
ಹೈದರಾಬಾದ್: ನಟ ಅಲ್ಲು ಅರ್ಜುನ್ ಅಭಿನಯದ ಮತ್ತು ಸುಕುಮಾರ್ ನಿರ್ದೇಶನದ ಬ್ಲಾಕ್ ಬಸ್ಚರ್ ಚಿತ್ರ ಪುಷ್ಪ 2 ಬಾಕ್ಸಾಫಿಸ್ ಗಳಿಕೆ ಮತ್ತೊಂದು ದಾಖಲೆ ಬರೆದಿದ್ದು, ಚಿತ್ರದ ಗಳಿಕೆ ಇದೀಗ 1500 ಕೋಟಿ ರೂ ಗೆ ಏರಿಕೆಯಾಗಿದೆ.
ಹೌದು.. ಡಿಸೆಂಬರ್ 5 ರಂದು ತೆರೆ ಕಂಡ ಪುಷ್ಪ 2 ಸಿನಿಮಾ ಇದುವರೆಗೂ ಯಾವ ಭಾರತೀಯ ಸಿನಿಮಾ ಮಾಡದ ದಾಖಲೆಯನ್ನು ಮಾಡಿದ್ದು, ರಿಲೀಸ್ ನಂತರ ಕಡಿಮೆ ಸಮಯದಲ್ಲಿ 500 ಕೋಟಿ, 1000 ಕೋಟಿ ರೂ ಕ್ಲಬ್ ಸೇರಿದ್ದ ಸಿನಿಮಾ ಈಗ 1500 ಕೋಟಿ ರೂ, ಕಲೆಕ್ಷನ್ ಮಾಡಿ ಮತ್ತೊಂದು ದಾಖಲೆ ನಿರ್ಮಿಸಿದೆ.
ಈ ವಿಚಾರವನ್ನು ಮೈತ್ರಿ ಮೂವಿ ಮೇಕರ್ಸ್ ತನ್ನ ಅಧಿಕೃತ ಎಕ್ಸ್ ಅಕೌಂಟ್ ಮೂಲಕ ಹಂಚಿಕೊಂಡಿದ್ದು, ಪುಷ್ಪ 2 ಸಿನಿಮಾ ಕೇವಲ 14 ದಿನಗಳಲ್ಲಿ ವಿಶ್ವಾದ್ಯಂತ 1508 ಕೋಟಿ ರೂ, ಗ್ರಾಸ್ ಕಲೆಕ್ಷನ್ ಮಾಡಿದೆ ಎಂದು ಮೈತ್ರಿ ಮೂವಿ ಮೇಕರ್ಸ್, ಎಕ್ಸ್ ಅಕೌಂಟ್‌ನಲ್ಲಿ ಹಂಚಿಕೊಂಡಿದೆ.
''ಬಾಕ್ಸ್ ಆಫೀಸ್ ನಲ್ಲಿ ಐತಿಹಾಸಿಕ ದಾಖಲೆ ಮುಂದುವರಿದಿದೆ. ಪುಷ್ಪ 2 ದಿ ರೂಲ್ ಈಗ ರೂ.1500 ಕೋಟಿ ಗಳಿಸಿದ ಅತ್ಯಂತ ವೇಗವಾಗಿ ಭಾರತೀಯ ಸಿನಿಮಾವಾಗಿದೆ. 14 ದಿನಗಳಲ್ಲಿ ರೂ.1508 ಕೋಟಿ ಕಲೆಕ್ಷನ್ ಮಾಡಿದೆ'' ಎಂದು ಶೀರ್ಷಿಕೆಯೊಂದಿಗೆ ಟ್ವೀಟ್ ಮಾಡಲಾಗಿದೆ.
ಸಿನಿಮಾ ಮೊದಲ ಮೂರು ದಿನದಲ್ಲಿ 600 ಕೋಟಿ ರೂ, ಐದು ದಿನಗಳಲ್ಲಿ 900 ಕೋಟಿ ಮತ್ತು ಮೊದಲ ವಾರದಲ್ಲಿ 1000 ಕೋಟಿ ರೂ ಗಳಿಸಿತ್ತು. ಮೊದಲ ವಾರಾಂತ್ಯದ ವೇಳೆಗೆ ಮುಂಗಡ ಬುಕ್ಕಿಂಗ್‌ನಲ್ಲಿ 100 ಕೋಟಿ ರೂ.ಗಳ ಗಡಿ ದಾಟಿದೆ. ಈ ಸಿನಿಮಾ ತೆಲುಗು ಭಾಷೆಗಿಂತ ಹಿಂದಿಯಲ್ಲಿ ಹೆಚ್ಚು ಗಳಿಕೆ ಮಾಡುತ್ತಿದೆ. ಅಲ್ಲಿ ಈಗಾಗಲೇ 600 ಕೋಟಿ ರೂ ಗಿಂತ ಹೆಚ್ಚು ನಿವ್ವಳ ಕಲೆಕ್ಷನ್ ಮಾಡಿದೆ.
ಇದರ ಪ್ರಕಾರ ಅತಿ ಹೆಚ್ಚು ಗಳಿಕೆ ಮಾಡಿದ ಹಿಂದಿ ಸಿನಿಮಾ ಎಂಬ ಇತಿಹಾಸ ಸೃಷ್ಟಿಸಿದೆ. ಅಷ್ಟೇ ಅಲ್ಲ ಸ್ಟ್ರೀ 2 ದಾಖಲೆಯನ್ನೂ ಮುರಿದಿದೆ. ತೆಲುಗು ವರ್ಷನ್ 300 ಕೋಟಿ ರೂ. ಗೂ ಅಧಿಕ ಕಲೆಕ್ಷನ್ ಮಾಡಿದೆ ಎಂದು ಹೇಳಲಾಗಿದೆ.
Advertisement