ಹಿನ್ನೋಟ 2024: ಸ್ಯಾಂಡಲ್ ವುಡ್ ಪಾಲಿಗೆ ಸಿಹಿಯೋ.. ಕಹಿಯೋ?

ಮ್ಯೂಸಿಕಲ್ ಹಿಟ್ ಹಾಗೂ ವಿಭಿನ್ನ ಕಥಾ ಹಂದರದ 'ಭೀಮಾ' ಹಾಗೂ 'ಕೃಷ್ಣಂ ಪ್ರಣಯ ಸಖಿ' ಕನ್ನಡ ಚಿತ್ರರಂಗವನ್ನು ಕೈ ಹಿಡಿದವು. ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಕಲೆಕ್ಷನ್ ಮಾಡುವಲ್ಲಿ ಯಶಸ್ವಿಯಾದವು. ಈ ಬೆಳವಣಿಗೆ ಕನ್ನಡ ಚಿತ್ರರಂಗಕ್ಕೆ ಹೊಸ ಹುರುಪು ನೀಡಿತು.
Vijay, Ganesh, Upendra, Shivanna and Sudeepa
ಭೀಮಾದಲ್ಲಿ ವಿಜಯ್, ಗಣೇಶ್, ಉಪೇಂದ್ರ, ಶಿವರಾಜ್ ಕುಮಾರ್, ಸುದೀಪ್
Updated on

2024 ಕನ್ನಡ ಚಿತ್ರರಂಗ ಪಾಲಿಗೆ ಸ್ವಲ್ಪ ಸಿಹಿ, ಸ್ಪಲ್ಪ ಕಹಿಯಂತಿತ್ತು. ವರ್ಷದ ಮೊದಲಾರ್ಧ ಸ್ಟಾರ್ ನಟರ ಸಿನಿಮಾಗಳಿಲ್ಲದೆ ಸೊರಗಿದ ಚಂದನವನ, ಆಗಸ್ಟ್ ನಂತರ ಪರಾಭಾಷಾ ಚಿತ್ರಗಳ ಪೈಪೋಟಿ ನಡುವೆ ಸ್ಟಾರ್ ನಟರ ಚಿತ್ರಗಳೇ ಹೆಚ್ಚಾಗಿದ್ದವು. ಗಜಗಾತ್ರದಲ್ಲಿ ಸಿನಿಮಾಗಳು ಬಿಡುಗಡೆಯಾದರೂ, ಕೆಲವೇ ಕೆಲವು ಸಿನಿಮಾಗಳು ಮಾತ್ರ ಬ್ಲಕ್ ಬಸ್ಟರ್ ಆಗಿದ್ದು, ಬಾಕ್ಸ್ ಆಫೀಸ್ ನಲ್ಲಿ ಕಲೆಕ್ಷನ್ ಮಾಡುವಲ್ಲಿ ಸಫಲವಾಗಿವೆ.

