
ಇತ್ತೀಚೆಗಷ್ಟೇ ತಮ್ಮ ಬಹುಕಾಲದ ಗೆಳೆಯ ಆ್ಯಂಟೋನಿ ಜೊತೆಗೆ ಸಪ್ತಪದಿ ತುಳಿದಿದ್ದ ನಟಿ ಕೀರ್ತಿ ಸುರೇಶ್ ಅವರು ಕಲೀಸ್ ನಿರ್ದೇಶನದ 'ಬೇಬಿ ಜಾನ್' ಚಿತ್ರದಲ್ಲಿ ನಟ ವರುಣ್ ಧವನ್ ಎದುರು ನಾಯಕಿಯಾಗಿ ನಟಿಸಿದ್ದಾರೆ. ಈ ಮೂಲಕ ಕೀರ್ತಿ ಸುರೇಶ್ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ್ದಾರೆ.
ಸಂದರ್ಶನವೊಂದರಲ್ಲಿ, ಬಾಲಿವುಡ್ ಚಿತ್ರದಲ್ಲಿ ತನಗೆ ಅವಕಾಶ ಸಿಗಲು ತನ್ನ ಮಹಾನಟಿ ಚಿತ್ರದ ಸಹ-ನಟಿ ಸಮಂತಾ ರುತ್ ಪ್ರಭು ಕಾರಣ ಎಂದು ಹೇಳಿದ್ದಾರೆ.
ಬೇಬಿ ಜಾನ್ 2016ರಲ್ಲಿ ಬಂದಿದ್ದ ದಳಪತಿ ವಿಜಯ್ ಅಭಿನಯದ ಥೇರಿ ಚಿತ್ರದ ಹಿಂದಿ ರಿಮೇಕ್ ಆಗಿದೆ. ಇದರೊಂದಿಗೆ ಶಾರುಖ್ ಖಾನ್ ಮತ್ತು ನಯನತಾರಾ ಅಭಿನಯದ ಜವಾನ್ ಚಿತ್ರದ ಮೂಲಕ ದೊಡ್ಡ ಗೆಲುವನ್ನು ಕಂಡ ಮತ್ತು ಥೇರಿ ಚಿತ್ರವನ್ನು ನಿರ್ದೇಶಿಸಿದ್ದ ಅಟ್ಲಿ ಈ ಚಿತ್ರವನ್ನು ನಿರ್ಮಿಸಿದ್ದಾರೆ.
ಕುತೂಹಲಕಾರಿಯಾಗಿ, ಅಟ್ಲೀ ಅವರ 2016ರ ಬ್ಲಾಕ್‌ಬಸ್ಟರ್ ಚಿತ್ರ ಥೇರಿಯಲ್ಲಿ ಸಮಂತಾ ನಿರ್ವಹಿಸಿದ ಪಾತ್ರವನ್ನು ಬೇಬಿ ಜಾನ್‌ನಲ್ಲಿ ಕೀರ್ತಿ ಸುರೇಶ್ ನಿರ್ವಹಿಸಿದ್ದಾರೆ. ಬೇಬಿ ಜಾನ್ ಚಿತ್ರಕ್ಕಾಗಿ ಹುಟುಕಾಟ ನಡೆಯುತ್ತಿರುವಾಗ ಸಮಂತಾ ಅವರು ಈ ಪಾತ್ರಕ್ಕೆ ನಾನು ಸೂಕ್ತ ಎಂಬುದನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದರು. ವರುಣ್ ಅವರು ನನಗೆ ಇದನ್ನೇ ಹೇಳಿದರು. ಈ ಅವಕಾಶ ಕೊಡಿಸಿದ್ದಕ್ಕಾಗಿ ನಾನು ಕೃತಜ್ಞಳಾಗಿದ್ದೇನೆ. ಥೇರಿ ಚಿತ್ರವು ತಮಿಳಿನಲ್ಲಿ ನನ್ನ ಮೆಚ್ಚಿನ ಚಿತ್ರಗಳಲ್ಲಿ ಒಂದಾಗಿದೆ. ಸಮಂತಾ ನಿರ್ವಹಿಸಿದ್ದ ಈ ಪಾತ್ರಕ್ಕೆ ಕೀರ್ತಿ ಸೂಕ್ತ ಎಂದು ಅವರು ಹೇಳಿರುವುದು ದೊಡ್ಡ ವಿಚಾರ. ಹೀಗಾಗಿ, ಈ ಪಾತ್ರವನ್ನು ನಿಭಾಯಿಸುವ ವಿಚಾರದಲ್ಲಿ ನಾನು ತುಂಬಾ ಹೆದರಿದ್ದೆ' ಎಂದು ಕೀರ್ತಿ ಹೇಳಿದ್ದಾರೆ.
