
ಗುರುದತ್ತ ಗಾಣಿಗ ನಿರ್ದೇಶನದ ನಟ ಪ್ರಜ್ವಲ್ ದೇವರಾಜ್ ನಟನೆಯ ಕರಾವಳಿ ಚಿತ್ರ ಈಗಾಗಲೇ ತೀವ್ರ ನಿರೀಕ್ಷೆ ಹುಟ್ಟುಹಾಕಿದೆ. ಇತ್ತೀಚೆಗಷ್ಟೇ ಚಿತ್ರತಂಡ ಚಿತ್ರದ ಟೀಸರ್ ಬಿಡುಗಡೆ ಮಾಡಿದ್ದು, ಕರಾವಳಿ ಭಾಗದ ಪ್ರಾಚೀನ ಕುರ್ಚಿಯ ಸುತ್ತ ಕೇಂದ್ರೀಕರಿಸಿದೆ. 'ಇದು ಕೇವಲ ಖುರ್ಚಿಯಲ್ಲ ಪ್ರತಿಷ್ಠೆಯ ಪಿಚಾಚಿ. ಅದರ ಮೇಲೆ ಕೂರೋದಲ್ಲವಾ, ಅದರ ಮೇಲೆ ಕಣ್ಣಿಡುವವರನ್ನು ಬಿಡುವುದಿಲ್ಲ ಆ ಪಿಶಾಚಿ' ಎನ್ನುವ ಮಾತುಗಳು ಕೇಳಿಬರುತ್ತವೆ. ಇದು ಚಿತ್ರದ ಬಗ್ಗೆ ಭಾರೀ ನಿರೀಕ್ಷೆ ಹುಟ್ಟುಹಾಕಿದೆ.
ಕುರ್ಚಿಯ ಸುತ್ತಲೇ ಸುತ್ತುವ ಟೀಸರ್, ಆ ಕುರ್ಚಿಯನ್ನು ಸುತ್ತುವರೆದಿರುವ ಪ್ರಬಲ ಶಕ್ತಿಗಳ ಬಗ್ಗೆ ಸುಳಿವು ನೀಡುತ್ತದೆ. ಮಿತ್ರ ಅವರ ಥ್ರಿಲ್ಲಿಂಗ್ ನಿರೂಪಣೆ ಮತ್ತು ರಮೇಶ್ ಇಂದಿರಾ ಅವರ ಉಪಸ್ಥಿತಿಯು ಟೀಸರ್‌ನ ರೋಚಕತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಒಂದು ಪ್ರಮುಖ ದೃಶ್ಯದಲ್ಲಿ ಪ್ರಜ್ವಲ್ ದೇವರಾಜ್ ಅವರ ಮನಮೋಹಕ ಲುಕ್‌ನೊಂದಿಗೆ ಟ್ರೇಲರ್ ಕೊನೆಗೊಳ್ಳುತ್ತದೆ.
ಯಕ್ಷಗಾನ ಕಲಾವಿದ, ಕಂಬಳ, ಮಹಿಷಾಸುರ ಹೀಗೆ ವೆರೈಟಿ ಗೆಟಪ್‌ನಲ್ಲಿ ಪ್ರಜ್ವಲ್ ಕಾಣಿಸಿಕೊಂಡಿದ್ದು, ಈ ಸಿನಿಮಾದಲ್ಲಿ ಪ್ರಜ್ವಲ್ ಯಕ್ಷಗಾನ ಕಲಾವಿದನಾ ಅಥವಾ ಕಂಬಳದಲ್ಲಿ ಪಾಲ್ಗೊಳ್ಳುವವರಾ? ಎನ್ನುವ ಬಗ್ಗೆ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಪ್ರಜ್ವಲ್ ಅವರ ವಿಧ ವಿಧದ ಪೋಸ್ಟರ್‌ಗಳಿಂದ ಅವರು ತ್ರಿ ಪಾತ್ರದಲ್ಲಿ ನಟಿಸುತ್ತಿದ್ದಾರಾ ಎನ್ನುವ ಅನುಮಾನಗಳು ಕೂಡ ಮೂಡುತ್ತಿವೆ. ಸದ್ಯ ಪ್ರಜ್ವಲ್ ಚಿತ್ರದಲ್ಲಿ ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳಬಹುದು ಎನ್ನುವ ಪ್ರಶ್ನೆಗೆ ಉತ್ತರ ನಿಗೂಢವಾಗಿಯೇ ಉಳಿದಿದೆ.
ಶೇ 80ರಷ್ಟು ಚಿತ್ರೀಕರಣ ಈಗಾಗಲೇ ಮುಗಿದಿದ್ದು, ಕರಾವಳಿ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಸಂಘರ್ಷದ ಮೇಲೆ ಕೇಂದ್ರೀಕೃತವಾಗಿರುವ ಚಿತ್ರವು ಗ್ರಾಮೀಣ ಭಾಗದಲ್ಲಿಯೇ ನಡೆಯುವುದು ರೋಮಾಂಚನಕಾರಿಯಾಗಿದೆ. ಗಾಣಿಗ ಫಿಲಂಸ್ ಮತ್ತು ವಿಕೆ ಫಿಲಂಸ್ ಅಸೋಸಿಯೇಷನ್ ನಿರ್ಮಿಸಿರುವ ಕರಾವಳಿ ಚಿತ್ರಕ್ಕೆ ಸಚಿನ್ ಬಸ್ರೂರ್ ಅವರ ಸಂಗೀತ ಮತ್ತು ಅಭಿಮನ್ಯು ಸದಾನಂದನ್ ಅವರ ಛಾಯಾಗ್ರಹಣವಿದೆ.
Advertisement