2023ರ ಡಿಸೆಂಬರ್ ನಲ್ಲಿ ತೆರೆಕಂಡ ದರ್ಶನ್ ನಟನೆಯ 'ಕಾಟೇರ' ಸಿನಿಮಾನದ ಯಶಸ್ಸಿನೊಂದಿಗೆ 2024ಕ್ಕೆ ಕನ್ನಡ ಚಿತ್ರರಂಗ ಹೆಜ್ಜೆ ಇಟ್ಟಿತು. ವರ್ಷದ ಆರಂಭದಲ್ಲಿ ರಾಜೇಂದ್ರ ಕೊಣದೆಲ ನಿರ್ದೇಶನದ ಆದರ್ಶ ರೈತ, ಯತೀಶ್ ಪನ್ನಸಮುದ್ರ ನಿರ್ದೇಶಿಸಿ ನಟಿಸಿದ ಒಂಟಿ ಬಂಟಿ ಲವ್ ಸ್ಟೋರಿ, ಮಜಾಭಾರತ ಖ್ಯಾತಿಯ ಜಗ್ಗಪ್ಪ, ಸುಷ್ಮಿತಾ ಅಭಿನಯದ ಆನ್ ಲೈನ್ ಮದುವೆ, ಆಫ್ ಲೈನ್ ಶೋಭನ, ರವಿ ಬಸ್ರೂರ್ ನಿರ್ದೇಶನದ ಕಡಲ್, ಉಮೇಶ್, ಸಂಜನಾ ಗಲ್ರಾನಿ ಅಭಿಯನದ ಮತ್ತೆ ಮತ್ತೆ, ರಂಗಾಯಣ ರಘು ಅಭಿನಯದ ರಂಗಸಮುದ್ರ, ಕೋಳಿ ಎಸ್ರು, ವಿಜಯ್ ರಾಘವೇಂದ್ರ ಅಭಿನಯದ ಕೇಸ್ ಆಫ್ ಕೊಂಡಾಣ, ಚಿಕ್ಕಣ್ಣ ಅಭಿನಯದ ಉಪಾಧ್ಯಕ್ಷ, ಬ್ಯಾಚುಲರ್ ಪಾರ್ಟಿ ಚಿತ್ರಗಳು ಸೇರಿದಂತೆ ಒಟ್ಟು 26 ಸಿನಿಮಾಗಳು ತೆರೆಕಂಡರೂ 'ಉಪಾಧ್ಯಕ್ಷ' ಚಿತ್ರ ಮಾತ್ರ ಕೆಲ ವಾರ ಚಿತ್ರಮಂದಿರಗಳಲ್ಲಿ ಉಳಿದು ಸ್ವಲ್ಪ ದುಡ್ಡು ಮಾಡಿತು.

ಇನ್ನು ಫೆಬ್ರವರಿ ತಿಂಗಳಲ್ಲಿ ಯಥಾಭವ, ಕ್ಲಿಕ್, ಸಪ್ಲೈಯರ್ ಶಂಕರ,ಕ್ರಶ್, ಹರಿಕೃಷ್ಣ ನಿರ್ದೇಶನದ ಕೋಣ,ವಿನಯ್ ರಾಜ್ ಕುಮಾರ್ ಅಭಿನಯದ ಒಂದು ಸರಳ ಪ್ರೇಮ ಕಥೆ, ನಗುವಿನ ಹೂಗಳ ಮೇಲೆ, ಜಸ್ಟ್ ಪಾಸ್, ಅಲೆಮಾರಿ ಬದುಕು,ರಾಗಿಣಿ ದ್ವಿವೇದಿ ಅಭಿನಯದ ಇಮೇಲ್, ಧೀರ ಸಾಮ್ರಾಟ್,ಲೇಡಿಸ್ ಬಾರ್. ರವಿಕೆ ಪ್ರಸಂಗ, ಮಂಡ್ಯ ಹೈದ, ಶಾಖಾಹಾರಿ,ಕೆಟಿಎಂ,ಸಾರಾಂಶ, ಎಸ್ ನಾರಾಯಣ್ ನಿರ್ದೇಶನದ ಆದಿತ್ಯ ಅಭಿನಯದ 5 ಡಿ, ಅಬ್ಬಬ್ಬ, ಧೈರ್ಯಂ ಸರ್ವತ್ರ ಸಾಧನಂ, ಮಿ ನಟ್ವರ್ ಲಾಲ್, ಪೃಥ್ವಿ ಅಂಬರ್ ಅಭಿನಯದ ಮತ್ಸ್ಯಗಂಧ, ಪ್ರೇತ, ಫಾರ್ ರಿಜಿಸ್ಟ್ರೇಷನ್ ಚಿತ್ರಗಳು ಬಿಡುಗಡೆಯಾದವು. ಈ ಪೈಕಿ 'ಒಂದು ಸರಳ ಪ್ರೇಮ ಕಥೆ' ಪ್ರೇಕ್ಷಕರಿಂದ ಪ್ರಶಂಸಿಸಲ್ಪಟ್ಟು ಚಿತ್ರಮಂದಿರಗಳಲ್ಲಿ 25 ದಿನ ಪೂರೈಸಿತು.

