
6-5=2 ಮತ್ತು ದಿಯಾ ಮುಂತಾದ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಚಿತ್ರಗಳನ್ನು ನಿರ್ದೇಶಿಸಿದ್ದ ಕೆಎಸ್ ಅಶೋಕ ಇದೀಗ ಮತ್ತೊಂದು ಚಿತ್ರ ನಿರ್ದೇಶನಕ್ಕೆ ಸಜ್ಜಾಗಿದ್ದಾರೆ. ಹಳ್ಳಿಯೊಂದರಲ್ಲಿ ನಡೆಯುವ ಕಥೆ ಇದಾಗಿದ್ದು, ಸ್ನೇಹ, ಪ್ರೀತಿ ಮತ್ತು ಜೀವನದ ಸಂಕೀರ್ಣತೆಗಳನ್ನು ಚಿತ್ರದಲ್ಲಿ ಹೇಳಲು ಮುಂದಾಗಿದ್ದಾರೆ. ಕಥೆ ಹೇಳುವಿಕೆ ಮತ್ತು ಮಾನವನ ಭಾವನೆಗಳನ್ನು ಸೂಕ್ಷ್ಮವಾಗಿ ಸೆರೆಹಿಡಿಯುವ ಸಾಮರ್ಥ್ಯಕ್ಕೆ ಹೆಸರಾಗಿರುವ ಅಶೋಕ ಅವರು, ಜೀವನದ ವಿವಿಧ ಹಂತಗಳಲ್ಲಿ ಮೂವರು ಯುವಕರ ಸುತ್ತ ಸುತ್ತುವ ಕಥೆಯನ್ನು ಹೆಣೆದಿದ್ದಾರೆ.
200ಕ್ಕೂ ಹೆಚ್ಚು ಮಂದಿಯ ಆಡಿಷನ್ ಮಾಡಿದ ನಂತರ ಅಶೋಕ ಅವರು ದಿಯಾ ಖ್ಯಾತಿಯ ದೀಕ್ಷಿತ್ ಶೆಟ್ಟಿ ಅವರನ್ನು ಪ್ರಮುಖ ಪಾತ್ರಕ್ಕಾಗಿ ಆಯ್ಕೆ ಮಾಡಿದ್ದು, ಇದೀಗ ಮತ್ತೆ ನಿರ್ದೇಶಕ ಮತ್ತು ನಟ ಒಟ್ಟಿಗೆ ಕೆಲಸ ಮಾಡಲು ಸಿದ್ಧವಾಗಿದ್ದಾರೆ. ನಾಗಿನಿ ಧಾರಾವಾಹಿ ಮೂಲಕ ಜನಮನ ಗೆದ್ದಿದ್ದ ದೀಕ್ಷಿತ್, ಪೃಥ್ವಿ ಅಂಬಾರ್ ಅವರೊಂದಿಗೆ ದಿಯಾ ಸಿನಿಮಾದಲ್ಲಿ ನಟಿಸಿದ್ದರು. ಕೆಟಿಎಂ ಮತ್ತು ಬ್ಲಿಂಕ್‌ನಂತಹ ಸಿನಿಮಾದಲ್ಲಿ ನಟಿಸಿದ್ದರು. ಅಲ್ಲದೆ, ನಟ ನಾನಿ ಜೊತೆಗೆ ದಸರಾ ಮೂಲಕ ತೆಲುಗು ಚಿತ್ರರಂಗದಲ್ಲಿ ಛಾಪು ಮೂಡಿಸಿದ್ದಾರೆ.
ಅಶೋಕ ಅವರು ಚಿತ್ರದ ಸಂಪೂರ್ಣ ತಾರಾಗಣ ಸೇರಿದಂತೆ ಹಲವು ವಿವರಗಳನ್ನು ಮುಚ್ಚಿಟ್ಟಿದ್ದು, ಸಂಕ್ರಾಂತಿ ನಂತರ ಚಿತ್ರದ ಶೀರ್ಷಿಕೆ, ಪೋಸ್ಟರ್ ಮತ್ತು ಹೆಚ್ಚಿನ ವಿವರಗಳನ್ನು ಅನಾವರಣಗೊಳಿಸಲು ಯೋಜಿಸಿದ್ದಾರೆ.
Advertisement