'ಜಂಬೋ ಸರ್ಕಸ್' ಮೂಲಕ ಎಂಡಿ ಶ್ರೀಧರ್ ಮತ್ತೆ ನಿರ್ದೇಶನಕ್ಕೆ

ಸ್ನೇಹದ ಮಹತ್ವ ಹಾಗೂ ಪ್ರೀತಿಯ ಸುತ್ತ ನಡೆಯುವ ಕಥಾಹಂದರ ಇಟ್ಟುಕೊಂಡು ನಿರ್ದೇಶಕ ಎಂ.ಡಿ. ಶ್ರೀಧರ್ 'ಜಂಬೂ ಸರ್ಕಸ್' ಎಂಬ ಕಾಮಿಡಿ ಡ್ರಾಮಾ ಚಿತ್ರವನ್ನು ನಿರ್ದೇಶಿಸಿದ್ದಾರೆ.
ಜಂಬೂ ಸರ್ಕಸ್ ಚಿತ್ರ ತಂಡ
ಜಂಬೂ ಸರ್ಕಸ್ ಚಿತ್ರ ತಂಡ
Updated on

ಫ್ರೆಂಡ್ಸ್, ಜಾಲಿ ಡೇಸ್, ಕೃಷ್ಣ, ಚೆಲ್ಲಾಟ, ಪೊರ್ಖಿ, ಬುಲ್ ಬುಲ್, ಬುಗುರಿ ಮೊದಲಾದ ಸಿನಿಮಾಗಳನ್ನು ನಿರ್ದೇಶಿಸಿದ್ದ ಜನಪ್ರಿಯ ನಿರ್ದೇಶಕ ಎಂ.ಡಿ. ಶ್ರೀಧರ್‌ ಒಂದು ವಿರಾಮದ ಬಳಿಕ ಮತ್ತೆ ನಿರ್ದೇಶನಕ್ಕೆ ಮರಳಿದ್ದಾರೆ.

ಸ್ನೇಹದ ಮಹತ್ವ ಹಾಗೂ ಪ್ರೀತಿಯ ಸುತ್ತ ನಡೆಯುವ ಕಥಾಹಂದರ ಇಟ್ಟುಕೊಂಡು ನಿರ್ದೇಶಕ ಎಂ.ಡಿ. ಶ್ರೀಧರ್ 'ಜಂಬೂ ಸರ್ಕಸ್' ಎಂಬ ಕಾಮಿಡಿ ಡ್ರಾಮಾ ಚಿತ್ರವನ್ನು ನಿರ್ದೇಶಿಸಿದ್ದಾರೆ.

ಒಡೆಯ ನಂತರ 5 ವರ್ಷಗಳ ವಿರಾಮ ತೆಗೆದುಕೊಂಡಿದ್ದ ಶ್ರೀಧರ್ ಅವರು, ಜಂಬೂ ಸರ್ಕಸ್ ಚಿತ್ರಕ್ಕೆ ಆ್ಯಕ್ಷನ್- ಕಟ್ ಹೇಳಿದ್ದಾರೆ. ಮೂರು ದಶಕಗಳಿಂದ ಚಿತ್ರೋದ್ಯಮದಲ್ಲಿ ಸೇವೆ ಸಲ್ಲಿಸುತ್ತಿರುವ ಹೆಚ್.ಸಿ. ಸುರೇಶ್ ಮಹತಿ ಕಂಬೈನ್ಸ್ ಮೂಲಕ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರದಲ್ಲಿ ಪ್ರವೀಣ್ ತೇಜ್ ಮತ್ತು ಅಂಜಲಿ ಅನೀಶ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಚಿತ್ರದ ಟೀಸರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದು, ಟೀಸರ್ ಬಿಡುಗಡೆ ಸಮಾರಂಭದಲ್ಲಿ ಎಂ.ಡಿ.ಶ್ರೀಧರ್ ಅವರು ಕನ್ನಡ ಚಿತ್ರರಂಗದಲ್ಲಿ ತಮ್ಮ ಸುದೀರ್ಘ ಪ್ರಯಾಣವನ್ನು ಮೆಲುಕು ಹಾಕಿದರು.