ಮಾರ್ಚ್ ತಿಂಗಳಲ್ಲಿ ಗಿರಿನಾಡ್ ಪ್ರೇಮಿ, ಜುಗಲ್ ಬಂದಿ, ಪುರುಷೋತ್ತಮನ ಪ್ರಸಂಗ, ಕ್ರೀಂ,ವಿಜಯ್ ರಾಘವೇಂದ್ರ ಅಭಿನಯದ ಜೋಗ್ 101, ಕೈಲಾಸ ಕಾಸಿದ್ರೆ, ಬ್ಲಿಂಕ್ ಹಾಗೂ ಗುರು ಪ್ರಸಾದ್ ನಿರ್ದೇಶಿಸಿ ಜಗ್ಗೇಶ್ ಅಭಿನಯಿಸಿದ ರಂಗನಾಯಕ, ಯೋಗರಾಜ್ ಭಟ್ ನಿರ್ದೇಶನದ ಕರಟಕ ದಮನಕ,ಚೌಚ್ ಬಾತ್, ಸೋಮು ಸೌಂಡ್ ಇಂಜಿನಿಯರ್,ಕೆರೆ ಭೇಟೆ,ಅನೂಪ್ ರೇವಣ್ಣ, ಧನ್ಯಾ ರಾಮ್ , ಕುಮಾರ್ ಅಭಿನಯದ ಹೈಡ್ ಅಂಡ್ ಸೀಕ್, ಪೋಟೋ,ಮೆಹಬೂಬಾ, ಸತೀಶ್ ನೀನಾಸಂ ಅಭಿನಯದ ಪರಿಮಳ ಲಾಡ್ಜ್,ಲೈನ್ ಮ್ಯಾನ್,ರಾಕ್ಷಸ ತಂತ್ರ, ದಿಲ್ ಖುಷ್,ತೂತ್ ಕಾಸ್, ತಾರಿಣಿ, ಸಂತೋಷ್ ಆನಂದ್ ರಾಮ್ ನಿರ್ದೇಶನದ ಯುವ ಚಿತ್ರಗಳು ಬಿಡುಗಡೆಯಾದವು. ರಂಗನಾಯಕ, ಯೋಗರಾಜ್ ಭಟ್ ನಿರ್ದೇಶನದ ಪ್ರಭುದೇವ ಹಾಗೂ ಶಿವರಾಜ್ ಕುಮಾರ್ ಅವರ ನಟನೆಯ ಕರಟಕ ದಮನಕ,ಯುವ ಚಿತ್ರಗಳು ಭಾರೀ ನಿರೀಕ್ಷೆ ಹುಟ್ಟಿಸಿದರೂ ಪ್ರೇಕ್ಷಕರ ಮನ ಸೆಳೆಯುವಲ್ಲಿ ವಿಫಲವಾದವು.

