Rakshit Shetty's ಕನ್ನಡ ಚಿತ್ರ ಚಾರ್ಲಿ 777ಗೆ ಮತ್ತೊಂದು ಗರಿ: ಜಪಾನ್ ನಲ್ಲೂ ಬಿಡುಗಡೆ!

ಕನ್ನಡ ಚಿತ್ರ ಚಾರ್ಲಿ 777ಗೆ ಮತ್ತೊಂದು ಗರಿ ಸೇರ್ಪಡೆಯಾಗಿದ್ದು, ರಕ್ಷಿತ್ ಶೆಟ್ಟಿ ಅಭಿನಯದ ಚಿತ್ರ ಇದೀಗ ಜಪಾನ್ ನಲ್ಲೂ ಬಿಡುಗಡೆಗೆ ಸಜ್ಜಾಗಿದೆ.
777 Charlie
ಚಾರ್ಲಿ 777 ಜಪಾನ್ ನಲ್ಲಿ ಬಿಡುಗಡೆ
Updated on

ಬೆಂಗಳೂರು: ಕನ್ನಡ ಚಿತ್ರ ಚಾರ್ಲಿ 777ಗೆ ಮತ್ತೊಂದು ಗರಿ ಸೇರ್ಪಡೆಯಾಗಿದ್ದು, ರಕ್ಷಿತ್ ಶೆಟ್ಟಿ ಅಭಿನಯದ ಚಿತ್ರ ಇದೀಗ ಜಪಾನ್ ನಲ್ಲೂ ಬಿಡುಗಡೆಗೆ ಸಜ್ಜಾಗಿದೆ.

ಹೌದು.. ರಕ್ಷಿತ್ ಶೆಟ್ಟಿ ಅಭಿನಯದ ಕಿರಣ್ ರಾಜ್ ನಿರ್ದೇಶನದ ರಾಷ್ಟ್ರ ಪ್ರಶಸ್ತಿ ವಿಜೇತ ಚಾರ್ಲಿ 777 ಚಿತ್ರವು ಇದೇ ಜೂನ್ 28ರಂದು ಜಪಾನ್ ನಲ್ಲಿ ಬಿಡುಗಡೆಯಾಗಲಿದೆ. ನಿರ್ದೇಶಕ ಕಿರಣ್‌ ರಾಜ್ ನಿರ್ದೇಶನದಲ್ಲಿ 2022ರಲ್ಲಿ ಮೂಡಿಬಂದಿದ್ದ ಈ ಚಿತ್ರ ನಾಯಿ ಮತ್ತು ನಾಯಕ ನಡುವಿನ ಮನಮುಟ್ಟುವ ಕಥಾಹಂದರದೊಂದಿಗೆ ಅಭೂತಪೂರ್ವ ಯಶಸ್ಸು ಕಂಡಿತ್ತು.

777 Charlie
'ಸಪ್ತ ಸಾಗರದಾಚೆ ಎಲ್ಲೋ' ಪ್ರೇಮಕಥೆ ಎರಡು ಚಿತ್ರಗಳಾಗಿ ವಿಭಜನೆ, ಒಂದು ಹೊಸ ಪರಿಕಲ್ಪನೆ: ನಟ ರಕ್ಷಿತ್ ಶೆಟ್ಟಿ

ಇದೀಗ ಚಾರ್ಲಿ ಚಿತ್ರತಂಡ ಮತ್ತೊಂದು ಖುಷಿ ಸುದ್ದಿಹಂಚಿಕೊಂಡಿದ್ದು, ಜೂನ್‌ನಲ್ಲಿ ಸಾಗರೋತ್ತರ ಪ್ರದೇಶದಲ್ಲಿ ಕನ್ನಡದ ಯಶಸ್ವಿ ಚಿತ್ರ ತೆರೆಗಪ್ಪಳಿಸಲಿದೆ ಎಂದು ಹೇಳಿದೆ. '777 ಚಾರ್ಲಿ' ಜಪಾನ್‌ನಲ್ಲಿ ಮ್ಯಾಜಿಕ್ ಮಾಡಲು ಸಜ್ಜಾಗಿದ್ದು, ಜೂನ್ 28ರಂದು ಬಿಡುಗಡೆಯಾಗಲಿದೆ.

ಸಿನಿಮಾ ವ್ಯವಹಾರ ವಿಶ್ಲೇಷಕ ತರಣ್ ಆದರ್ಶ್ ತಮ್ಮ ಅಧಿಕೃತ ಸಾಮಾಜಿಕ ಮಾಧ್ಯಮದಲ್ಲಿ ಈ ಕುರಿತು ಪೋಸ್ಟ್ ಮಾಡಿದ್ದು, ಜಪಾನೀಸ್ ಭಾಷೆಯಲ್ಲಿ '777 ಚಾರ್ಲಿ'ಯ ಪೋಸ್ಟರ್ ಅನ್ನು ಸಹ ಹಂಚಿಕೊಂಡಿದ್ದಾರೆ. ರಕ್ಷಿತ್ ಶೆಟ್ಟಿ ನಟಿಸಿರುವ ಮತ್ತು ಕಿರಣ್ ರಾಜ್ ನಿರ್ದೇಶನದ '777 ಚಾರ್ಲಿ' ಜೂನ್ 28, 2024ರಂದು ಜಪಾನ್‌ನಲ್ಲಿ ಬಿಡುಗಡೆಯಾಗಲಿದೆ ಎಂದು ಬರೆದುಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com