ಒಡೆಯ ನಂತರ ಗ್ಯಾಪ್ ತೆಗೆದುಕೊಂಡು ಈ ಚಿತ್ರ ಮಾಡಿದ್ದೇನೆ. ‘ಜಂಬೂ ಸರ್ಕಸ್’ ಸಿನಿಮಾ ಆಗಲು ಕಾರಣ ನಿರ್ಮಾಪಕರು. ಮದುವೆ ಕಾರ್ಯಕ್ರಮವೊಂದರಲ್ಲಿ ಹೆಚ್.ಸಿ. ಸುರೇಶ್ ಅವರು ಸಿಕ್ಕಿದ್ದರು. ಆಗ ಒಂದು ಲೈನ್ ಹೇಳಿ ನಮಗೊಂದು ಸಿನಿಮಾ ಮಾಡಿಕೊಡಿ ಎಂದರು. ನಿರ್ಮಾಪಕರು ಕೆಲ ವರ್ಷಗಳ ಹಿಂದೆ ಬೇರೆ ಸಿನಿಮಾಗಾಗಿ ಅಡ್ವಾನ್ಸ್ ಕೊಟ್ಟಿದ್ದರು. ಆ ಚಿತ್ರ ಆಗಿರಲಿಲ್ಲ. ಆ ಕಮಿಟ್‌ಮೆಂಟ್ ಮೇಲೆ ಈ ಸಿನಿಮಾ ಮಾಡಿದ್ದೇವೆ. ಪ್ರಾರಂಭದಲ್ಲಿ ನಿರ್ಮಾಪಕರಿಗೆ ಪಾರ್ಟನರ್ ಇದ್ದರು. ಅವರು ನಡುವೆ ಕೈ ಕೊಟ್ಟರು. ಹಾಗಾಗಿ ಸುರೇಶ್ ಕಷ್ಟಪಟ್ಟು ಸಿನಿಮಾ ಮಾಡಿದ್ದಾರೆ. ಈ ಸಿನಿಮಾ ಗೆದ್ದರೆ ಅವರು ಇನ್ನಷ್ಟು ಸಿನಿಮಾ ಮಾಡುತ್ತಾರೆ.

ಜಂಬೂ ಸರ್ಕಸ್ ಚಿತ್ರ ತಂಡ
ಉತ್ತಮ ಪಾತ್ರ ಮತ್ತು ಗುಣಮಟ್ಟದ ಚಿತ್ರಗಳ ಮಹತ್ವ ಅರಿತಿದ್ದೇನೆ: ನಟಿ ಮೇಘಾ ಶೆಟ್ಟಿ

ಇದು ಗೆಳೆಯರಿಬ್ಬರ ಕಥೆ. ಒಂದೇ ಶಾಲೆ, ಕಾಲೇಜ್‌ನಲ್ಲಿ ಓದಿ. ಒಂದೇ ಮಂಟಪದಲ್ಲಿ ಒಂದೇ ದಿನ ಮದುವೆ ಆಗುತ್ತಾರೆ. ಒಂದೇ ಏರಿಯಾದಲ್ಲಿ ಎದುರು ಬದುರು ಮನೆ ಮಾಡುತ್ತಾರೆ. ಕೊನೆಗೆ ಅವರಿಗೆ ಒಂದೇ ದಿನ ಮಕ್ಕಳೂ ಕೂಡ ಆಗುತ್ತವೆ. ಇವರ ಗೆಳೆತನ ಅವರ ಹೆಂಡತಿಯರಿಗೆ ಇಷ್ಟ ಇರಲ್ಲ. ಹಾಗಾಗಿ ಮಕ್ಕಳನ್ನು ವೈರಿಗಳಂತೆ ಬೆಳೆಸುತ್ತಾರೆ. ದಾಯಾದಿಗಳಂತೆ ಬೆಳೆದ ನಾಯಕ-ನಾಯಕಿ ಮುಂದೆ ಏನೆಲ್ಲಾ ಮಾಡುತ್ತಾರೆ, ಅವರಿಬ್ಬರ ನಡುವೆ ಏನೆಲ್ಲಾ ನಡೆಯುತ್ತದೆ ಎಂಬುದೇ ಈ ಚಿತ್ರದ ಕಾನ್ಸೆಪ್ಟ್. ಇದರಲ್ಲಿ ಮೂರು ಫೈಟ್, ಸಾಂಗ್‌ಗಳು ಇವೆ. ಸಿನಿಮಾ ರಿಲೀಸ್‌ಗೆ ಸಿದ್ದವಾಗಿದ್ದು ಸದ್ಯದಲ್ಲೇ ರಿಲೀಸ್ ಪ್ಲ್ಯಾನ್ ಮಾಡುತ್ತೇವೆ ಎಂದು ಹೇಳಿದರು.

ಜಾಲಿ ಡೇಸ್ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಪ್ರವೀಣ್ ತೇಜ್ ಇದೀಗ ಮತ್ತೊಮ್ಮೆ ಶ್ರೀಧರ್ ಅವರೊಂದಿಗೆ ಕೆಲಸ ಮಾಡಿದ್ದಾರೆ.