ಏಪ್ರಿಲ್ ನಲ್ಲಿ ಶರಣ್, ಆಶಿಕಾ ರಂಗನಾಥ್ ನಾಯಕ ನಟಿಯಾಗಿ ನಟಿಸಿರುವ ಅವತಾರ್ ಪುರುಷ 2, ಭರ್ಜರಿ ಗಂಡು, ಮಾರಿಗೋಲ್ಡ್, ಮ್ಯಾಟ್ನಿ, ನೆನಪಿರಲ್ಲಿ ಪ್ರೇಮ್ ಕುಮಾರ್ , ಮಾನ್ವಿತಾ ಕಾಮತ್ ಅಭಿನಯದ ಅಪ್ಪಾ ಐ ಲವ್ ಯೂ,ಸ್ಕ್ಯಾಮ್ 1770, ನೈಟ್ ಕರ್ಫ್ಯೂ, ಓ2, ಪಾರ್ಟ್ನರ್, ರತ್ನ, ಚಿರತೆ ಬಂತು ಚಿರತೆ, ರಾಮ ಅಂಡ್ ರಾಮು, ಆತ್ಮ ಚಿತ್ರಗಳು ಬಿಡುಗಡೆಯಾದವು. ಆದರೆ, ಥಿಯೇಟರ್ ನಲ್ಲಿ ಯಾವುದೇ ಚಿತ್ರಗಳು ಸದ್ದು ಮಾಡಲಿಲ್ಲ. ಜನವರಿ-ಏಪ್ರಿಲ್ ಅವಧಿಯಲ್ಲಿ ಕೆಲ ಪ್ರಯೋಗಾತ್ಮಕ, ಸದಭಿರುಚಿಯ ಚಿತ್ರಗಳು ಬಿಡುಗಡೆಯಾದರೂ ಅವುಗಳು ಚಿತ್ರಮಂದಿರಗಳಲ್ಲಿ ಹೆಚ್ಚು ಕಾಲ ಉಳಿಯಲಿಲ್ಲ.

ಇನ್ನೂ ಮೇ ತಿಂಗಳಲ್ಲಿ ಆದಿತ್ಯ ಅಭಿನಯದ ಕಾಂಗರೊ, ಉಸಿರೇ ಉಸಿರೇ, ಅಲೈಕ್ಯಾ, ವಿಜಯ್ ರಾಘವೇಂದ್ರ ಅಭಿನಯದ ಗ್ರೇ ಗೇಮ್ಸ್,4 ಎನ್ 6,ರಾಮನ ಅವತಾರ, ದ ಸೂಟ್, ಕಿರಾತಕ 2, ಸ್ವಿಚ್ ಕೇಸ್ N, ಎವಿಡೆನ್ಸ್, ಮೂರನೇ ಕೃಷ್ಣಪ್ಪ, 3ದೇವಿ, ರವಿಚಂದ್ರನ್ ಅಭಿನಯದ ಜಡ್ಜ್ ಮೆಂಟ್, ಬ್ಯಾಡ್,ನಿರ್ಮುಕ್ತ ಚಿತ್ರಗಳು ತೆರೆ ಕಂಡವು. ಈ ಪೈಕಿ ವಿಭಿನ್ನ ಕಥಾ ಹಂದರದ ಜಡ್ಜ್ ಮೆಂಟ್ ಚಿತ್ರ ಪ್ರೇಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಕಲೆಕ್ಷನ್ ವಿಚಾರದಲ್ಲೂ ಸ್ವಲ್ಪ ಸೌಂಡ್ ಮಾಡಿತ್ತು.

ಜೂನ್ ತಿಂಗಳಲ್ಲಿ ಸಹರಾ, ಅನರ್ಥ, ಧನಂಜಯ ಅಭಿನಯದ ಕೋಟಿ, ಶಿವಮ್ಮ ಯರೆಹಂಚಿನಾಳ, ಅನಿರುದ್ಧ್ ಜಟ್ಕರ್, ನಿಧಿ ಸುಬ್ಬಯ್ಯ ಅಭಿನಯದ ಚೆಫ್ ಚಿದಂಬರ, ಯಾವೋ ಇವೆಲ್ಲಾ, ವಸಿಷ್ಠ ಸಿಂಹ ಅಭಿನಯದ Loveಲಿ, ಚಿ. ತು. ಯುವಕರ ಸಂಘಟ, ಚಿಲ್ಲಿ ಚಿಕನ್, ಸಂಭವಾಮಿ ಯುಗೇ ಯುಗೇ,ದೇಸಾಯಿ, ಶತಭಿಷ ಚಿತ್ರಗಳು ಬಿಡುಗಡೆಯಾದವು. ಈ ಪೈಕಿ ಧನಂಜಯ ಅಭಿಯನದ ಕೋಟಿ ಬಿಟ್ಟರೆ ಉಳಿದ ಯಾವುದೇ ಚಿತ್ರಗಳು ಥಿಯೇಟರ್ ನಲ್ಲಿ ಹೆಚ್ಚು ದಿನ ನಿಲ್ಲಲಿಲ್ಲ.

