಚಿನ ಕನ್ನಡ ಚಿತ್ರಗಳಲ್ಲಿ ಕೆಲಸ ಮಾಡಲು ಮತ್ತು ಇತರ ಉದ್ಯಮಗಳಲ್ಲಿಯೂ ತಮ್ಮ ಪರಿಧಿಯನ್ನು ವಿಸ್ತರಿಸಲು ಸಿದ್ಧರಾಗಿದ್ದಾರೆ. 'ನಾನು ಒಂದೆರಡು ತಮಿಳು ಸಿನಿಮಾಗಳಿಗಾಗಿ ಮಾತುಕತೆ ನಡೆಸುತ್ತಿದ್ದೇನೆ. ಹಿಂದಿಯಲ್ಲಿ ಡ್ಯಾನ್ಸ್ ವಿಡಿಯೋಗಳನ್ನು ಮಾಡಲು ನನ್ನನ್ನು ಸಂಪರ್ಕಿಸಲಾಗಿದೆ. ಆ ಬಗ್ಗೆಯೂ ನೋಡುತ್ತಿದ್ದೇನೆ. ಸಿನಿಮಾ ಮಾಡುವುದು ಈಗ ನನ್ನ ಆದ್ಯತೆಯಾಗಿದ್ದು, ನಾನು ಕೆಲವು ಉತ್ತಮ ಸ್ಕ್ರಿಪ್ಟ್‌ಗಳ ಭಾಗವಾಗಲು ಎದುರು ನೋಡುತ್ತಿದ್ದೇನೆ. ವೆಬ್ ಸೀರೀಸ್, ಮ್ಯೂಸಿಕ್ ವಿಡಿಯೋಗಳಿಗಷ್ಟೇ ಸೀಮಿತವಾಗಲು ನನಗಿಷ್ಟವಿಲ್ಲ. ಫ್ರೀಸ್ಟೈಲ್ ಮತ್ತು ಭರತನಾಟ್ಯದಲ್ಲಿ ಪರಿಣಿತಿ ಹೊಂದಿದ್ದೇನೆ. ನಾನು ಮ್ಯೂಸಿಕ್ ವಿಡಿಯೋಗಳನ್ನು, ನೃತ್ಯದ ಅವಕಾಶಗಳನ್ನು ನೀಡುವ ಯೋಜನೆಗಳಿಗಾಗಿ ಎದುರು ನೋಡುತ್ತಿದ್ದೇನೆ ಎನ್ನುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com