ಬೇಬಿ ಜಾನ್‌ನ ಟ್ರೇಲರ್ ನೋಡಿದ ನಂತರ ಅವರು ಇನ್‌ಸ್ಟಾಗ್ರಾಂನಲ್ಲಿ ಸ್ಟೋರಿಯನ್ನು ಪೋಸ್ಟ್ ಮಾಡಿದ್ದು ನನಗೆ ನೆನಪಿದೆ. ನಾನು ಇದನ್ನು ಬೇರೆ ಯಾರೊಂದಿಗೂ ಹಂಚಿಕೊಳ್ಳುತ್ತಿರಲಿಲ್ಲ, ಆದರೆ, ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ ಎಂದು ಬರೆದಿದ್ದರು. 'ಅದು ತುಂಬಾ ಉತ್ತಮವಾಗಿತ್ತು ಮತ್ತು ಇದಕ್ಕಿಂತ ಬೇರೇನನ್ನು ಬಯಸಲು ಸಾಧ್ಯವಿಲ್ಲ. ಇದು ನಾನು ನಿಜವಾಗಿಯೂ ಇಷ್ಟಪಡುವ ಪಾತ್ರಗಳಲ್ಲಿ ಒಂದಾಗಿದೆ ಮತ್ತು ಹಿಂದಿ ಆವೃತ್ತಿಯಲ್ಲಿ ಅದೇ ಪಾತ್ರದಲ್ಲಿ ನಟಿಸಿರುವುದು ನನಗೆ ಖುಷಿ ನೀಡಿದೆ' ಎಂದಿದ್ದಾರೆ.
ಕೀರ್ತಿ ಸುರೇಶ್ ಮತ್ತು ಸಮಂತಾ ಅವರು ನಾಗ ಅಶ್ವಿನ್ ನಿರ್ದೇಶನದ 2018ರ ಮಹಾನಟಿ ಚಿತ್ರದಲ್ಲಿ ತೆರೆ ಹಂಚಿಕೊಂಡಿದ್ದರು. ಆ ಚಿತ್ರದ ನಟನೆಗಾಗಿ ಕೀರ್ತಿ ಸುರೇಶ್ ಅವರಿಗೆ ಅತ್ಯುತ್ತಮ ನಟಿ ವಿಭಾಗದಲ್ಲಿ ರಾಷ್ಟ್ರ ಪ್ರಶಸ್ತಿ ಲಭಿಸಿದೆ.
ಕುತೂಹಲಕಾರಿಯಾಗಿ, ಸಿಟಾಡೆಲ್: ಹನಿ ಬನ್ನಿಯಲ್ಲಿ ಸಮಂತಾ ಇತ್ತೀಚೆಗೆ ವರುಣ್ ಧವನ್ ಜೊತೆ ಕೆಲಸ ಮಾಡಿದ್ದಾರೆ. ಹಿಂದೂಸ್ತಾನ್ ಟೈಮ್ಸ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ವರುಣ್, ಸಮಂತಾ ತಮ್ಮನ್ನು ನಿಜವಾಗಿಯೂ ಹೇಗೆ ಪ್ರೇರೇಪಿಸಿದರು ಎಂಬುದನ್ನು ಬಹಿರಂಗಪಡಿಸಿದ್ದಾರೆ.
'ಸಿಟಾಡೆಲ್: ಹನಿ ಬನ್ನಿ ಮತ್ತು ಬೇಬಿ ಜಾನ್ ನನಗೆ ಸಮಂತಾ ಅವರಿಂದಲೇ ಸಾಧ್ಯವಾಯಿತು. ನಾವು ಅದರ ಕುರಿತು ಮಾತನಾಡಿದ್ದೇವೆ ಮತ್ತು ಅದು ಸಂಭವಿಸಿತು. ಅದಕ್ಕಾಗಿ ನಾನು ಸಮಂತಾಗೆ ಧನ್ಯವಾದ ಹೇಳಬೇಕು. ನಾನು ಸರಿಯಾದ ಹಾದಿಯಲ್ಲಿದ್ದೇನೆ ಎಂದು ಅವರು ನನಗೆ ಸಾಕಷ್ಟು ವಿಶ್ವಾಸವನ್ನು ತುಂಬಿದರು. ಇದು ಬಹಳ ಮುಖ್ಯ' ಎಂದು ವರುಣ್ ಹೇಳಿದರು. ಸಮಂತಾ ಈ ಕ್ರೆಡಿಟ್ ಅನ್ನು ಒಪ್ಪಿಕೊಂಡರು ಮತ್ತು ಇದು ವರುಣ್‌ಗೆ ನನ್ನ ಅಭಿವ್ಯಕ್ತಿ. ಇದು ವರುಣನ ವರ್ಷ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.
ಬೇಬಿ ಜಾನ್ ಚಿತ್ರದಲ್ಲಿ ಜಾಕಿ ಶ್ರಾಫ್, ವಾಮಿಕಾ ಗಬ್ಬಿ ಮತ್ತು ರಾಜ್‌ಪಾಲ್ ಯಾದವ್ ಕೂಡ ನಟಿಸಿದ್ದಾರೆ.
Advertisement