ಜುಲೈ ತಿಂಗಳಲ್ಲಿ ಕಾಗದ, ಬಿಸಿಬಿಸಿ ಐಸ್ ಕ್ರೀಂ, ಕಾದಾಡಿ, ಜಿಗರ್,ಹೆಜ್ಜಾರು, ನಾಟ್ ಔಟ್, ವಿದ್ಯಾರ್ಥಿ ವಿದ್ಯಾರ್ಥಿನಿಯರೇ, ಬ್ಯಾಕ್ ಬೆಂಚರ್ಸ್, ಹಿರಣ್ಯ,ಫ್ಯಾಮಿಲಿ ಡ್ರಾಮಾ, ರಾಜ್ ಬಿ ಶೆಟ್ಟಿ ಅಭಿನಯದ ರೂಪಾಂತರ, ರಕ್ತಾಕ್ಷ ಚಿತ್ರಗಳು ಬಿಡುಗಡೆಯಾದವು, ಆದರೆ ಯಾವುದೇ ಚಿತ್ರಗಳು ಯಶಸ್ವಿಯಾಗಲಿಲ್ಲ.

ಆಗಸ್ಟ್ ತಿಂಗಳಲ್ಲಿ ಅಡವಿಕಟ್ಟೆ, ಇಷ್ಕ್, ಜೀನಿಯಸ್ ಮುತ್ತ, ಧುನಿಯಾ ವಿಜಯ್ ಅಭಿನಯದ ಭೀಮಾ, ಸಮರ್ಜಿತ್ ಲಂಕೇಶ್ ಅಭಿನಯದ ಗೌರಿ, ಗೋಲ್ಡನ್ ಸ್ಟಾರ್ ಗಣೇಶ್ ಅಭಿಯನದ ಕೃಷ್ಣಂ ಪ್ರಣಯ ಸಖಿ, ದಿಗಂತ್ ನಟನೆಯ ಪೌಡರ್, ತಾಜ್, ಟೀಕ್ವಾಂಡೋ ಗರ್ಲ್, ಪ್ರಮೋದ್ ಶೆಟ್ಟಿ ಅಭಿನಯದ ಲಾಫಿಂಗ್ ಬುದ್ಧ, ವಿನಯ್ ರಾಜ್ ಕುಮಾರ್ ನಟನೆಯ ಪೆಪೆ, ದಿ ರೂಲರ್ಸ್ ಚಿತ್ರಗಳು ಬಿಡುಗಡೆಯಾದವು.

ಮ್ಯೂಸಿಕಲ್ ಹಿಟ್ ಹಾಗೂ ವಿಭಿನ್ನ ಕಥಾ ಹಂದರದ 'ಭೀಮಾ' ಹಾಗೂ 'ಕೃಷ್ಣಂ ಪ್ರಣಯ ಸಖಿ' ಕನ್ನಡ ಚಿತ್ರರಂಗವನ್ನು ಕೈ ಹಿಡಿದವು. ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಕಲೆಕ್ಷನ್ ಮಾಡುವಲ್ಲಿ ಯಶಸ್ವಿಯಾದವು. ಈ ಬೆಳವಣಿಗೆ ಕನ್ನಡ ಚಿತ್ರರಂಗಕ್ಕೆ ಹೊಸ ಹುರುಪು ನೀಡಿತು. ಉಳಿದಂತೆ ಪೆಪೆ, ಲಾಫಿಂಗ್ ಬುದ್ಧ, ದಿ ರೂಲರ್ಸ್ ಚಿತ್ರಕ್ಕೆ ಉತ್ತಮ ವಿಮರ್ಶೆ ವ್ಯಕ್ತವಾಗಿತ್ತು. ಆದರೆ, ಗಳಿಕೆಯಲ್ಲಿ ಹಿಂದೆ ಬಿದ್ದವು.

