
ನಟ ಶಿವರಾಜ್‌ಕುಮಾರ್ ಹಾಗೂ ಅವರ ಕುಟುಂಬಸ್ಥರು ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಅಲ್ಲದೇ ಶಿವಣ್ಣ ಹಾಗೂ ಅವರ ಪತ್ನಿ ಗೀತಾ ಶಿವರಾಜ್ ಕುಮಾರ್ ತಿಮ್ಮಪ್ಪನಿಗೆ ಮುಡಿಕೊಟ್ಟಿದ್ದಾರೆ. ಪತ್ನಿ ಗೀತಾ, ಮಗಳು ನಿವೇದಿತಾ ಮತ್ತು ಆಪ್ತರ ಜೊತೆ ತಿಮ್ಮಪ್ಪನ ದರ್ಶನ ಪಡೆದಿರುವ ಶಿವರಾಜ್ ಕುಮಾರ್ ಮುಡಿ ಕೊಟ್ಟಿದ್ದಾರೆ. ವಿದೇಶಕ್ಕೆ ಹಾರುವ ಮುನ್ನ ದೇವರ ದರ್ಶನ ಪಡೆದಿದ್ದಾರೆ.
ಶಿವಣ್ಣ ಸೇರಿದಂತೆ ಗೀತಾ ಶಿವರಾಜ್ ಕುಮಾರ್ ಹಾಗು ಕುಟುಂಬಸ್ಥರಿಂದ ಮುಡಿ ಸೇವೆ ನಡೆದಿದೆ. ಇದೇ ತಿಂಗಳ 18 ಕ್ಕೆ ಅನಾರೋಗ್ಯದ ಕಾರಣ ಹೆಚ್ಚಿನ ಚಿಕಿತ್ಸೆಗೆ ನಟ ಶಿವಣ್ಣ ಅಮೇರಿಕಾಗೆ ಹೋಗಲಿದ್ದಾರೆ. ಅಮೇರಿಕಾಗೆ ಚಿಕಿತ್ಸೆಗೆ ಹೋಗೊ ಮುನ್ನ ತಿಮ್ಮಪ್ಪನ ಹರಕೆ ತೀರಿಸಿದ ಶಿವಣ್ಣ ದಂಪತಿ ತಿರುಪತಿ ತಿಮ್ಮಪ್ಪನಿಗೆ ಮುಡಿ ನೀಡಿದ್ದಾರೆ. ಅವರ ತಿರುಪತಿ ಭೇಟಿಯ ಫೊಟೋಗಳು ಸದ್ಯ ವೈರಲ್ ಆಗಿವೆ. ಆ ಫೋಟೋಗಳು ಇಲ್ಲಿವೆ ನೋಡಿ.
Advertisement