ನನಗೆ ಇಂದು ಜಾಲಿ ಡೇಸ್ ಸಿನಿಮಾ ದಿನಗಳು ನೆನಪಿಗೆ ಬರ್ತಾ ಇದೆ. ನಾನು ಚಿತ್ರರಂಗಕ್ಕೆ ಬಂದು 15 ವರ್ಷ ಆಯ್ತು. ಈಗಲೂ ಭಯ ಇದೆ. ನನ್ನ ಮೊದಲ ಸಿನಿಮಾ ನಿರ್ದೇಶಕರ ಜೊತೆ ಮತ್ತೆ ಸಿನಿಮಾ ಮಾಡಿದ್ದು ಸ್ಪೆಷಲ್ ಎನ್ನಬಹುದು. ಙಗಿದು ಒಳ್ಳೆಯ ಅವಕಾಶ. ಎರಡು ಫ್ಯಾಮಿಲಿ ನಡುವಿನ ಸ್ಟೋರಿ ಈ ಚಿತ್ರದಲ್ಲಿದೆ, ನಾವಿಬ್ಬರು ಕಿತ್ತಾಡಿಕೊಂಡು ಇದ್ದವರು ಲವ್ ಆದ್ರೆ ಏನಾಗುತ್ತದೆ ಎನ್ನುವುದೇ ಚಿತ್ರದ ಕಥೆ ಪ್ರವೀಣ್ ಹೇಳಿದರು.

ನಾಯಕಿ ಅಂಜಲಿ ಮಾತನಾಡಿ ‘ಇದು ನನ್ನ ಎರಡನೇ ಸಿನಿಮಾ. ಪದವಿ ಪೂರ್ವ’ ಚಿತ್ರವಾದ ಮೇಲೆ ದೊಡ್ಡ ತಂತ್ರಜ್ಞರೊಂದಿಗೆ ಕೆಲಸ ಮಾಡಿದ ಅನುಭವ ಚೆನ್ನಾಗಿತ್ತು ಎಂದರು.

ಜಂಬೂ ಸರ್ಕಸ್ ಚಿತ್ರಕ್ಕೆ ಚಿತ್ರಕ್ಕೆ ವಾಸುಕಿ ವೈಭವ್ ಅವರ ಸಂಗೀತ ಸಂಯೋಜನೆ, ರವಿವರ್ಮ ಅವರ ಸಾಹಸ ಮತ್ತು ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ.

ಈ ಚಿತ್ರವನ್ನು ಶ್ರೀ ಮಹತಿ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ ಹೆಚ್ ಸಿ ಸುರೇಶ್ ನಿರ್ಮಿಸಿದ್ದು, ಸುಪ್ರಿತ್ ಶೆಟ್ಟಿ ಸಹ ನಿರ್ಮಾಪಕರಾಗಿದ್ದಾರೆ. ಜಂಬೋ ಸರ್ಕಸ್‌ನ ಪಾತ್ರವರ್ಗದಲ್ಲಿ ಅವಿನಾಶ್, ಅಚ್ಯುತ್ ಕುಮಾರ್, ರವಿಶಂಕರ್ ಗೌಡ, ಸ್ವಾತಿ, ಆಶಾಲತಾ, ಲಕ್ಷ್ಮಿ ಸಿದ್ದಯ್ಯ, ನಯನಾ ಶರತ್, ಜಗ್ಗಪ್ಪ ಮತ್ತು ದಿವಂಗತ ಮೋಹನ್ ಜುನೇಜಾ ಮುಂತಾದ ಅನುಭವಿ ನಟರು ನಟಿಸಿದ್ದಾರೆ. ಚಿತ್ರವು ಪ್ರಸ್ತುತ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ಸೆಪ್ಟೆಂಬರ್‌ ತಿಂಗಳಿನಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಏತನ್ಮಧ್ಯೆ, ನಿರ್ದೇಶಕ ಶ್ರೀಧರ್ ಅವರು ಮತ್ತೊಂದು ಚಿತ್ರದ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ನಟ ದರ್ಶನ್ ಅವರೊಂದಿಗೆ ಮುಂದಿನ ಚಿತ್ರ ಮಾಡಲು ಯೋಜನೆ ರೂಪಿಸಿದ್ದು, ಮಂಗಳೂರಿನ ನಿರ್ಮಾಪಕರು ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆಂದು ಹೇಳಿದ್ದಾರೆ.

ಚಿತ್ರ ಕಥೆ ಕುರಿತು ಕೆಲಸ ಆರಂಭವಾಗಿದೆ. ಒಂದೆರಡು ಚಿತ್ರಕಥೆ ಬಳಿಕ ಸೂಕ್ತ ಸಮಯದಲ್ಲಿ ದರ್ಶನ್ ಅವರೊಂದಿಗೆ ಹಂಚಿಕೊಳ್ಳುತ್ತೇನೆ. ಕಥಾಹಂದರವನ್ನು ಅಂತಿಮಗೊಳಿಸಿದ ಬಳಿಕ ಮುಂದಿನದ್ದನ್ನು ಬಹಿರಂಗಪಡಿಲುತ್ತೇವೆಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com