ಸೆಪ್ಟೆಂಬರ್ ನಲ್ಲಿ ವಿಹಾನ್ ಗೌಡ, ಅಂಕಿತಾ ಅಮರ್ ಅಭಿನಯದ ಇಬ್ಬನಿ ತಬ್ಬಿದ ಇಳೆಯಲಿ, ಡಾಲರ್ಸ್ ಪೇಟೆ, ರಾನಿ, ಶಾಲಿವಾಹನ ಶಕೆ, ಕಲ್ಜಿಗ,ವಿಕಾಸ ಪರ್ವ, ಲೈಫ್ ಆಫ್ ಮೃದುಲ,ದಾಸಪ್ಪ, ಕಾಲಾಪತ್ಥರ್, ಹಗ್ಗ,ಲಂಗೋಟಿ ಮ್ಯಾನ್, ರಮ್ಮಿ ಆಟ,ಕರ್ಕಿ, ಧ್ರುವತಾರೆ, ಸಂಜು, ಕೇದರ್ ನಾಥ್ ಕುರಿ ಫಾರಂ, ನೈಟ್ ರೋಡ್ ಸಿನಿಮಾಗಳು ಬಿಡುಗಡೆಯಾದವು.,ಆದರೆ,ಯಾವುದೇ ಸಿನಿಮಾಗಳು ಹೆಚ್ಚು ಸೌಂಡ್ ಮಾಡಲಿಲ್ಲ.

ಅಕ್ಟೋಬರ್ ನಲ್ಲಿ ರಾಧಿಕಾ ಕುಮಾರಸ್ವಾಮಿ ಅವರ ಭೈರಾದೇವಿ, ಗೋಪಿಲೋಲ, ಧ್ರುವ ಸರ್ಜಾ ಅಭಿನಯದ ಮಾರ್ಟಿನ್, ಶರಣರ ಶಕ್ತಿ,ಮರ್ಫಿ, ಎಲ್ಲಿಗೆ ಪಯಣ ಯಾವುದೋ ದಾರಿ, ನಸಾಬ್, ಪ್ರಾಪ್ತಿ, ಮೂಕ ಜೀವ, ಕೋಮಲ್ ಕುಮಾರ್ ಅಭಿನಯದ ಯಲಾ ಕುನ್ನಿ, ಶ್ರೀಮುರುಳಿಯ ಬಘೀರ ಚಿತ್ರಗಳು ಬಿಡುಗಡೆಯಾದವು. ಈ ಪೈಕಿ ಮಾರ್ಟಿನ್ ಚಿತ್ರ ವಿಶ್ವಮಟ್ಟದಲ್ಲಿ ಬಿಡುಗಡೆಯಾದರೂ ಬಾಕ್ಸ್ ಆಫೀಸ್ ನಲ್ಲಿ ಮುಗ್ಗರಿಸಿತು. ಬಘೀರ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಕಲೆಕ್ಷನ್ ಮಾಡುವಲ್ಲಿ ಯಶಸ್ವಿಯಾಯಿತು.

