ಭೋಜ್​ಪುರಿ ನಟಿ ಅಮೃತಾ ಪಾಂಡೆ ಶವವಾಗಿ ಪತ್ತೆ: ಸಾವಿಗೂ ಮುನ್ನ ವಾಟ್ಸಾಪ್ ಸ್ಟೇಟಸ್!

ಭೋಜ್​ಪುರಿ ನಟಿ ಅಮೃತಾ ಪಾಂಡೆ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಅಮೃತಾ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಭೋಜ್​ಪುರಿ ನಟಿ ಅಮೃತಾ ಪಾಂಡೆ
ಭೋಜ್​ಪುರಿ ನಟಿ ಅಮೃತಾ ಪಾಂಡೆ

ಪಾಟ್ನಾ: ಭೋಜ್​ಪುರಿ ನಟಿ ಅಮೃತಾ ಪಾಂಡೆ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಅಮೃತಾ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಅದಾಮ್​ಪುರದ ದಿವ್ಯಾಧರ್ಮ ಅಪಾರ್ಟ್​ಮೆಂಟ್​ನಲ್ಲಿ ಈ ಘಟನೆ ನಡೆದಿದೆ. ಅಮೃತಾ ಅವರಿಗೆ 27 ವರ್ಷ ವಯಸ್ಸಾಗಿತ್ತು.

ಸಾಯುವುದಕ್ಕೂ ಮೊದಲು ಅವರು ನಿಗೂಢಾರ್ಥದಲ್ಲಿ ವಾಟ್ಸಾಪ್ ಸ್ಟೇಟಸ್ ಒಂದನ್ನು ಹಾಕಿದ್ದರು. ಅದಾಮ್​ಪುರದ ದಿವ್ಯಾಧರ್ಮ ಅಪಾರ್ಟ್​ಮೆಂಟ್​ನಲ್ಲಿ ಆತ್ಮಹತ್ಯೆ ನಡೆದಿದೆ ಎಂದು ಪೊಲೀಸರಿಗೆ ಕರೆ ಬಂದಿತ್ತು.

ಅವರು ಬಂದು ನೋಡಿದಾಗ ಬಾಡಿ ಹಾಸಿಗೆ ಮೇಲಿತ್ತು. ಅಮೃತಾ ಸಹೋದರಿ ಮೊದಲು ರೂಂ ಒಳಗೆ ಬಂದಿದ್ದರು. ಈ ವೇಳೆ ಅಕ್ಕನನ್ನು ನೇಣು ಬಿಗಿದ ಸ್ಥಿತಿಯಲ್ಲಿ ನೋಡಿ ಶಾಕ್ ಆದರು. ಜೊತೆಗೆ ಅವರನ್ನು ಕೆಳಕ್ಕೆ ಇಳಿಸೋ ಪ್ರಯತ್ನ ಮಾಡಿದರು. ಆದರೆ, ಆಗಲೇ ಸಮಯ ಮೀರಿತ್ತು.

ಭೋಜ್​ಪುರಿ ನಟಿ ಅಮೃತಾ ಪಾಂಡೆ
ಮಲಯಾಳಂ ನಟಿ ರೆಂಜೂಷಾ ಮೆನನ್ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆ: ಆತ್ಮಹತ್ಯೆ ಶಂಕೆ!

ಅಮೃತಾ ಪಾಂಡೆ ಅವರು ಸಾಯುವುದಕ್ಕೂ ಮೊದಲು ಸ್ಟೇಟಸ್ ಒಂದನ್ನು ಹಾಕಿದ್ದರು. ‘ಅವರ ಜೀವನ ಎರಡು ದೋಣಿಗಳ ಮೇಲಿದೆ. ನಾವು ನಮ್ಮ ದೋಣಿಯನ್ನು ಮುಳುಗಿಸುವ ಮೂಲಕ ಅವರ ಮಾರ್ಗವನ್ನು ಸುಲಭಗೊಳಿಸಿದ್ದೇವೆ’ ಎಂದು ಸ್ಟೇಟಸ್ ಹಾಕಿದ್ದರು. ಇದರಿಂದ ಅವರ ಪತಿ ಮತ್ತೊಬ್ಬರನ್ನು ಪ್ರೀತಿಸುತ್ತಿದ್ದರೇ ಎನ್ನುವ ಅನುಮಾನ ಮೂಡಿದೆ. ಈ ಬಗ್ಗೆಯೂ ತನಿಖೆ ನಡೆಯುತ್ತಿದೆ.

2022ರಲ್ಲಿ ಅಮೃತಾ ಅವರು ಚಂದ್ರಮಣಿ ಎಂಬುವವರನ್ನು ವಿವಾಹವಾದರು. ಅವರ ಪತಿ ವೃತ್ತಿಯಲ್ಲಿ ಇಂಜಿನಿಯರ್. ಅಮೃತಾ ಅವರು ನಟನೆಯಲ್ಲಿ ಸರಿಯಾಗಿ ಚಾನ್ಸ್ ಸಿಗದೆ ಖಿನ್ನತೆಗೆ ಒಳಗಾಗಿದ್ದರು ಎಂದು ಕುಟುಂಬದವರು ಹೇಳಿಕೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com