
ಚಂದನವನ ಮಾತ್ರವಲ್ಲದೇ ದಕ್ಷಿಣ ಚಿತ್ರರಂಗದಲ್ಲಿ ಸಖತ್ ಸ್ಟಾರ್ಡಮ್ ಹೊಂದಿರುವ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅಭಿನಯದ 'ಭೈರತಿ ರಣಗಲ್' ಚಿತ್ರ ಯಶಸ್ವಿ 2 ವಾರಗಳನ್ನು ಪೂರೈಸಿದೆ.
ಚಿತ್ರವು 17ನೇ ದಿನದ ಪ್ರದರ್ಶನ ಮುಂದುವರಿಸಿದ್ದು, ನಿರೀಕ್ಷೆಯಂತೆ ಬಾಕ್ಸ್ ಆಫೀಸ್ ಕಲೆಕ್ಷನ್ ಅಂಕಿಅಂಶಗಳು ಉತ್ತಮವಾಗಿದೆ. ಸಿನಿಮಾ ಇಂಡಸ್ಟ್ರಿಯಲ್ಲಿ ಸಖತ್ ಟಾಕ್ ಆಗಿದ್ದ ಭೈರತಿ ರಣಗಲ್ ಅವತಾರವನ್ನು ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಕಣ್ತುಂಬಿಕೊಂಡಿದ್ದಾರೆ. ಸಿನಿಮಾ ಯಶಸ್ವಿ ಪ್ರದರ್ಶನಗೊಳ್ಳುತ್ತಿದ್ದು, ಅಭಿಮಾನಿಗಳು ಸಂತಸಗೊಂಡಿದ್ದಾರೆ. ಚಿತ್ರವು ವರ್ಷದ ಅತಿದೊಡ್ಡ ಕನ್ನಡ ಚಿತ್ರಗಳಲ್ಲಿ ಒಂದಾಗಿ ಸ್ಥಾನವನ್ನು ಪಡೆದುಕೊಂಡಿದೆ.
ಚಿತ್ರವು ಕನ್ನಡದಲ್ಲಿ ನವೆಂಬರ್ 15ರಂದು ಬಿಡುಗಡೆಯಾಗಿದ್ದರೆ, ತಮಿಳು ಹಾಗೂ ತೆಲುಗಿನಲ್ಲಿ ನವೆಂಬರ್ 29ರಂದು ಬಿಡುಗಡೆಯಾಗಿತ್ತು.
ಚಿತ್ರದಲ್ಲಿ ಶಿವರಾಜ್ಕುಮಾರ್ ಅವರಿಗೆ ಜೋಡಿಯಾಗಿ ರುಕ್ಮಿಣಿ ವಸಂತ್ ಅಬಿನಯಿಸಿದ್ದರೆ, ಶಿವಣ್ಣನ ತಂಗಿಯಾಗಿ ಛಾಯಾಸಿಂಗ್ ಕಾಣಿಸಿಕೊಂಡಿದ್ದಾರೆ. ಉಳಿದಂತೆ, ಅವಿನಾಶ್, ಬಾಬು ಹಿರಣ್ಣಯ್ಯ, ಗೋಪಾಲಕೃಷ್ಣ ದೇಶಪಾಂಡೆ, ಮಧು ಗುರುಸ್ವಾಮಿ, ಡ್ಯಾನ್ಸಿಂಗ್ ರೋಸ್ ಶಬೀರ್, ಪ್ರತಾಪ್ ನಟಿಸಿದ್ದಾರೆ.
ಗೀತಾ ಪಿಕ್ಚರ್ಸ್ ಲಾಂಛನದಲ್ಲಿ ಗೀತಾ ಶಿವರಾಜಕುಮಾರ್ ನಿರ್ಮಾಣ ಮಾಡಿರುವ ಸಿನಿಮಾದಲ್ಲಿ ನವೀನ್ ಕುಮಾರ್ ಕ್ಯಾಮರಾ ಹಿಡಿದಿದ್ದಾರೆ. ಕಲಾ ನಿರ್ದೇಶಕ ಗುಣ ಅವರ ಕಲಾ ನಿರ್ದೇಶನ ಮತ್ತು ದಿಲೀಪ್ ಸುಬ್ರಹ್ಮಣ್ಯ ಹಾಗೂ ಚೇತನ್ ಡಿಸೋಜಾ ಅವರ ಆ್ಯಕ್ಷನ್ ಡೈರೆಕ್ಷನ್ಸ್ ಇದೆ.
ಇದು ವೇದಾ ಯಶಸ್ಸಿನ ನಂತರ ಗೀತಾ ಪಿಕ್ಚರ್ಸ್ ಭೈರತಿ ರಣಗಲ್ ಚಿತ್ರವನ್ನು ಹೊರತಂದಿದ್ದು, ಮೂರನೇ ಚಿತ್ರ ಎ ಫಾರ್ ಆನಂದ್ ಚಿತ್ರಕ್ಕೂ ಸಜ್ಜಾಗುತ್ತಿದ್ದು, ಚಿತ್ರವನ್ನು ಘೋಸ್ಟ್ ಖ್ಯಾತಿಯ ಶ್ರೀನಿ ಅವರು ನಿರ್ದೇಶಿಸಲಿದ್ದಾರೆಂದು ತಿಳಿದುಬಂದಿದೆ.
ಈ ನಡುವೆ ಭೈರತಿ ರಣಗಲ್ ಅನ್ನು ಅಭಿಮಾನಿಗಳಿಗೆ ಇನ್ನಷ್ಟು ತಲುಪುವಂತೆ ಮಾಡಲು, ಚಿತ್ರ ತಂಡವು ರಾಜ್ಯದಲ್ಲಿ 99 ರೂಪಾಯಿಗಳ ವಿಶೇಷ ಬೆಲೆಗೆ ಥಿಯೇಟರ್‌ಗಳಲ್ಲಿ ಪ್ರದರ್ಶನಗೊಳ್ಳುವಂತೆ ಮಾಡಿದೆ. 20.94 ಕೋಟಿ ಕಲೆಕ್ಷನ್‌ಗಳೊಂದಿಗೆ, ಭೈರತಿ ರಣಗಲ್ ಈಗ ವರ್ಷದ ಟಾಪ್ ಕನ್ನಡ ಚಿತ್ರಗಳಲ್ಲಿ ಸ್ಥಾನ ಪಡೆದಿದ್ದು, ಇದರ ಜೊತೆಗೆ ದುನಿಯಾ ವಿಜಯ್ ಅಭಿನಯದ ಭೀಮಾ, ಶ್ರೀ ಮುರಳಿ ಅಭಿನಯದ ಬಘೀರಾ ಮತ್ತು ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಕೃಷ್ಣಂ ಪ್ರಣಯ ಸಖಿ ಕೂಡ ಟಾಪ್ ಸ್ಥಾನಗಳಲ್ಲಿವೆ.
Advertisement