ನವೆಂಬರ್ ನಲ್ಲಿ ಪ್ರಿಯಾಂಕಾ ಉಪೇಂದ್ರ ಅಭಿನಯದ ಉಗ್ರವತಾರ, ಅಸುರರು, ಸಂತೋಷ ಸಂಗೀತ, U235, ಬಿಟಿಎಸ್, ಶಿವರಾಜ್ ಕುಮಾರ್ ಅಭಿನಯದ ಬ್ಲಾಕ್ ಬಸ್ಟರ್ ಬೈರತಿ ರಣಗಲ್, ಜೀಬ್ರಾ, ಮಾರ್ಯಾದೇ ಪ್ರಶ್ನೆ, ಪ್ರಭುತ್ವ, ಆರಾಮಾ ಅರವಿಂದ ಸ್ವಾಮಿ, ಟೆನೆಂಟ್, ಲಕ್, ಮೇಘ,ನಾ ನಿನ್ನ ಬಿಡಲಾರೆ, ಜಲಂಧರ ಚಿತ್ರಗಳು ಬಿಡುಗಡೆಯಾದವು. ಈ ಪೈಕಿ ಭರತಿ ರಣಗಲ್ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಕಲೆಕ್ಷನ್ ಮಾಡುವ ಮೂಲಕ ಈ ವರ್ಷದಲ್ಲಿ ಅತಿ ಹೆಚ್ಚು ದಾಖಲೆ ಮಾಡಿದ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.

ಡಿಸೆಂಬರ್ ನಲ್ಲಿ ರಾಜ್ ಬಿ ಶೆಟ್ಟಿ ಅಭಿನಯದ ರುಧಿರಂ, ಉಪೇಂದ್ರ ನಿರ್ದೇಶಿಸಿ, ನಟಿಸಿರುವ ಯುಐ, ಸುದೀಪ್ ಸಂಯುಕ್ತ ಹೊರನಾಡು ನಟನೆಯ ಮ್ಯಾಕ್ಸ್, ಅಚ್ಯುತ್ ಕುಮಾರ್ ಅಭಿನಯದ ಔಟ್ ಆಫ್ ಸಿಲಬಸ್ ಚಿತ್ರಗಳು ಬಿಡುಗಡೆಯಾದವು. ಈ ಪೈಕಿ ಯುಐ ಹಾಗೂ ಮ್ಯಾಕ್ಸ್ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಕಲೆಕ್ಷನ್ ಮೂಲಕ ವರ್ಷಾಂತ್ಯದಲ್ಲಿ ಕನ್ನಡ ಚಿತ್ರರಂಗದಲ್ಲಿ ಗೆಲುವಿನ ಸಿಹಿ ಹಂಚಿದರು.

ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡಿದ ಚಿತ್ರಗಳು: ದುನಿಯಾ ವಿಜಯ್ ನಟಿಸಿ ನಿರ್ದೇಶಿಸಿರುವ ಭೀಮಾ ಗಲ್ಲಾಪೆಟ್ಟಿಗೆಯಲ್ಲಿ ರೂ.23 ಕೋಟಿ ಕಲೆಕ್ಷನ್ ಮಾಡಿದರೆ, ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ' ಕೃಷ್ಣ ಪ್ರಣಯ ಸಖಿ' ರೂ. 25 ಕೋಟಿ, ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಅಭಿನಯದ ಭೈರತಿ ರಣಗಲ್ ರೂ. 80ಕೋಟಿಗೂ ಅಧಿಕ ಕಲೆಕ್ಷನ್ ಮಾಡಿರುವ ವರದಿಯಾಗಿದೆ. ಇನ್ನೂ ರೋರಿಂಗ್ ಸ್ಟಾರ್ ಮುರುಳಿ ಅಭಿನಯದ ಬಘೀರ ರೂ.29 ಕೋಟಿ,ಯುವ 10. 81 ಕೋಟಿ ಕಮಾಲ್ ಮಾಡಿದೆ ಎಂದು ಗಾಂಧಿನಗರದ ಮೂಲಗಳು ತಿಳಿಸಿವೆ.

Vijay, Ganesh, Upendra, Shivanna and Sudeepa
ಹಿನ್ನೋಟ 2024: ಈ ವರ್ಷ ಸದ್ದು ಮಾಡಿದ ಸ್ಯಾಂಡಲ್‌ವುಡ್ ಹೀರೋಗಳು

ಇನ್ನೂ ವರ್ಷಾಂತ್ಯದಲ್ಲಿ ಬಂದ ಉಪೇಂದ್ರ ಅಭಿಯನದ ಯುಐ ಒಟ್ಟು ರೂ. 26. 35 ಕೋಟಿ ಮತ್ತು ಸುಧೀಪ್ ಅಭಿನಯದ ಮ್ಯಾಕ್ಸ್ ಬಿಡುಗಡೆಯಾದ ಎರಡನೇ ದಿನಗಳಲ್ಲಿ ರೂ.10 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ಚಂದನವನದಲ್ಲಿ 2024ರಲ್ಲಿ ಸುಮಾರು 210 ಕನ್ನಡ ಸಿನಿಮಾಗಳು ಬಿಡುಗಡೆಯಾಗಿವೆ. ಆದರೆ, ಈ ಪೈಕಿ ಸ್ಟಾರ್ ಚಿತ್ರ ಹೊರತುಪಡಿಸಿದರೆ ಬೇರೆ ಯಾವುದೇ ಚಿತ್ರಗಳು ಯಶಸ್ವಿಯಾಗದೇ ಇರುವುದು ಖೇದಕರ ಸಂಗತಿಯಾಗಿದೆ.

ನಿಧನ: ಈ ವರ್ಷದಲ್ಲಿ ಹಿರಿಯ ನಟ- ನಿರ್ದೇಶಕ ದ್ವಾರಕೀಶ್, ಕೆ. ಶಿವರಾಂ, ಟಿ. ತಿಮ್ಮಯ್ಯ, ನಿರ್ದೇಶಕ ಚಿ. ದತ್ತರಾಜ್. ನಟಿ-ನಿರೂಪಕಿ ಅಪರ್ಣಾ, ನಟ ನಿರ್ದೇಶಕ ಗುರುಪ್ರಸಾದ್, ನಿರ್ದೇಶಕ ವಿನೋದ್ ದೋಂಡಾಳೆ ಆತ್ಮಹತ್ಯೆ ಕನ್ನಡ ಚಿತ್ರರಂಗಕ್ಕೆ ಆಘಾತ ತಂದವು.

ಮುಂದಿನ ವರ್ಷದ ಬಾರಿ ನಿರೀಕ್ಷೆಯ ಚಿತ್ರಗಳು: ಪ್ರೇಮ್ ನಿರ್ದೇಶನದ ಧ್ರುವ ಸರ್ಜಾ ನಿರ್ದೇಶನದ KD, ನಾಗಶೇಖರ್ ನಿರ್ದೇಶನದ ಸಂಜು ವೆಡ್ಸ್ ಗೀತಾ 2, ಯಶ್ ನಟನೆಯ ಟಾಕ್ಸಿಕ್, ರಿಷಬ್ ಶೆಟ್ಟಿ ಅಭಿನಯದ ಕಾಂತಾರ-2, ಉಪೇದ್ರ, ಶಿವರಾಜ್ ಕುಮಾರ್ , ರಾಜ್ ಬಿ ಶೆಟ್ಟಿ ನಟನೆಯ 45, ಯುವ ರಾಜ್ ಕುಮಾರ್ ಅಭಿನಯದ 'ಎಕ್ಕ' ಧನಂಜಯ ಅಭಿನಯದ ಉತ್ತರಾಖಂಡ, ದರ್ಶನ್ ಅಭಿನಯದ ಡೇವಿಲ್, ಸುದೀಪ್ ಅಭಿನಯದ ಕಿಚ್ಚ 47 ಸೇರಿದಂತೆ ಹಲವು ಬಹು ನಿರೀಕ್ಷೆಯ ಚಿತ್ರಗಳಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com